Advertisement

ಎಚ್‌ಡಿ.ಕೋಟೆ ತಾಲೂಕಿನ 55 ಗ್ರಾಮಗಳು ಸೇರ್ಪಡೆ

01:01 PM Mar 03, 2017 | |

ಮೈಸೂರು: ಪಶ್ಚಿಮಘಟ್ಟ ಪರ್ವತ ಶ್ರೇಣಿಯ ವ್ಯಾಪ್ತಿಯಲ್ಲಿ ಬರುವ ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲೂಕು ಹಾಗೂ ಕೊಡಗು ಮೂರು ತಾಲೂಕುಗಳಲ್ಲಿನ 112 ಗ್ರಾಮಗಳನ್ನು ಪರಿಸರ ಸೂಕ್ಮ ಪ್ರದೇಶ ವನ್ನಾಗಿ ಘೋಷಿಸುವ ಸಂಬಂಧ ಕೇಂದ್ರ ಅರಣ್ಯ ಮತ್ತು ಪರಿಸರ ಮಂತ್ರಾಲಯ ಕರಡು ಅಧಿಸೂಚನೆ ಹೊರಡಿಸಿ ಸಾರ್ವಜನಿಕ ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

Advertisement

ಮೈಸೂರು ಜಿಲ್ಲೆಯ ಎಚ್‌.ಡಿ.ಕೋಟೆ ತಾಲೂಕಿನ ರಾಜೇಗೌಡನ ಹುಂಡಿ, ಸೊಳ್ಳೆಪುರ, ಗೌಡಿ ಮಂಚನಾಯಕನಹಳ್ಳಿ, ಸಿದ್ದಾಪುರ, ಮೇಟಿಕುಪ್ಪೆ ಫಾರೆಸ್ಟ್‌, ಅಗಸನ ಹುಂಡಿ, ಮೇಟಿಕುಪ್ಪೆ, ಮೇಟಿಕುಪ್ಪೆ ಕಾವಲ್‌, ಅಮಣಿ ಜಂಗಲ್‌, ಹಿರೇಹಳ್ಳಿ, ಹೊನ್ನೂರು ಕುಪ್ಪೆ, ಅಂತರ ಸಂತೆ, ರಾಗಳಕುಪ್ಪೆ, ಮಂಚೇಗೌಡನ ಹಳ್ಳಿ, ಕಾಕನಕೋಟೆ ಫಾರೆಸ್ಟ್‌, ಕೋಣನ ಲತ್ತೂರು, ಎನ್‌.ಬೆಳೂ¤ರು, ನಿಸ್ನಾ, ಬೇಗೂರು, ಕೆಂಚನಹಳ್ಳಿ, ಹರಿಯಾಲಪುರ, ಕಿತ್ತೂರು (ತರಣಿಮಂಟಿ), ಶಂಭುಗೌಡನಹಳ್ಳಿ, ಕಾಟ್ವಾಳು, ಥೆನೆಕಲ್ಲು,

ಲಕ್ಷ್ಮಣಪುರ, ಹರಿಯಾಲಪುರ, ಬೈರಾಪುರ, ಬೇಗೂರು ಜಂಗಲ್‌, ಹುರುಳಿಪುರ, ಬಡಗ, ಕಂದಲಿಕೆ, ಆಲಹಳ್ಳಿ, ಸೀಗೇವಾಡಿ, ಬಂಕವಾಡಿ, ಆನೆಮಾಳ, ಹೊಸಕೋಟೆ, ಚನ್ನಗುಂಡಿ, ನೆಟ್ಕಲ್‌ ಹುಂಡಿ, ಕಾಕನಕೋಟೆ ಫಾರೆಸ್ಟ್‌, ಹೊಸಕೋಟೆ ಕಡೇಗದ್ದೆ, ಹಿರೇಹಳ್ಳಿ, ಮೊಳೆಯೂರು, ಬೀರಂಬಾಡಿ ಸ್ಟೇಟ್‌ ಫಾರೆಸ್ಟ್‌, ಬೇಗೂರು, ಚೌಡಹಳ್ಳಿ, ಹಿನ್ನೂರು ಮಾರಿಗುಡಿ, ಕುರಂಗಾಲ, ಚಿಕ್ಕಕುಂದೂರು, ಅಂಕುಪುರ, ಬರಗಿ, ಆಲನಹಳ್ಳಿ, ವಡೇರಹಳ್ಳಿ, ಹಿರೇಹಳ್ಳಿ ಸೇರಿದಂತೆ 55 ಗ್ರಾಮಗಳನ್ನು ಕರಡು ಅಧಿಸೂಚನೆಯಲ್ಲಿ ಸೇರಿಸಲಾಗಿದೆ.

