ಹಾಸನ: ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ 2ನೇ ಹಂತ ಕಾಮಗಾರಿಗೆ ಭೂಮಿ ನೀಡಿರುವ 7 ಗ್ರಾಮಗಳ ರೈತರಿಗೆ 3ಕೋಟಿ ರೂ. ಪರಿಹಾರ ಮತ್ತು 3ನೇ ಹಂತದ ಕಾಮಗಾರಿಗೆ10ಕೋಟಿ ರೂ. ಭೂ ಪರಿಹಾರ ವನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕು ಎಂದು ಕಾವೇರಿ ನೀರಾವರಿ ನಿಗಮದ ಎಂಜ ನಿಯರ್‌ಗಳಿಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ತಾಕೀತು ಮಾಡಿದರು.
ಎಚ್.ಡಿ.ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಕಾಚೇನಹಳ್ಳಿ ಏತ ನೀರಾವರಿ 3ನೇ ಹಂತಕ್ಕೆ ಅನುಮೋದನೆ ಸಿಕ್ಕಿದೆ. ಆದರೆ, ಇದುವರೆಗೂ ಭೂ ಸ್ವಾಧೀನದ ಪ್ರಕ್ರಿಯೆ ಪೂರ್ಣಗೊಂಡಿಲ್ಲ. ಇನ್ನು 2ನೇ ಹಂತದ ಯೋಜನೆಅರ್ಪೂಣವಾಗಿಯೆಡಿಡೀ ಇದೆ ಎಂದರು. ಜಿಲ್ಲಾಧಿಕಾರಿ ಕಾಮಗಾರಿ ಆರಂಭಕ್ಕೆ ಅನುವು ಮಾಡಿಕೊಡಬೇಕೆಂದರು.
ಕಾವೇರಿ ನೀರಾವರಿ ನಿಗಮ ಹೇಮಾವತಿ ಯೋಜನಾ ವಿಭಾಗದ ಮುಖ್ಯಎಂಜಿನಿಯರ್ ಮಂಜಪ್ಪ ಮಾತನಾಡಿ, 2ನೇ ಹಂತದ 7 ಹಳ್ಳಿಗಳ ಭೂ ಸ್ವಾಧೀನದ ಸಮಸ್ಯೆ ಬಹುತೇಕ ಬಗೆ ಹರಿದಿದ್ದು 3 ಕೋಟಿ ರೂ. ಪರಿಹಾರದ ಮೊತ್ತ ಬಿಡುಗಡೆಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಮಾಡಲಾಗಿದೆ. ಆನಂ ತರ ಬಾಕಿ ಉಳಿದಿರುವ ನಾಲಾ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗು ವುದು. 3ನೇ ಹಂತದ ಯೋಜನೆಗೆ ಅಗತ್ಯವಿರುವ 10 ಕೋಟಿ ರೂ. ಭೂ ಸ್ವಾಧೀನದ ಪ್ರಕ್ರಿ ಯೆಯನ್ನೂ ತ್ವರಿತವಾಗಿ ಪೂರ್ಣಗೊಳಿಸಿ 10 ಕೋಟಿ ರೂ. ಪರಿಹಾರ ನೀಡಲಾಗುವು ದೆಂದರು. ಜಲಸಂಪನ್ಮೂಲ ಇಲಾಖೆಯಲ್ಲಿ ಲೂಟಿನಡೆಯುತ್ತಿದೆ.ಕಮೀಷನ್‌ಕೊಡದಿದ್ದರೆ ಅನುದಾನ ಬಿಡುಗಡೆ ಮಾಡುವುದಿಲ್ಲ. ವಾರದಲ್ಲಿ ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಕರಣವನ್ನೂ ದಾಖಲು ಮಾಡುತ್ತೇನೆ ಎಂದು ಎಚ್ಚರಿಸಿದರು. ಬೇಲೂರು ತಾಲೂಕು ಜಾವಗಲ್‌ನ ಆಸ್ಪತ್ರೆ ಉದ್ಘಾಟನೆಯಲ್ಲಿ ಜಿಲ್ಲಾ ಆಯುಷ್ ಅಧಿಕಾರಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ ಎಂದು ಹರಿ ಹಾಯ್ದ ರೇವಣ್ಣ, ಪ್ರಭಾರಿ ಆಗಿರುವ ಡಾ. ವೀಣಾಲತಾ ಅವರು ಶಾಸಕರಿಗೆ ಗೌರವಕೊಡುತ್ತಿಲ್ಲ ಎಂದರು. ಶಾಸಕ ಕೆ.ಎಸ್.ಲಿಂಗೇಶ್ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಶಿಷ್ಟಾಚಾರ ಉಲ್ಲಂ ಸಿದರೆ ಶಿಸ್ತುಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಸಿದರು.