Advertisement
ಭಾನುವಾರ ಸಂಜೆ ತಾಲೂಕಿನ ಚಾಕೇನಹಳ್ಳಿ ಗ್ರಾಮದಲ್ಲಿ ಕಲ್ಲುಗಣಿಗಾರಿಕೆ ಸಾಮಗ್ರಿಗಳ ಸ್ಫೋಟದಿಂದ ಓರ್ವ ಸಾವನ್ನಪ್ಪಿದ್ದು ಉಳಿದ ಇಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಕಾರಣ ಬಗ್ಗೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ. ಅದರಂತೆ ಈಗಣಿ ಸಾಮಗ್ರಿಗಳನ್ನು ಶೇಖರಣೆ ಮಾಡಿರುವ ದುರ್ಗಾಂಭ ಎಂಟರ್‌ಪ್ರೈಸಸ್‌ನ ನಾಗೇಶ್ ಮಾಲಿಕರ ವಿರುದ್ಧವೂ ದೂರು ದಾಖಲಾಗಿದ್ದು ನಾಗೇಶ್ ಅವರುತಪ್ಪಿತಸ್ಥರೆಂದು ಸಾಬೀತಾದಲ್ಲಿ ಅವರ ಮೇಲೂ ಕ್ರಮ ಕೈಗೊಳ್ಳಲಾಗುವುದೆಂದರು.
Related Articles
Advertisement
ಪರಿಶೀಲನೆ: ಘಟನಾ ಸ್ಥಳದಿಂದ ಸುಮಾರು ಮೂನ್ನೂರು ಅಡಿ ದೂರದಲ್ಲೇ ಕೆಂಪು ಪಟ್ಟಿ ಕಟ್ಟಿ ಸಾರ್ವಜನಿಕರು ಮತ್ತು ಮಾಧ್ಯಮದವರು ಒಳ ಬಾರದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರು. ಘಟನಾ ಸ್ಥಳಕ್ಕೆ ತೆರಳುವವರ ಬಳಿ ಇದ್ದ ಮೊಬೈಲ್ ಕೊಂಡೊಯ್ಯುವಂತಿರಲಿಲ್ಲ. ಹೀಗಾಗಿ ಉನ್ನತ ಅಧಿಕಾರಿಗಳ ತಂಡ ಮತ್ತು ಬೆರಳೆಣಿಕೆ ಜನಪ್ರತಿನಿಧಿಗಳು ಮಾತ್ರ ಅವಘಡದ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿ ಹಿಂತಿರುಗಿದರು.
ಒಂದು ಮೂಲದ ಪ್ರಕಾರ ಭಾನುವಾರ ಮಧ್ಯಾಹ್ನ ಸಂಪತ್, ರವಿ ನಟರಾಜು ಎಂಬ ಮೂವರು ಬೈಕೊಂದರಲ್ಲಿ ಕಲ್ಲುಗಣಿಗಾರಿಕೆ ಶೇಖರಿಸಿದ್ದ ಗೋದಾಮಿಗೆ ಬಂದು ಜಿಲೆಟಿನ್, ಸಾಮಗ್ರಿ ಕೊಂಡು ಅವುಗಳನ್ನು ಬೈಕ್‌ನ ಟ್ಯಾಂಕ್ ಮೇಲಿರಿಸಿಕೊಂಡುಹೊರಡುವ ವೇಳೆ ಬೈಕ್ ಸ್ಟಾರ್ಟ್ ಆಗುತ್ತಿದ್ದಂತೆಟ್ಯಾಂಕಿನ ಮೇಲಿದ್ದ ಸಾಮಗ್ರಿ ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ.
ಉನ್ನತಾಧಿಕಾರಿಗಳೊಂದಿಗೆ ಡಿವೈಎಸ್‌ಪಿ ಲಕ್ಷ್ಮೇಗೌಡ, ಸರ್ಕಲ್ ಇನ್ಸ್‌ಪೆಕ್ಟರ್ ಅಶೋಕ್, ತಹಶೀಲ್ದಾರ್ ಶ್ರೀನಿವಾಸ್ ಮತ್ತಿತರರಿದ್ದರು.
ತನಿಖೆ ನಡೆಯುತ್ತಿದೆ :
ಈಗಾಗಲೇ ಪೊಲೀಸರು ತನಿಖೆ ಚುರುಕುಗೊಳಿಸಿದ್ದು ಒಂದೆರಡು ದಿನಗಳಲ್ಲಿ ವರದಿ ಬರಲಿದೆ. ವರದಿ ಬಂದ ನಂತರ ನಾನೇ ಖುದ್ದಾಗಿ ಮತ್ತೂಮ್ಮೆ ತಿಳಿಸುವುದಾಗಿ ಹೇಳಿದರು. ಅಲ್ಲದೇ, ತಮಗೆ ಬಂದ ಮಾಹಿತಿ ಪ್ರಕಾರ ಕಲ್ಲು ಗಣಿಗಾರಿಕೆಗೆ ಬೇಕಾದ ಸಾಮಗ್ರಿಗಳು ತಮಿಳುನಾಡಿನಿಂದ ಬಂದಿದೆ. ಬಂದ ಸಾಮಗ್ರಿಗಳನ್ನು ಕೆಳಗಿಳಿಸುವಾಗ ಈಅವಘಡ ನಡೆದಿದೆ ಎಂಬ ಮಾಹಿತಿ ಇದೆ. ಘಟನೆ ನಡೆ ಯಲು ಕಾರಣವೇನೆಂದು ತನಿಖೆಯಿಂದ ಮಾತ್ರ ಹೊರ ಬೀಳಲಿದೆ ಎಂದು ಸಚಿವ ಗೋಪಾಲಯ್ಯ ತಿಳಿಸಿದರು.
ಒಂದು ಮೂಲದ ಪ್ರಕಾರ ಕಲ್ಲುಗಣಿಗಾರಿಕೆ ಸಾಮಗ್ರಿ ಹೊತ್ತುತಂದಿರುವ ವಾಹನದಿಂದ ಗೋದಾಮಿಗೆಸಾಗಿಸುವ ವೇಳೆ ಈ ಅವಘಡ ನಡೆದಿದೆ. ಪ್ರಸ್ತುತ ದುರ್ಗಾ ಎಂಟರ್‌ಪ್ರೈಸಸ್‌ನಮಾಲೀಕ ನಾಗೇಶ್ ತಲೆಮರೆಸಿಕೊಂಡಿದ್ದು ಹುಡುಕಾಟ ನಡೆದಿದೆ. – ಶ್ರೀನಿವಾಸಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