Advertisement

ಕುಮಾರಸ್ವಾಮಿ ತಾಳ್ಮೆ ಕಳೆದುಕೊಂಡಿದ್ದಾರೆ, ಏನೇನೋ ಮಾತಾಡುತ್ತಾರೆ: ಬಸವರಾಜ್ ಹೊರಟ್ಟಿ

03:24 PM Jan 05, 2021 | Team Udayavani |

ಬೆಂಗಳೂರು: ಕುಮಾರಸ್ವಾಮಿ ಈಗ ತಾಳ್ಮೆ ಕಳೆದುಕೊಂಡಿದ್ದಾರೆ. ಹಾಗಾಗಿಯೇ ಏನೇನೋ ಮಾತನಾಡುತ್ತಿದ್ದಾರೆ ಎಂದು ಜೆಡಿಎಸ್ ಹಿರಿಯ ನಾಯಕ ಬಸವರಾಜ್ ಹೊರಟ್ಟಿ ಸ್ವಪಕ್ಷದ ನಾಯಕನ ವಿರುದ್ಧ ಹೇಳಿಕೆ ನೀಡಿದ್ದಾರೆ.

Advertisement

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಕುಮಾರಸ್ವಾಮಿ ಸರಣಿ ಹೇಳಿಕೆಗಳ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

ಮೊದಲು ಕುಮಾರಸ್ವಾಮಿ ಅವರಿಗೆ ತುಂಬಾ ತಾಳ್ಮೆಯಿತ್ತು. ಅವರಷ್ಟು ಸಮಾಧಾನದ ವ್ಯಕ್ತಿ ಬೇರೆಯವರು ಇಲ್ಲ ಎಂಬಂತ್ತಿದ್ದರು. ಆದರೆ, ಇತ್ತೀಚೆಗೆ ಅದನ್ನು ಕಳೆದುಕೊಂಡಿದ್ದಾರೆ. ಪ್ರತಿಯೊಂದಕ್ಕೂ ಹೇಳಿಕೆ ಕೊಡುತ್ತಾರೆ. ಅವರು ಮೊದಲಿನಂತೆ ಇಲ್ಲ ಎಂದರು.

ಇದನ್ನೂ ಓದಿ:ರಾಷ್ಟ್ರೀಯ ಪಕ್ಷಗಳು JDS ಮುಖಂಡರ ಕಾಲು ಹಿಡಿಯುವುದು ಬಿಟ್ಟು ಮರ್ಯಾದೆ ಉಳಿಸಿಕೊಳ್ಳಲಿ: HDK

ಅವರನ್ನು ಭೇಟಿ ಮಾಡಿ ನಾನು ಸಲಹೆಗಳನ್ನು ಕೊಡುತ್ತೇನೆ. ಯಾವುದೇ ಕಾರಣಕ್ಕೂ ತಾಳ್ಮೆ ಕಳೆದುಕೊಳ್ಳಬಾರದು. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ನನ್ನ ಮೇಲೆ ವಿಶ್ವಾಸ ಇಟ್ಟಿದ್ದಾರೆ. ಸಭಾಪತಿಯನ್ನಾಗಿ ಮಾಡುವುದಾಗಿ ಹೇಳಿದ್ದಾರೆ.  ನನಗೆ ಇದೊಂದು ಬಾರಿ ಅವಕಾಶ ಕೊಡಿಸುವುದಾಗಿ ಹೇಳಿದ್ದಾರೆ. ನೋಡೋಣ ಏನಾಗಲಿದೆಯೋ ಎಂದು ಹೊರಟ್ಟಿ ಹೇಳಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next