Advertisement

ಎಚ್‌ಡಿಕೆ ಬಿರುಸಿನ ಚಟುವಟಿಕೆ, ದೇವಾಲಯಗಳತ್ತ; 24 ಕ್ಕೇ ವಿಶ್ವಾಸಮತ

11:26 AM May 20, 2018 | Team Udayavani |

 ಬೆಂಗಳೂರು : ಕಾಂಗ್ರೆಸ್‌-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ನಿಯೋಜಿತ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ಜೆ.ಪಿ.ನಗರದ ನಿವಾಸದಲ್ಲಿ  ರಾಜಕೀಯ ಮತ್ತು ಆಡಳಿತಾತ್ಮಕ ಚಟುವಟಿಕೆಗಳು ಬಿರುಸುಗೊಂಡಿದ್ದು, ಸಾವಿರಾರು ಅಭಿಮಾನಿಗಳು ನಿವಾಸದತ್ತ ದೌಡಾಯಿಸಿ ಭಾವೀ ಮುಖ್ಯಮಂತ್ರಿಗೆ ಅಭಿನಂದಿಸಲು ಹಾತೋರೆಯುತ್ತಿದ್ದಾರೆ. ನಿವಾಸದ ಬಳಿ ಭದ್ರತೆ ಬಿಗಿ ಗೊಳಿಸಲಾಗಿದ್ದು ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದೆ. 

Advertisement

ಶ್ರೀರಂಗಂ ದೇವಾಲಯದತ್ತ ಎಚ್‌.ಡಿ.ಬ್ರದರ್ಸ್‌ 
ವಾಡಿಕೆಯಂತೆ ತಮಿಳುನಾಡಿನ ತಿರುಚ್ಚಿಯಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀಂಗಂ ದೇವಾಲಕ್ಕೆ ಎಚ್‌ಡಿಕೆ ಅವರು ಇಂದು ಭಾನುವಾರ ತೆರಳಿ ವಿಶೇಷ ಪೂಜೆ ಸಲ್ಲಿಸಲಿದ್ದು, ಅವರೊಂದಿಗೆ ಎಚ್‌.ಡಿ.ರೇವಣ್ಣ ಅವರು ತೆರಳುತ್ತಿದ್ದಾರೆ. 

ನಾಳೆ ದೆಹಲಿಗೆ; ಸೋನಿಯಾ,ರಾಹುಲ್‌ ಭೇಟಿ 
ಸೋಮವಾರ ಎಚ್‌ಡಿಕೆ ಅವರು ಇತರ ಕೆಲ ಮುಖಂಡರೊಂದಿಗೆ ದೆಹಲಿಗೆ ತೆರಳಿ ಸೋನಿಯಾ ಗಾಂಧಿ ಮತ್ತು ಕಾಂಗ್ರೆಸ್‌ ಅಧ್ಯಕ್ಷ  ರಾಹುಲ್‌ ಗಾಂಧಿ ಅವರೊಂದಿಗೆ ಸಚಿವ ಸ್ಥಾನ ಹಂಚಿಕೆಯ ಬಗ್ಗೆ ಚರ್ಚೆ ನಡೆಸಲಿದ್ದಾರೆ. 

ಬುಧವಾರ ಪ್ರಮಾಣ ವಚನ 
ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ  ಎಚ್‌ಡಿಕೆ ಅವರು 2 ನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಗುರುವಾರ ಸದನದಲ್ಲಿ ಸ್ಪೀಕರ್‌ ಆಯ್ಕೆ ನಡೆದ ಬಳಿಕ ವಿಶ್ವಾಸಮತವನ್ನೂ ಸಾಬೀತು ಪಡಿಸುವುದಾಗಿ ಅವರು ಹೇಳಿದ್ದಾರೆ. 

ಮಂಡ್ಯ,ಮೈಸೂರು, ಹಾಸನ, ರಾಮನಗರ ಮತ್ತು ರಾಜ್ಯದ ವಿವಿಧ ಕಡೆಗಳಿಂದ ಸಾವಿರಾರು ಮಂದಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ ಕಾರ್ಯಕರ್ತರು ಮತ್ತು ಎಚ್‌ಡಿಕೆ ಅಭಿಮಾನಿಗಳು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಎನ್ನಲಾಗಿದೆ. 

Advertisement

ಸಿಎಸ್‌, ಐಜಿ&ಡಿಐಜಿ ಜೊತೆ ಚರ್ಚೆ
ನಿಯೋಜಿತ ಸಿಎಂ ಎಚ್‌ಡಿಕೆ ಅವರ ನಿವಾಸಕ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನ ಪ್ರಭಾ, ಪೊಲೀಸ್‌ ಮಹಾ ನೀರ್ದೇಶಕಿ ನೀಲಮಣಿ ಎನ್‌.ರಾಜು, ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಸುನೀಲ್‌ ಕುಮಾರ್‌ ಅವರು ಭೇಟಿ ನೀಡಿ 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದ್ದಾರೆ. ಪ್ರಮಾಣ ವಚನ ಕಾರ್ಯಕ್ರಮಕ್ಕೆ ಭದ್ರತೆ ನೀಡುವ ಕುರಿತಾಗಿಯೂ ಚರ್ಚೆ ನಡೆಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next