Advertisement

ಕ್ರೆಡಿಟ್ ಕಾರ್ಡ್‌ ವಿತರಣೆಗೆ ಎಚ್ ಡಿ ಎಫ್ ಸಿ ಬ್ಯಾಂಕ್ ಗೆ ಆರ್ ಬಿ ಐ ಅನುಮತಿ..!?

03:32 PM Aug 19, 2021 | |

ನವ ದೆಹಲಿ : ದೇಶದ ಅತ್ಯಂತ ದೊಡ್ಡ ನಾಗರಿಕ ಖಾಸಗಿ ವಲಯದ  ಎಚ್‌ ಡಿಎಫ್‌  ಸಿ ಬ್ಯಾಂಕ್‌ಗೆ  ಹೊಸ ಕ್ರೆಡಿಟ್ ಕಾರ್ಡ್‌ಗಳನ್ನು ವಿತರಣೆ ಮಾಡುವುದಕ್ಕೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು (ಆರ್‌ಬಿಐ) ಅನುಮತಿ ನೀಡಿದೆ.

Advertisement

ಎಚ್‌ ಡಿಎಫ್‌ಸಿ ಬ್ಯಾಂಕ್​ನಿಂದ ಹೊಸ ಕ್ರೆಡಿಟ್ ಕಾರ್ಡ್‌ ಗಳನ್ನು ನೀಡದಂತೆ ಮತ್ತು ಡಿಜಿಟಲ್ 2.0 ಕಾರ್ಯಕ್ರಮದ ಅಡಿಯಲ್ಲಿ ತನ್ನ ಡಿಜಿಟಲ್ ವ್ಯವಹಾರ ಚಟುವಟಿಕೆಗಳು ಎಲ್ಲ ಆರಂಭಗಳನ್ನು ನಿಲ್ಲಿಸುವಂತೆ ಕಳೆದ ವರ್ಷ ಡಿಸೆಂಬರ್‌ ನಲ್ಲಿ ಆರ್ ​ಬಿಐ ನಿರ್ದೇಶಿಸಿತ್ತು.

ಈ ಬಗ್ಗೆ ಮಾಹಿತಿ ನೀಡಿದ ಬ್ಯಾಂಕ್ ನ ಮೂಲಗಳು , “ಹೊಸ ಕಾರ್ಡ್‌ ಗಳನ್ನು ನೀಡುವುದಕ್ಕಿದ್ದ ನಿರ್ಬಂಧಗಳನ್ನು ಅಂತಿಮಗೊಳಿಸಿ ಹಾಗೂ ಹೊಸ ಕ್ರೆಡಿಟ್ ಕಾರ್ಡ್‌ ಗಳ ಸೋರ್ಸಿಂಗ್ ನನ್ನು ತೆಗೆದುಕೊಳ್ಳಲು  ಆರ್‌ ಬಿಐ ಈಗ ಬ್ಯಾಂಕ್‌ ಗೆ ಅನುಮತಿಸಿದೆ” ಎಂದು ತಿಳಿಸಿವೆ.

ಇದನ್ನೂ ಓದಿ : ಅಫ್ಘಾನಿಸ್ತಾನದ ಬಹುಕೋಟಿ ಸಂಪತ್ತು ತಾಲಿಬಾನ್ ಉಗ್ರರ ಕೈಗೆ ಸಿಗದು!

ಎಚ್‌ ಡಿಎಫ್‌ ಸಿ ಬ್ಯಾಂಕ್ ದೇಶದ ಅತಿದೊಡ್ಡ ಕ್ರೆಡಿಟ್ ಕಾರ್ಡ್ ನೀಡುವ ಸಂಸ್ಥೆಯಾಗಿದೆ ಮತ್ತು ನಿಷೇಧದ ನಂತರವೂ ಅದೇ ಸ್ಥಾನದಲ್ಲಿಯೇ ಉಳಿಕೊಂಡಿದೆ ಎನ್ನುವುದು ಬ್ಯಾಂಕ್ ನ ಹಿರಿಮೆ.

