Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೃಹ ಬಳಕೆದಾರರಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ನೀಡಲು ಎಸ್ಕಾಂಗಳಿಗೆ ವರ್ಷಕ್ಕೆ ಆಗುವ ನಷ್ಟವೆಷ್ಟು ? ಅದನ್ನು ತುಂಬಿಕೊಡಲು ಸರ್ಕಾರಕ್ಕೆಷ್ಟು ಆರ್ಥಿಕ ಹೊರೆಯಾಗುತ್ತದೆ ಎಂಬುದನ್ನು ಕಾಂಗ್ರೆಸ್ ಮುಖಂಡರು ಲೆಕ್ಕ ಹಾಕಿದ್ದಾರೆಯೇ ? ಚುನಾವಣೆ ವೇಳೆ ಉಚಿತ ವಿದ್ಯುತ್ ಭರವಸೆ ನೀಡುತ್ತಿರುವ ಕಾಂಗ್ರೆಸ್‌ನವರು ಸಿದ್ದರಾಮಯ್ಯ ಅವರು 5 ವರ್ಷ ಮುಖ್ಯಮಂತ್ರಿಯಾಗಿದ್ದಾಗ, ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಅವರೇ ಇಂಧನ ಸಚಿವರಾಗಿದ್ದಾಗ ಏಕೆ ಉಚಿತವಾಗಿ ವಿದ್ಯುತ್ ಕೊಡಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
Related Articles
Advertisement
ಮತಯಾಚಿಸಲು ಕಾಂಗ್ರೆಸ್ ಬಳಿ ಸರಕಿಲ್ಲ: ಕಾಂಗ್ರೆ ಸ್‌ಗೆ ಈಗ ಜನರ ಬಳಿ ಹೋಗಲುವಿಷಯಗಳೇ ಇಲ್ಲ. ಜೆಡಿಎಸ್‌ನ ಪಂಚ ರತ್ನ ಯಾತ್ರೆಯಿಂದ ಕಂಗೆಟ್ಟಿ ರುವ ಕಾಂಗ್ರೆಸ್ 200 ಯೂನಿಟ್ ಉಚಿತ ವಿದ್ಯುತ್ ನೀಡುವ ಪೊಳ್ಳು ಭರವಸೆ ನೀಡುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸರ್ಕಾರಿ ಶಾಲೆಗಳು ಮುಚ್ಚುತ್ತಿವೆ. ಶಾಲೆ, ಕಾಲೇಜುಗಳಲ್ಲಿ ಶಿಕ್ಷಕರು, ಉಪನ್ಯಾಸರಿಲ್ಲದೆ ಶಿಕ್ಷಣ ವ್ಯವಸ್ಥೆ ಕುಸಿಯುತ್ತಿದೆ. ಇಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಗಮನ ಹರಿಸದ ಕಾಂಗ್ರೆಸ್ ಉಚಿತ ವಿದ್ಯುತ್ ನೀಡುವಂತಹ ಕೀಳು ಪ್ರಚಾರಕ್ಕೆ ಮುಂದಾಗಿದೆ ಎಂದು ರೇವಣ್ಣ ಅವರು ಹೇಳಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ: ಏನೇ ಮಾಡಿದರೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ. ಕಾಂಗ್ರೆಸ್ – ಬಿಜೆಪಿ ನಡುವೆ ಒಳ ಒಪ್ಪಂದ ಪ್ರತಿ ಚುನಾವಣೆಯಲ್ಲೂ ನಡೆದುಕೊಂಡೇ ಬಂದಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯದಲ್ಲಿ ಕಾಂಗ್ರೆಸ್ – ಬಿಜೆಪಿ ಯಾವ ಅಭ್ಯರ್ಥಿ ಬೆಂಬಲಿಸಿದರು ? ಕೋಲಾರ ಲೋಕಸಭಾ ಕ್ಷೇತ್ರದಲ್ಲಿ 6 ಮಂದಿ ಶಾಸಕರಿದ್ದರೂ ಅಲ್ಲಿ ಪರಿಶಿಷ್ಟ ಸಮು ದಾಯದ ಹಿರಿಯ ನಾಯಕ ಮುನಿಯಪ್ಪ ಸೋಲುತ್ತಾರೆ. ಮುನಿಯಪ್ಪನವರನ್ನು ಸೋಲಿಸಿದ್ದು ಬಿಜೆಪಿಯವರಲ್ಲ. ಕಾಂಗ್ರೆಸ್‌ನವರೇ ಸೋಲಿಸಿದ್ದು. ಕಾಂಗ್ರೆಸ್ ಮುಖಂಡರು ಬಿಜೆಪಿಯವರ ಜೊತೆ ಒಳ ಒಪ್ಪಂದ ಮಾಡಿಕೊಂಡು ಸತತ ಏಳು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದ ಹಿರಿಯ ನಾಯಕ ಮುನಿಯಪ್ಪ ಅವರನ್ನು ಸೋಲಿಸಿದರು ಎಂದು ಆರೋಪಿಸಿದರು.
