Advertisement

2023ಕ್ಕೆ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರ ಖಚಿತ

02:30 PM Apr 10, 2021 | Team Udayavani |

ಸಕಲೇಶಪುರ: ಮಾಜಿ ಪ್ರಧಾನಿ ಎಚ್‌.ಡಿ ದೇವೆಗೌಡರಆರ್ಶೀವಾದದಿಂದ 2023ರಲ್ಲಿ ರಾಜ್ಯದಲ್ಲಿ ಜೆಡಿಎಸ್‌ಸರ್ಕಾರ ಅಧಿಕಾರಕ್ಕೆ ಬರುವುದು ಖಚಿತ ಅಲ್ಲಿಯವರೆಗೂ ಕಾರ್ಯಕರ್ತರು ವಿಚಲಿತರಾಗುವುದು ಬೇಡಎಂದು ಮಾಜಿ ಸಚಿವ ಜೆಡಿಎಸ್‌ ಮುಖಂಡ ಎಚ್‌.ಡಿ ರೇವಣ್ಣ ಹೇಳಿದರು.

Advertisement

ಪಟ್ಟಣದ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದ್ದ ಮುಂಬರುವ ಜಿಪಂ ಹಾಗೂತಾಪಂ ಚುನಾವಣೆ ಪೂರ್ವಭಾವಿ ಕಾರ್ಯಕರ್ತರಸಭೆ ಉದ್ದೇಶಿಸಿ ಮಾತನಾಡಿ, ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್‌ ಹಾಗೂ ಬಿಜೆಪಿ ಈ ಜಲ್ಲೆಯ ಅಭಿವೃದ್ಧಿಗೆ ನೀಡಿರುವ ಕೊಡುಗೆಯಾದರು ಏನು? ಇದೀಗ ರಾಜ್ಯದ ಆಡಳಿತ ನಡೆಸುತ್ತಿರುವ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪರ್ಸೆಂಟೇಜ್‌ ಸರ್ಕಾರವಾಗಿದ್ದು, ಗುತ್ತಿಗೆದಾರರಿಂದ ಹಣ ಹೊಡೆಯುವಲ್ಲಿ ನಿರತವಾಗಿದೆ. ಜನರು ಹಾಗೂರೈತರಿಗಾಗಿ ನೀರಾವರಿ ಯೋಜನೆಗಳನ್ನು ಜಾರಿಗೆ ಮಾಡುವ ಬದಲು ಎಣ್ಣೆ ಅಂಗಡಿಗಳ ಪ್ಯಾಕೇಜ್‌ ಸರ್ಕಾರ ನೀಡುತ್ತಿದೆ. ಮುಖ್ಯಮಂತ್ರಿಯವರು ಜಿಲ್ಲೆಯ ಅಭಿವೃದ್ಧಿಗೆ ಏನು ಅನುದಾನ ನೀಡಿದ್ದಾರೆ? 2004 ರಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಸನದಿಂದಮಂಗಳೂರು ರಸ್ತೆಗೆ ಸರ್ವೆ ಮಾಡಿಸಿದ್ದು, ನಾವು ಆದರೆ ಇದನ್ನು ನಾವೆ ಮಾಡಿಸುತ್ತಿದ್ದೇವೆ ಎಂದು ಬಿಜೆಪಿಯವರು ಹೇಳಿಕೊಂಡು ತಿರುಗಾಡುತ್ತಿದ್ದಾರೆ.

ಗ್ಯಾಸ್‌, ಪೆಟ್ರೋಲ್, ಡೀಸೆಲ್‌ ಬೆಲೆ ಏನಾಗಿದೆ. ಜನರ ತೆರಿಗೆ ಹಣವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಲೂಟಿ ಮಾಡುತ್ತಿದೆ. ನಮ್ಮ ಸರ್ಕಾರ ಮಂಜೂರುಮಾಡಿದ ಹೆತ್ತೂರು ಪ್ರಥಮ ದರ್ಜೆ ಕಾಲೇಜನ್ನು ಈ ಸರ್ಕಾರ ಹಿಂಪಡೆಯಲು ಹೋಗಿತ್ತು. ಆದರೆ ಶಾಸಕರು ಮಾಡಿದ ಹೋರಾಟದಿಂದ ಕಾಲೇಜು ಉಳಿದಿದೆ.

