Advertisement

ಅಧಿಕಾರದಿಂದ ಬಿಎಸ್‌ವೈ ಇಳಿಸಿದ್ದೇ ಆರ್‌ಎಸ್ಸೆಸ್‌ : ಎಚ್‌ಡಿಕೆ

04:02 PM Oct 10, 2021 | Team Udayavani |

ಹಾಸನ/ಸಕಲೇಶಪುರ: ಆರ್‌ಎಸ್ಸೆಸ್‌ ಬಗ್ಗೆ ನಾನು ಆಡಿರುವ ಮಾತುಗಳಿಗೆ ಬದ್ಧನಿದ್ದೇನೆ. ಮಾತನಾಡುವುದು ಇನ್ನೂ ಬಹಳಷ್ಟಿದೆ, ಹಿಟ್‌ ಅಂಡ್‌ ರನ್‌ ಪಾಲಿಸಿ ನನ್ನದಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಪ್ರತಿಕ್ರಿಯಿಸಿ ದರು. ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಇಳಿಯಲೂ ಆರ್‌ಎಸ್ಸೆಸ್‌ ಕಾರಣ.

Advertisement

ತುವಕೂರು ಗ್ರಾಮಾಂತದ ಮಾಜಿ ಶಾಸಕ ಸುರೇಶ್‌ ಗೌಡ ಅವರೇ ಆರ್‌ಎಸ್ಸೆಸ್‌ ಬಗ್ಗೆ ನನಗಿಂತ ಹೆಚ್ಚು ಮಾತನಾಡಿದ್ದಾರೆ. ನಾನು ಮುಂದಿನ ದಿನಗಳಲ್ಲಿ ಮತ್ತಷ್ಟು ವಿವರವಾಗಿ ಆರ್‌ಎಸ್ಸೆಸ್‌ ಬಗ್ಗೆ ಹೇಳುವೆ ಎಂದರು. 2 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವಉಪಚುನಾವಣೆಯಲ್ಲಿ ಜೆಡಿಎಸ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಸಿಂಧಗಿಯಲ್ಲಿ ಕಾಂಗ್ರೆಸ್‌ 3ನೇ ಸ್ಥಾನದಲ್ಲಿದೆ. ಕಾಂಗ್ರೆಸ್‌ಗೆ ಅಭ್ಯರ್ಥಿಗಳೇ ಇರಲಿಲ್ಲ. ಹಾಗಾಗಿ ನಮ್ಮ ಪಕ್ಷದಲ್ಲಿದ್ದವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡು ಸ್ಪರ್ಧೆಗಿಳಿಸಿದ್ದಾರೆ. ಮಾಜಿ ಸಚಿವ ಮನಗೂಳಿ ಅವರು ದೇವೇಗೌಡರಸಹೋದರನಂತಿದ್ದರು. ಅವರು ಸಿಂಧಗಿ ಕ್ಷೇತ್ರದಲ್ಲಿ ದೇವೇಗೌಡ ಪುತ್ಥಳಿ ಸ್ಥಾಪನೆ ಮಾಡಿದ್ದಾರೆ. ಅಂತಹ ಪಕ್ಷ ಬದ್ಧತೆಯ ಮನಗೂಳಿ ಅವರು ಮಗನನ್ನು ಕಾಂಗ್ರೆಸ್‌ ಮಡಿಲಿಗೆ ಹಾಕಿ ಹೋಗಿದ್ದರಂತೆ.

ಇದನ್ನೂ ಓದಿ:- ಅಮೃತಾಂಜನ್‍ ರಾಯಭಾರಿಗಳಾಗಿ ಒಲಿಂಪಿಕ್‍ ಪದಕ ವಿಜೇತ ಮೀರಾಬಾಯಿ ಚಾನು ಮತ್ತು ಪುನಿಯಾ

ಮನಗೂಳಿ ಯಾವಾಗ ಡಿ.ಕೆ.ಶಿವಕುಮಾರ್‌ ಮನೆಗೆ ಹೋಗಿದ್ದರು? ಇಷ್ಟೋಂದು ಹಸಿ ಸುಳ್ಳು ಹೇಳಿಕೊಂಡು ಕೀಳು ಮಟ್ಟದ ರಾಜಕಾರಣ ಮಾಡುವುದು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ ಎಂದು ತರಾಟೆಗೆ ತೆಗೆದುಕೊಂಡರು.

Advertisement

ಎಚ್‌ಡಿ.ಕುಮಾರಸ್ವಾಮಿಗೆ ಕೇಸರಿ ಧ್ವಜ ಪ್ರದರ್ಶನ-  ಆರ್‌ಎಸ್ಸೆಸ್‌ ವಿರುದ್ಧವಾಗಿ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಮಾತನಾಡುತ್ತಿರುವ ಬೆನ್ನಲ್ಲೇ ಸಕಲೇಶಪುರದಲ್ಲಿ ಆರ್‌ಎಸ್ಸೆಸ್‌ನ ಕೆಲ ಕಾರ್ಯಕರ್ತರು ಕುಮಾರಸ್ವಾಮಿ ಅವರ ಎದುರು ಕೇಸರಿ ಧ್ವಜ ಹಿಡಿದು ನಾನು ಆರ್‌ಎಸ್ಸೆಸ್‌ ಎಂದು ಕೂಗಿದ ಪ್ರಸಂಗ ನಡೆಯಿತು.

ಸಕಲೇಶಪುರ ಪ್ರವಾಸಿ ಮಂದಿದರಿಂದ ಮುಖ್ಯ ರಸ್ತೆಗೆ ಬರುತ್ತಿದ್ದಾಗ ಮೂರ್‍ನಾಲ್ಕು ಆರ್‌ಎಸ್ಸೆಸ್‌ ಕಾರ್ಯಕರ್ತರು ಎಚ್‌ಡಿಕೆ ಕಾರಿಗೆ ಅಡ್ಡಬಂದು ಧ್ವಜ ಪ್ರದರ್ಶಿಸಿದರು. ಪೊಲೀಸರು ಆರ್‌ಎಸ್ಸೆಸ್‌ ಕಾರ್ಯಕರ್ತರನ್ನು ದೂರ ತಳ್ಳಿ ಎಚ್‌ಡಿಕೆ ಯವರು ಮುಂದೆ ಸಾಗಲು ಅನುವು ಮಾಡಿಕೊಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next