Advertisement

ಕಾಂಗ್ರೆಸ್ ಆಯ್ತು,ಈಗ ಪ್ರಾದೇಶಿಕ ಪಕ್ಷಗಳನ್ನು ಮುಕ್ತಗೊಳಿಸಲು ಹೊರಟಿದ್ದಾರೆ: HDK ವಾಗ್ದಾಳಿ

02:47 PM Jun 26, 2022 | Team Udayavani |

ಶಿವಮೊಗ್ಗ: ಮಹಾರಾಷ್ಟ್ರದಲ್ಲಿ ಅಪರೇಶನ್ ನಡೆಯುತ್ತಿರುವ ಬಗ್ಗೆ ಯಾವುದೇ ಸಂಶಯ ಇಲ್ಲ. ರಾಜ್ಯದಲ್ಲಿ ಕೂಡ ಅವತ್ತಿನ ಪರಿಸ್ಥಿತಿ ದುರುಪಯೋಗ ಪಡಿಸಿಕೊಂಡಿದ್ದರು. ಕೆಲ ಕಾಂಗ್ರೆಸ್ ನಾಯಕರ ಸಹಕಾರದೊಂದಿಗೆ ರಾಜ್ಯದಲ್ಲಿ ಅಮಿತ್ ಶಾ ನೇತೃತ್ವದಲ್ಲಿ ಪ್ರಹಸನ ಮಾಡಿದ್ದರು. ಅವತ್ತು ಕರ್ನಾಟಕ ಟು ಮುಂಬೈ. ಇವತ್ತು ಮುಂಬೈ ಟು ಸೂರತ್, ಸೂರತ್ ಟು ಗುವಾಹಟಿ ಕರ್ನಾಟಕದಿಂದ ಮುಂಬೈಗೆ ಕರೆದುಕೊಂಡು ಹೋಗಿದ್ದರು. ಇವತ್ತು ಮುಂಬೈನಿಂದ ಗುವಾಹಟಿ ವರೆಗೆ ಹೋಗಿದ್ದಾರೆ ಎಂದು ಮಾಜಿ ಸಿಎಂ ಹೆಚ್.‌ಡಿ. ಕುಮಾರಸ್ವಾಮಿ ಹೇಳಿದರು.

Advertisement

ಶಿವಮೊಗ್ಗ ಹೆಲಿಪ್ಯಾಡ್ ನಲ್ಲಿ ಮಾತಾನಾಡಿದ ಅವರು, ಕರ್ನಾಟಕದಲ್ಲಿ ಶಾಂತಿಪ್ರಿಯರು. ‌ನಾವು ಯಾವುದೇ ಗಲಭೆಗಳಿಗೆ ಆಸ್ಪದ ಕೊಡಲಿಲ್ಲ. ಸರ್ಕಾರ ಮಾಡಲೇಬೇಕು ಎಂಬ ಏಳೆಂಟು ತಿಂಗಳ ಶ್ರಮದಿಂದ ಯಶಸ್ಸು ಕಂಡಿದ್ದರು. ಇಲ್ಲಿ ಸಹ ಸರ್ಕಾರ ಬೀಳಿಸಲು ಒಂದೂವರೆ ವರ್ಷದಿಂದ ಪ್ರಯತ್ನ ಮಾಡಿದ್ದರು. ಈಗ ಯಶಸ್ಸು ಕಂಡಿದ್ದಾರೆ. ಎಲ್ಲಿಗೆ ಹೋಗುತ್ತೇ ನೋಡೋಣ. ಕರ್ನಾಟಕದ ಪರಿಸ್ಥಿತಿ ಬೇರೆ, ಮುಂಬೈನ ಪರಿಸ್ಥಿತಿ ಬೇರೆ ಎಂದರು.

ಶಿವಸೇನೆಯವರು ನಿನ್ನೆಯಿಂದಲೇ ಬಂಡಾಯ ಹೋಗಿರುವ ಶಾಸಕರ ಕಛೇರಿ ಧ್ವಂಸ, ಗಲಭೆ ಆರಂಭವಾಗಿದೆ. ದೇಶದಲ್ಲಿ ಒಂದು ಕಡೆ ಬಿಜೆಪಿ ನಾಯಕರು ಉಪದೇಶ ಮಾಡುತ್ತಾರೆ. ಚುನಾಯಿತ ಸರ್ಕಾರ ಅಸ್ಥಿರಗೊಳಿಸಿ, ಅಧಿಕಾರ ಹಿಡಿಯುವ ತೀರ್ಮಾನ ಮಾಡಿದ್ದಾರೆ. ಇದು 2008 ರಾಜ್ಯದಲ್ಲಿ ಪ್ರಾರಂಭ ಆಯಿತು. 2014 ರ ನಂತರ ಜಾಸ್ತಿಯಾಗಿದ್ದು, ದೇಶವ್ಯಾಪಿ ಇದನ್ನು ವಿಸ್ತರಿಸಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ: ತ್ರಿಪುರಾ ಉಪಚುನಾವಣೆ; ಸಿಎಂ ಮಾಣಿಕ್ ಸಹಾಗೆ ಗೆಲುವು : ಬಿಜೆಪಿಗೆ 4 ರಲ್ಲಿ 3

