Advertisement
ರೇವಣ್ಣ ಅವರಹೊಳೆನರಸೀಪುರದ ಐಡಿಯಾ ಲಜಿ ಹಾಸನ ಕ್ಷೇತ್ರಕ್ಕೆ ಹೊಂದಾಣಿಕೆ ಆಗುವುದಿಲ್ಲ. ಅವರು ಹಾಸನ ಕ್ಷೇತ್ರದಿಂದ ಸ್ಪರ್ಧೆಗಿಳಿದರೆ 50 ಸಾವಿರ ಮತಗಳ ಅಂತರದಿಂದ ಸೋಲಿಸುವೆ ಎಂದು ಶಾಸಕ ಪ್ರೀತಂ ಜೆ.ಗೌಡ ಅವರು ಹೇಳಿದ್ದಕ್ಕೆ ಸುದ್ದಿಗೋಷ್ಠಿಯಲ್ಲಿ ರೇವಣ್ಣ ಅವರು ಪ್ರತಿಕ್ರಿಯಿಸಿದರು.
Related Articles
Advertisement
ಅಪಾರ ಬೆಳೆ ಹಾನಿ: ಹಾಸನ ಜಿಲ್ಲೆಯಲ್ಲಿ ಆಲೂಗಡ್ಡೆ, ಶುಂಠಿ , ತರಕಾರಿ ಬೆಳೆಗಳು ಬಹುತೇಕ ನಾಶವಾಗಿವೆ. ಮೆಕ್ಕೆ ಜೋಳದ ಬೆಳೆ ಹಸಿರಾಗಿದ್ದರೂ ನಿರಂತರ ಮಳೆಯಿಂದಾಗಿ ಕಾಳು ಕಟ್ಟದೆ ಬೆಳೆ ನಾಶವಾಗಿದೆ. ಕಂದಾಯ, ಕೃಷಿ, ತೋಟ ಗಾರಿಕೆ ಹಾಗೂ ಕಾಫಿ ಮಂಡಳಿ ಅಧಿಕಾರಿಗಳು ಪ್ರತಿ ತಾಲೂಕಿಗೂ ತೆರಳಿ ಬೆಳೆ ಹಾನಿಯ ಸಮೀಕ್ಷೆ ಮಾಡಬೇಕು. ಜಿಲ್ಲಾಧಿಕಾರಿಯವರನ್ನೂ ನಿನ್ನೆ ನಾನು ಭೇಟಿಯಾಗಿ ಬೆಳೆ ಹಾನಿ ಸಮೀಕ್ಷೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂ ದು ಮನವಿ ಮಾಡಿದ್ದೇನೆ ಎಂದರು.
ಹಿಂದಿನ ಜಿಲ್ಲಾಧಿಕಾರಿ ಆರ್ ಗಿರೀಶ್ ಅವರು ಒಂದು ತಿಂಗಳ ಹಿಂದೆಯೇ ಜಿಲ್ಲೆಯಲ್ಲಿ ಮಳೆಯಿಂದಾಗಿ 450 ಕೋಟಿ ರೂ.ಹಾನಿಯಾಗಿದೆ ಎಂದು ಹೇಳಿದ್ದರು. ಆನಂತರವೂ ಭಾರೀ ಪ್ರಮಾಣದ ಮಳೆಯಾಗಿದ್ದು, ನೂರಾರು ಕೋಟಿ ರೂ. ಬೆಳೆ, ಆಸ್ತಿಗೆ ಹಾನಿಯಾಗಿದೆ ಎಂದು ಹೇಳಿದರು.
ನೆರೆ ಹಾನಿ ಪರಿಹಾರ ಬಿಡುಗಡೆ ಮಾಡಲಿ : ರಾಜ್ಯದಲ್ಲಿ ಈ ವರ್ಷ ಹಿಂದೆಂದೂ ಕಾಣದಷ್ಟು ಮಳೆ ಸುರಿದಿದ್ದು, ರೈತರು ಬೆಳೆದಿದ್ದ ಎಲ್ಲ ಬೆಳೆಗಳೂ ಬಹುತೇಕ ನಾಶವಾಗಿವೆ. ಕೆರೆ-ಕಟ್ಟೆಗಳು ಒಡೆಯುವ ಆತಂಕ ಎದುರಾಗಿದೆ. ಮನೆಗಳು, ಶಾಲೆ ಮತ್ತು ಅಂಗನವಾಡಿ ಕಟ್ಟಡಗಳು ಕುಸಿದು ಬೀಳುತ್ತಿವೆ. ರಸ್ತೆಗಳು ಹಾಳಾಗಿವೆ. ಪರಿಹಾರ ಕಾರ್ಯಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ತಿಂಗಳಿಗೊಮ್ಮೆ ರಾಜ್ಯಕ್ಕೆ ಬರುವುದಾಗಿ ಹೇಳಿದ್ದಾರೆ. ಅವರು ತಿಂಗಳಿಗಲ್ಲ. 15 ದಿನಕ್ಕೊಮ್ಮೆ ಬರಲಿ. ರೈತರ ಸಂಕಷ್ಟವನ್ನು ಆಲಿಸಲಿ. ಅತಿವೃಷ್ಟಿ ಪರಿಹಾರ ಕಾರ್ಯಗಳಿಗೆ ಕೇಂದ್ರದಿಂದ ನೆರವು ಬಿಡುಗಡೆ ಮಾಡಲಿ ಎಂದು ರೇವಣ್ಣ ಅವರು ಮನವಿ ಮಾಡಿದರು.