ಕಾಂಗ್ರೆಸ್‌ಗೆ ಅಧಿಕಾರಕ್ಕೆ ಬರುವ ವಿಶ್ವಾಸವಿದ್ದರೆ, ಅವರಲ್ಲಿ ಸಮರ್ಥ ಅಭ್ಯರ್ಥಿಗಳಿದ್ದರೆ ಜೆಡಿಎಸ್‌ನ ಶಾಸಕರು, ಮುಖಂಡರನ್ನು ಏಕೆ ಕಾಂಗ್ರೆಸ್‌ಗೆ ಸೇರಿಸಿ ಕೊಳ್ಳಲು ಹವಣಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ವೈಎಸ್‌ವಿ ದತ್ತಾಗೆ ಇನ್ನೇನು ಮಾಡಬೇಕಿತ್ತು ? : ಕಡೂರು ಕ್ಷೇತ್ರದ ಮಾಜಿ ಶಾಸಕ ವೈಎಸ್‌ವಿ ದತ್ತ ಕಾಂಗ್ರೆಸ್ ಸೇರ್ಪಡೆ ನಿರ್ಧಾರ ಪ್ರಕಟಿಸಿರುವ ಬಗ್ಗೆ ಪ್ರತಿಕ್ರಿಯಿಸಿ ದ ರೇವಣ್ಣ ಅವರು, ದತ್ತ ಅವರನ್ನು ಜೆಡಿಎಸ್ ಒಮ್ಮೆ ಎಂಎಲ್‌ಸಿ. , ಒಮ್ಮೆ ಎಂಎಲ್‌ಎ ಮಾಡಿತ್ತು. ಈ ಬಾರಿಯೂ ಅವರಿಗೆ ಜೆಡಿಎಸ್ ಟಿಕೆಟ್ ಕೊಡಲು ನಿರ್ಧರಿಸಿತ್ತು. ಆದರೂ ಅವರಿಗೆ ಜೆಡಿಎಸ್ ಇನ್ನೇನು ಮಾಡಬೇಕಾಗಿತ್ತು ? ಅವರು ಜೆಡಿಎಸ್ ಬಿಟ್ಟು ಹೋಗುವುದಾ ದರೆ ಅವರಿಗೆ ಶುಭವಾಗಲಿ ಎಂದು ರೇವಣ್ಣ ಹಾರೈಸಿದರು.
ಜ.17 ರವರೆಗೆ ಶಾಸಕ ಕೆಎಂಶಿಗೆ ಶನಿಕಾಟವಿದೆ: ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡರು ಜೆಡಿಎಸ್ ಬಿಡುವುದಾಗಿ ಎಲ್ಲೂ ಹೇಳಿಲ್ಲ. ಅವರಿಗೆ ಜ.17 ರವರೆಗೆ ಶನಿಕಾಟವಿದೆ. ಆನಂತರ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ. ಶಿವಲಿಂಗೇಗೌಡರು ಜೆಡಿಎಸ್‌ನಲ್ಲೇ ಜಿ.ಪಂ. ಸದಸ್ಯರಾಗಿ ರಾಜಕೀಯ ಜೀವನ ಆರಂಭಿಸಿದವರು. ಅವರಿಗೆ ನಾಲ್ಕು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಜೆಡಿ ಎಸ್ ಟಿಕೆಟ್ ನೀಡದೆ. 15 ವರ್ಷ ಸತತವಾಗಿ ಶಾಸಕರಾಗಿದ್ದಾರೆ. ಈ ಬಾರಿಯೂ ಅವರು ಜೆಡಿಎಸ್‌ನಿಂದ ಸ್ಪರ್ಧಿಸಿದರೆ ನಿರಾಯಾಸವಾಗಿ ಗೆಲ್ಲುತ್ತಾರೆ. ಅದನ್ನೂ ಮೀರಿ ಪಕ್ಷ ಬಿಟ್ಟು ಹೋದರೆ ಅವರಿಗೆ ಶುಭವಾಗಲಿ. ದೇವೇಗೌಡರನ್ನು ಬಿಟ್ಟು ಹೋದ ಮಾಜಿ ಸಂಸದ ಜವರೇಗೌಡ, ಮಾಜಿ ಶಾಸಕರಾದ ಪುಟ್ಟೇಗೌಡ, ವಿಶ್ವನಾಥ್ ಏನಾಗಿದ್ದಾರೆ ನೆನಪಿಸಿಕೊಳ್ಳಲಿ ಎಂದು ಮಾಜಿ ಸಚಿವ ರೇವಣ್ಣ ಎಚ್ಚರಿಕೆ ನೀಡಿದರು.