ಕೊಡಗು ಜಿಲ್ಲೆಯ ಮೂರು ತಾಲೂಕುಗಳ 57 ಗ್ರಾಮಗಳು ಕರಡು ಅಧಿಸೂಚನೆಯಲ್ಲಿ ಸೇರಿವೆ. ಮಡಿಕೇರಿ ತಾಲೂಕಿನ ಹಮ್ಮಿಯಾಲ, ಕಾಲೂರು, ಮೊಣ್ಣಂಗೇರಿ, ಮುಕ್ಕೊಡ್ಲು, ಗಾಳಿಬೀಡು, ಸಂಪಾಜೆ, ಮೆಲ್ಚೆಂಬು, ಕರಿಕೆ, ಭಾಗಮಂಡಲ, ಬೆಟ್ಟತ್ತೂರು, ಮದೆ, ಕುಂದಕೇರಿ, ಕೊಪಟ್ಟಿ, ಥನ್ನಿಮಣಿ, ಚೇರಂಗಾಲ, ಕೊಳಗಾಲು, ಸಣ್ಣಪುಲಿಕೊಟು (ನಂ.2), ಅಯ್ಯಂಗೇರಿ, ಪೆರೂರು, ನಾಲಡಿ, ಯವಕಪಾಡಿ, ಚೇಲಾವರ, ಕರಡ, ಸೋಮವಾರಪೇಟೆ ತಾಲೂಕಿನ ಕುಮರಳ್ಳಿ, ಸುರ್ಲಬಿ, ಮಾಲಂಬಿ ಫಾರೆಸ್ಟ್‌, ಮಾವಿನಹಳ್ಳಿ ಫಾರೆಸ್ಟ್‌,

ನಿಡ್ತ, ಯಡವನಾಡು ಫಾರೆಸ್ಟ್‌, ಜೇನುಕಲ್‌ ಬೆಟ್ಟ ಫಾರೆಸ್ಟ್‌, ಬ್ಲಾಕ್‌ ಕಟ್‌ ಫಾರಂ, ಜೇನುಕಲ್‌ ಬೆಟ್ಟ, ಆನೆಕಾಡು ಫಾರೆಸ್ಟ್‌, ಅಟ್ಟೂರು ಫಾರೆಸ್ಟ್‌, ವಿರಾಜಪೇಟೆ ತಾಲೂಕಿನ ಕರಡಿಗೋಡು, ಮಾಲ್ದಾರೆ, ಚನ್ನಯ್ಯನ ಕೋಟೆ, ದೇವಮಚ್ಚಿ ಫಾರೆಸ್ಟ್‌, ಅರಕೇರಿ ಫಾರೆಸ್ಟ್‌-1, ಅರಕೇರಿ ಫಾರೆಸ್ಟ್‌-2, ಅರಕೇರಿ ಫಾರೆಸ್ಟ್‌-3, ಕೆದಮುಳ್ಳೂರು, ಪಳಂಗಾಲ, ದೇವನೂರು, ಹೆಗ್ಗಳ, ಹುತ್ತುಗುತ್ತು ಫಾರೆಸ್ಟ್‌, ಕುಟ್ಟುಂಡಿ, ಬಡಗ, ಬಡಗರಕೇರಿ, ಪರ್ಕತಗೇರಿ, ನಲ್ಕೇರಿ ಫಾರೆಸ್ಟ್‌, ಥೆರಾಳು, ಕುರ್ಚಿ, ಕುಟ್ಟಾ, ಮಂಚಳ್ಳಿ ಮತ್ತು ಮಂಚಳ್ಳಿ ಫಾರೆಸ್ಟ್‌.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next