Advertisement
ಹೊಳೆನರಸೀಪುರದಲ್ಲಿ ಮಾತನಾಡಿ, ದೇಶದ ಮೊದಲ ಪ್ರಧಾನಿಯಾಗಿ ನೆಹರೂ ಅವರೂ ಕೊಡುಗೆ ನೀಡಿದ್ದಾರೆ. ಮೋದಿಯವರಿಗೆ ಎಲ್ಲವನ್ನೂ ನಾನೇ ಮಾಡಿದೆ ಎಂಬ ಗರ್ವ ಬೇಡ. ಗರ್ವಭಂಗ ಆಗುತ್ತದೆ. ಮೋದಿಯವರು ನನ್ನನ್ನು ಸೋ ಕಾಲ್ಡ್ ಸನ್‌ಆಫ್ ದಿ ಸಾಯಿಲ್ ಎಂದು ವ್ಯಂಗ್ಯವಾಡುತ್ತಾರೆ. ಮಣ್ಣಿನ ಮಗ ಎಂದು ನಾನು ಘೋಷಿಸಿಕೊಂಡಿಲ್ಲ, ಜನರೇ ನನ್ನನ್ನು ಮಣ್ಣಿನ ಮಗ ಎಂದು ಕರೆದಿದ್ದಾರೆ. ಅದಕ್ಕೆ ವ್ಯಂಗ್ಯ ಬೇಡ ಎಂದರು. ಮುಖ್ಯಮಂತ್ರಿ ಸ್ಥಾನ, ಕುಮಾರ ಸ್ವಾಮಿಗೆ ದೇವರು ಕೊಟ್ಟ ವರ. ಜತೆಗೆ ಶಿಕ್ಷೆಯೂ ಇದೆ. ಅತ್ಯಂತ ನೋವಿನಿಂದ ಮುಖ್ಯಮಂತ್ರಿಯಾಗಿದ್ದಾರೆ ಎಂದರು. ಸಂಸತ್ತಿನ ಬಜೆಟ್ ಅಧಿವೇಶನವನ್ನು ಕೇವಲ 9 ದಿನ ನಡೆಸಿದ್ದನ್ನು ನನ್ನ ರಾಜಕೀಯ ಜೀವನದಲ್ಲಿ ನೋಡಿಲ್ಲ. ಸಂಸತ್ತಿನಲ್ಲಿ ನನ್ನ ಕೊನೆಯ ಭಾಷಣಕ್ಕೂ ಹೆಚ್ಚು ಸಮಯ ನೀಡಲಿಲ್ಲ. ಸೋಮವಾರ ಸಂಸತ್ತಿಗೆ ಹೋಗುತ್ತೇನೆ. ನಾನು ಏನು ಹೇಳಬೇಕೆಂ ದಿದ್ದೇನೆಯೋ ಅದನ್ನು ಹೇಳುತ್ತೇನೆ ಎಂದು ದೇವೇಗೌಡ ಹೇಳಿದರು. Advertisement
ಪ್ರಧಾನಿ ಮೋದಿಗೆ ಗರ್ವ
01:47 AM Feb 10, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.