ಕಾಂಗ್ರೆಸ್‌ ದುರಾಡಳಿತ: ದುರಾಡಳಿತದಿಂದ ಇಂದು ಕಾಂಗ್ರೆಸ್‌ ಅವನತಿಯ ಹಾದಿಯನ್ನು ಹಿಡಿಯುತ್ತಿದೆ.ಯಾರೂ ಅದನ್ನು ನಾಶಮಾಡಬೇಕಾಗಿಲ್ಲ. ಜೆಡಿಎಸ್‌ಕಾರ್ಯಕರ್ತರು ನಾವು ಮಾಡಿರುವ ಕೆಲಸಗಳಕುರಿತು ಬಾಯಿ ಬಿಡಬೇಕು ಹಾಗೂ ಮನೆ ಮನೆಗೆನಮ್ಮ ಸಾಧನೆಗಳನ್ನು ತಲುಪಿಸಬೇಕು. ಇದರಿಂದ ಮುಂಬರುವ ಜಿ.ಪಂ ಹಾಗೂ ತಾಲೂಕು ಪಂಚಾಯತ್‌ ಚುನಾವಣೆಯಲ್ಲಿ ಜೆಡಿಎಸ್‌ ಅಧಿಕಸ್ಥಾನಗಳಲ್ಲಿ ಗೆದ್ದು ಬರುವಲ್ಲಿ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಕಾರ್ಯಕರ್ತರು ಆಯ್ಕೆ ಮಾಡಿದವರಿಗೆಮುಂಬರುವ ಜಿ.ಪಂ ಹಾಗೂ ತಾ.ಪಂ ಚುನಾವಣೆಯ ಟಿಕೇಟ್‌ ನೀಡಲಾಗುತ್ತದೆ ಎಂದರು.

ಶಾಸಕ ಎಚ್‌.ಕೆ ಕುಮಾರಸ್ವಾಮಿ ಮಾತನಾಡಿ,ಕೆಲವೊಂದು ಕಾರಣಗಳಿಂದ ಇತ್ತೀಚೆಗೆ ನಡೆದ ಗ್ರಾಪಂಚುನಾವಣೆಯಲ್ಲಿ ಪಕ್ಷಕ್ಕೆ ತುಸು ಹಿನ್ನೆಡೆಯಾಗಿರಬಹುದು, ಆದ್ದರಿಂದ ಇದನ್ನು ಮರೆತು ಎಲ್ಲಾ ಕಾರ್ಯಕರ್ತರು ಹಾಗೂ ಮುಖಂಡರು ಒಗ್ಗಟ್ಟಿನಿಂದಕೆಲಸ ಮಾಡಿ ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆಯಲ್ಲಿ ಅಧಿಕ ಸ್ಥಾನಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಗೆಲ್ಲಿಸೋಣ ಎಂದರು.

Advertisement

ಗ್ರಾಪಂ ಚುನಾವಣೆಯಲ್ಲಿ ಹಲವು ಮುಖಂಡರು ಪಕ್ಷದ ಅಭ್ಯರ್ಥಿಗಳ ಪರ ಕೆಲಸ ಮಾಡಲಿಲ್ಲ, ಹೊಸ ತಲೆಮಾರಿನ ಯುವಕರಿಗೆ ಅವಕಾಶ ಕಲ್ಪಿಸಬೇಕು, ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಸೇರಿದಂತೆಕಾರ್ಯಕರ್ತರು ಅನೇಕ ಸಲಹೆ ನೀಡಿದರು.ಜಿಪಂ ಸದಸ್ಯೆ ಚಂಚಲಾ, ಉಜ್ಮಾ ರುಜ್ವಿ ಸುದರ್ಶನ್‌, ಜೆಡಿಎಸ್‌ ತಾಲೂಕು ಅಧ್ಯಕ್ಷ ಕೆ.ಎಲ್‌ ಸೋಮಶೇಖರ್‌, ಪುರಸಭಾ ಅಧ್ಯಕ್ಷ ಕಾಡಪ್ಪ,ಉಪಾಧ್ಯಕ್ಷೆ ಜರೀನಾ, ಎಪಿಎಂಸಿ ಅಧ್ಯಕ್ಷ ಕವನ್‌ಗೌಡ, ಸಚ್ಚಿನ್‌ ಪ್ರಸಾದ್‌, ಜಾತಹಳ್ಳಿ ಪುಟ್ಟಸ್ವಾಮಿ,

ಬೆಕ್ಕನಹಳ್ಳಿ ನಾಗರಾಜ್‌, ಜೈಭೀಮ್‌ ಮಂಜು, ಎಸ್‌. ಎಸ್‌ ಅಸ್ಲಾಂ ,ಪೂರ್ಣೇಶ್‌ ಅಚ್ಚನಹಳ್ಳಿ, ಪ್ರಜ್ವಲ್‌, ಜ್ಯೋತಿ, ಉಮೇಶ್‌, ಮೋಹನ್‌ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next