Advertisement

HDK ಸಂದರ್ಶನ ವೈರಲ್; ನಿಮ್ಮ ಪತ್ನಿ ಮೂಲ ಯಾವುದು? ಅಂಬಿ ಅಭಿಮಾನಿಗಳು

12:57 PM Feb 05, 2019 | Team Udayavani |

ಮಂಡ್ಯ/ಬೆಂಗಳೂರು:ನಟ ದಿ. ಅಂಬರೀಶ್ ಪತ್ನಿ ಸುಮಲತಾ ಗೌಡ್ತಿ ಅಲ್ಲ ಎಂಬ ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪತ್ನಿ ಅನಿತಾ ಬಗ್ಗೆ ನೀಡಿರುವ ವಿಡಿಯೋವನ್ನು ವೈರಲ್ ಮಾಡುವ ಮೂಲಕ ಅಂಬರೀಶ್ ಅಭಿಮಾನಿಗಳು ತಿರುಗೇಟು ನೀಡಿದ್ದಾರೆ.

Advertisement

ಪುತ್ರ ನಿಖಿಲ್ ಕುಮಾರ್ ಅಭಿನಯದ ಜಾಗ್ವಾರ್ ಸಿನಿಮಾದ ಕುರಿತು ಆಂಧ್ರ ಮೂಲದ ಖಾಸಗಿ ಟಿವಿ ಚಾನೆಲ್ ವೊಂದಕ್ಕೆ ಕುಮಾರಸ್ವಾಮಿ ನೀಡಿದ್ದ ಸಂದರ್ಶನದಲ್ಲಿ, ನನ್ನ ಪತ್ನಿ ಅನಿತಾ ಮೂಲ ಕೂಡಾ ಆಂಧ್ರ. ಆಕೆಯ ಅಜ್ಜ, ಅಜ್ಜಿ, ತಂದೆ ಎಲ್ಲಾ ಕೋಲಾರದಲ್ಲಿದ್ದವರು ಎಂದು ಹೇಳಿದ್ದರು.

ಇದೀಗ ಸುಮಲತಾ ಗೌಡ್ತಿ ಅಲ್ಲ, ಆಂಧ್ರ ಮೂಲದವರು ಎಂಬ ಜೆಡಿಎಸ್ ವಿಧಾನಪರಿಷತ್ ಸದಸ್ಯ ಕೆಟಿ ಶ್ರೀಕಂಠೇಗೌಡ ನೀಡಿರುವ ಹೇಳಿಕೆ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಅಂಬಿ ಅಭಿಮಾನಿಗಳು ಇದೀಗ ಕುಮಾರಸ್ವಾಮಿಯವರು ತನ್ನ ಪತ್ನಿ ಆಂಧ್ರ ಮೂಲದವಳು ಎಂದು ಹೇಳಿರುವ ವಿಡಿಯೋ ತುಣುಕ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವ ಮೂಲಕ ಚರ್ಚೆ ಎಡೆಮಾಡಿಕೊಟ್ಟಿದೆ.

Advertisement

Udayavani is now on Telegram. Click here to join our channel and stay updated with the latest news.

Next