Advertisement

ಕಳೆದ ಜೂನ್‌ ನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ, ಬ್ಯಾಂಕ್​ನ ಪೇಮೆಂಟ್ ವ್ಯವಹಾರದ ದೇಶದ ಮುಖ್ಯಸ್ಥ ಮತ್ತು ತಂತ್ರಜ್ಞಾನ ಪರಿವರ್ತನೆಯ ಉಸ್ತುವಾರಿ ಪರಾಗ್ ರಾವ್ ಪ್ರತಿಕ್ರಿಯಿಸಿ, ಕ್ರೆಡಿಟ್ ಕಾರ್ಡ್ ವ್ಯವಹಾರದ ನಿರ್ಬಂಧ ತೆಗೆದರೆ ಆಕ್ರಮಣಕಾರಿಯಾಗಿ ಮರಳಲು ಬ್ಯಾಂಕ್ ಯೋಜನೆಯನ್ನು ಸಿದ್ಧಪಡಿಸಿದೆ ಎಂದಿದ್ದರು.

ಇನ್ನು, ಎಚ್ ಡಿ ಎಫ್ ಸಿ ಬ್ಯಾಂಕ್ ಗೆ  ನಿಯಮಾವಳಿಗಳನ್ನು ಸಮಾಧಾನಕರವಾಗಿ ಅನುಸರಿಸುತ್ತಿದ್ದಲ್ಲಿ ಮಾತ್ರ ಪರಿಶೀಲನೆಯ ಬಳಿಕ ನಿರ್ಬಂಧಗಳನ್ನು ತೆರೆವುಗೊಳಿಸಲಾಗುವುದು ಎಂದು ಆರ್ ​ಬಿಐ ನಿರ್ಬಂಧಗಳನ್ನು ವಿಧಿಸುವಾಗಲೇ ತಿಳಿಸಿತ್ತು.

ನಿಷೇಧದ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್ ತಕ್ಷಣದ, ಅಲ್ಪಾವಧಿ, ಮಧ್ಯಾವಧಿ ಮತ್ತು ದೀರ್ಘಾವಧಿಯ ಮೇಲೆ ಕೇಂದ್ರೀಕರಿಸುವ ಯೋಜನೆಯನ್ನು ಕೆಲವು ತಿಂಗಳ ಹಿಂದೆ ಆರ್​ಬಿಐಗೆ ಸಲ್ಲಿಸಿತ್ತು.

ಇನ್ನು ಈ ಬಗ್ಗೆ 2020ರ ಡಿಸೆಂಬರ್​ನಲ್ಲಿ ನಿಷೇಧ ಹೇರಿದ ನಂತರ ಎಚ್‌ಡಿಎಫ್‌ಸಿ ಬ್ಯಾಂಕ್‌ನ ಎಂ.ಡಿ. ಮತ್ತು ಸಿಇಒ ಶಶಿ ಜಗದೀಶನ್, “ಸುಧಾರಣಾಭಿವೃದ್ಧಿಗಾಗಿ ಗುರುತಿಸಲಾದ ಸಂಗತಿಗಳನ್ನು ಬಲಪಡಿಸುವ ಉದ್ದೇಶದಿಂದ ನಾವು ತಜ್ಞರು ಮತ್ತು ನಿಯಂತ್ರಕರೊಂದಿಗೆ ಕೆಲಸ ಮಾಡುತ್ತೇವೆ. ಆಂತರಿಕವಾಗಿ ನಮ್ಮನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಮತ್ತು ಬಲಶಾಲಿಯಾಗಿ ಹೊರಹೊಮ್ಮಲು ಇದೊಂದು ಅವಕಾಶ ಎಂದು ನಂಬುತ್ತೇವೆಂದು ಹೇಳಿದ್ದರು.

ಇದನ್ನೂ ಓದಿ :  ಕಾಗಿನಲೆ ಸ್ವಾಮೀಜಿ ಆರ್ಶಿವಾದ ಪಡೆದ ಕೇಂದ್ರ ಸಚಿವ ನಾರಾಯಣಸ್ವಾಮಿ: ಎಸ್ ಟಿ ಮೀಸಲಾತಿ ಚರ್ಚೆ

Advertisement

Udayavani is now on Telegram. Click here to join our channel and stay updated with the latest news.

Next