ಗೋವಾದಲ್ಲಿ ಕೂಡ ಹೈಜಾಕ್ ಮಾಡಿ ಸರ್ಕಾರ ಮಾಡಿದರು. ರಾಜಸ್ಥಾನದಲ್ಲಿ ಪ್ರಯತ್ನ ಮಾಡಿದ್ರು. ಅದು ಯಾಕೋ ಸದ್ಯಕ್ಕೆ ಮುಂದೆ ಹೋಗಿದೆ.  ಪಶ್ಚಿಮ ಬಂಗಾಳದಲ್ಲಿ ಪ್ರಯತ್ನ ಮಾಡಿದ್ರು. ಆದರೆ, ಹೋರಾಟ ಮಾಡಿ ಮಮತಾ ಬ್ಯಾನರ್ಜಿ ಉಳಿಸಿಕೊಂಡರು. ಮುಂದೆ ರಾಜಸ್ಥಾನ ಅಥವಾ ಜಾರ್ಖಂಡ್ ಇರಬಹುದು. ಬಿಜೆಪಿಗೆ ವಿರೋಧ ಪಕ್ಷಗಳೇ ಇರಬಾರದು. ಅವುಗಳನ್ನು ಧಮನ ಮಾಡಬೇಕು ಎಂಬುದೇ ಅವರ ಸಿದ್ಧಾಂತ. ಬಿಜೆಪಿಯೇತರ ಸರ್ಕಾರ ದೇಶದಲ್ಲಿ ಇರಬಾರದು. ಕಾಂಗ್ರೆಸ್ ಮುಕ್ತ ಆಯಿತು. ಇದೀಗ ಪ್ರಾದೇಶಿಕ ಪಕ್ಷಗಳನ್ನು ಮುಕ್ತಗೊಳಿಸಲು ಹೊರಟಿದ್ದಾರೆ ಎಂದು ಟೀಕಿಸಿದರು.

Advertisement

ಮಹಾರಾಷ್ಟ್ರದ ಆಪರೇಷನ್ ಕಮಲಕ್ಕೆ ರಾಜ್ಯದ ಬಿಜೆಪಿ ನಾಯಕರ ಪಾತ್ರ ಇದೆ ಎಂದು ಅನಿಸಲ್ಲ. ಅಷ್ಟು ದೊಡ್ಡ ಮುಖಂಡರು ನಮ್ಮ ರಾಜ್ಯದಲ್ಲಿ ಇದ್ದಾರೆ ಅನಿಸಲ್ಲ. ಅಲ್ಲಿ ಹೋಗಿ 40 ಜನ ಶಿವಸೇನೆ ಎಂಎಲ್ಎ ಗಳನ್ನು ಮನವೊಲಿಸಿ ಕರೆದುಕೊಂಡು ಹೋಗ್ತಾರಾ..? ಹೈಕಮಾಂಡ್ ನಲ್ಲೇ ಎಕ್ಸ್‌ಪರ್ಟ್ ಇದ್ದಾರೆ. ಅಮಿತ್ ಷಾ ಗಿಂತ ದೊಡ್ಡ ಮುಖಂಡರು ಆಪರೇಷನ್ ಮಾಡಲು ಬೇಡ ಎಂದರು.

ಸ್ಪಷ್ಟ ಬಹುಮತ ಇದ್ದರೂ ಸರ್ಕಾರ ಉಳಿಯುತ್ತಾ -ಇಲ್ವಾ ಎಂಬ ಅನುಮಾನ ಪ್ರಾರಂಭವಾಗಿದೆ. ಅದರ ಬದಲು ಚುನಾವಣೆನೇ ನಡೆಸೋದು ಬೇಡ. ನೀವ್ಯಾರು ಚುನಾವಣೆಗೆ ನಿಲ್ಲಬೇಡಿ. ನಮ್ಮದು ಈ ರೀತಿ ಇದೆ. ಅಜೆಂಡಾ ಹೀಗಿದೆ. ಮನೆ ಏಕೆ ಹಾಳು ಮಾಡಿಕೊಳ್ಳುತ್ತಿರಿ ಎಂದು ರೆಸಲ್ಯೂಶನ್ ಮಾಡಿಬಿಡಿ. ದೇಶದಲ್ಲಿ ನೋ ಎಲೆಕ್ಷನ್ ಎಂದು ತೀರ್ಮಾನ ಮಾಡಿಬಿಡಿ, ಮುಗಿದು ಹೋಗುತ್ತದೆ ನಾವೆಲ್ಲ ಸುಮ್ಮನೆ ದುಡ್ಡು ಕಳೆದುಕೊಂಡು, ಆರೋಗ್ಯ ಕೆಡಿಸಿಕೊಂಡು ಯಾಕೆ ಚುನಾವಣೆ ಬೇಕು. ಹಲವು ರಾಜಕೀಯ ಪಕ್ಷಗಳು ಬೀದಿ ಪಾಲಾಗೋದು ತಪ್ಪುತ್ತದೆ ನಿಷೇಧ ಮಾಡಿ. ಬಿಜೆಪಿಯಲ್ಲಿದ್ದರೇ ಮಾತ್ರ ಉಳಿಗಾಲ. ಇನ್ನುಳಿದವರಿಗೆ ಉಳಿಗಾಲ ಇಲ್ಲ ಹೀಗೆ ಲೋಕಸಭೆಯಲ್ಲಿ ಒಂದು ಬಿಲ್ ಪಾಸ್ ಮಾಡಿಬಿಡಿ. ಸುಲಭವಾಗುತ್ತದೆ. ಬೇರೆಯವರು ನೆಮ್ಮದಿಯಿಂದ ಬದುಕಬಹುದು ಎಂದ ಮಾಜಿ ಸಿಎಂ ಕುಮಾರಸ್ವಾಮಿ.

Advertisement

Udayavani is now on Telegram. Click here to join our channel and stay updated with the latest news.

Next