Advertisement

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

01:05 PM Apr 18, 2024 | Team Udayavani |

ಉದಯವಾಣಿ ಸಮಾಚಾರ
ದೊಡ್ಡಬಳ್ಳಾಪುರ: ಎರಡು ಬಾರಿ ಪ್ರಧಾನಿಯಾಗಿರುವ ನರೇಂದ್ರ ಮೋದಿ, ತಮ್ಮ ಜನಪ್ರಿಯತೆಯಿಂದ 3ನೇ ಬಾರಿಯೂ ಪ್ರಧಾನಿ ಆಗಬೇಕೆನ್ನುವ ಬಯಕೆ ಎಲ್ಲೆಡೆ ವ್ಯಕ್ತವಾಗುತ್ತಿದೆ. ಆದರೆ, ಕಾಂಗ್ರೆಸ್‌ನಿಂದ ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲೆಸೆದಿದ್ದಾರೆ. ನಗರದಲ್ಲಿ ಬಿಜೆಪಿ- ಜೆಡಿಎಸ್‌ ವತಿಯಿಂದ ನಡೆದ ರೋಡ್‌ಶೋನಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ. ಸುಧಾಕರ್‌ರ ಪರವಾಗಿ ಮತಯಾಚನೆ ಮಾಡಿ ಮಾತನಾಡಿದರು.

Advertisement

ಗೆಲ್ಲಿಸಿ: ರಾಜ್ಯದಲ್ಲಿ ಕಾಂಗ್ರೆಸ್‌ 28 ಗೆಲ್ಲುತ್ತೇವೆ  ಎನ್ನುವುದು ಭ್ರಮೆ. ಇಡೀ ದೇಶದಲ್ಲಿ ಇಂಡಿಯಾ ಮೈತ್ರಿ ಕೂಟ 45 ಸೀಟು ಗೆದ್ದರೆ ಪುಣ್ಯ. ರಾಜ್ಯದ ಜನತೆ ಮೋದಿ ಗ್ಯಾರಂಟಿಗಳನ್ನು ನಂಬುತ್ತಾರೆಯೇ ಹೊರತು ರಾಜ್ಯದ ಗ್ಯಾರಂಟಿಗಳನ್ನಲ್ಲ. 10 ಕೆ.ಜಿ ಅಕ್ಕಿ ನೀಡುತ್ತೇವೆ ಎಂದು ಹೇಳಿದ್ದ ಮುಖ್ಯಮಂತ್ರಿಗಳಿಂದ 1 ಕೆ.ಜಿ ಅಕ್ಕಿಯನ್ನೂ ನೀಡಲು ಆಗುತ್ತಿಲ್ಲ. ಈಗ ನೀಡುತ್ತಿರುವ 5 ಕೆ.ಜಿ.ಅಕ್ಕಿ ಪ್ರಧಾನಿ ಮೋದಿ ಅವರದ್ದು. ಇನ್ನು ಕಾಂಗ್ರೆಸ್‌ನ ಪಾಪದ ಕೂಸಾಗಿದ್ದ 370 ನೇ ವಿಧಿ ತೆಗೆದು ಹಾಕಿ ಕಾಶ್ಮೀರದಲ್ಲಿ ಶಾಂತಿ ನೆಲೆಸುವಂತೆ ಮಾಡಿದ್ದಾರೆ. 10 ವರ್ಷ ವಿಶ್ರಾಂತಿ ಪಡೆಯದೇ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಎನ್‌ ಡಿಎ ಪರ ಒಲವಿದ್ದು, ಮೋದಿ ಕೈ ಬಲಪಡಿಸಲು ಎನ್‌ಡಿಎ ಅಭ್ಯರ್ಥಿಗಳನ್ನು ಗೆಲ್ಲಿಸಬೇಕೆಂದರು.

ಶಾಸಕ ಧೀರಜ್‌ ಮುನಿರಾಜು, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಬಿಜೆಪಿ ಜಿಲ್ಲಾಧ್ಯಕ್ಷ ರಾಮಕೃಷ್ಣಪ್ಪ, ಜೆಡಿಎಸ್‌ ಜಿಲ್ಲಾ ಅಧ್ಯಕ್ಷ ಬಿ.ಮುನೇ ಗೌಡ, ಜೆಡಿಎಸ್‌ ರಾಜ್ಯ ಕಾರ್ಯದರ್ಶಿ ಎಸ್‌. ಎಂ.ಹರೀಶ್‌ಗೌಡ, ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಟಿ.ವಿ.ಲಕ್ಷ್ಮೀನಾರಾಯಣ್‌, ಮುಖಂಡರಾದ ಎಚ್‌.ಅಪ್ಪಯ್ಯಣ್ಣ, ಬಿ.ಸಿ.ನಾರಾಯಣಸ್ವಾಮಿ, ಕೆ.ಎಂ.ಹನುಮಂತರಾಯಪ್ಪ, ಪುಷ್ಪಾ ಶಿವಶಂಕರ್‌, ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ನಾಗೇಶ್‌, ನಗರ ಘಟಕದ ಅಧ್ಯಕ್ಷ ಕೆ.ಬಿ.ಮುದ್ದಪ್ಪ, ಜೆಡಿಎಸ್‌ ತಾಲೂಕು ಅಧ್ಯಕ್ಷ ಲಕ್ಷ್ಮೀಪತಯ್ಯ ಜೆಡಿಎಸ್‌ ನಗರ ಅಧ್ಯಕ್ಷ ವಿ.ಎಸ್‌.ರವಿಕುಮಾರ್‌ ಇದ್ದರು.

ಕೇಂದ್ರದ ಯೋಜನೆಗಳು ಜನತೆಗೆ ಉಪಯುಕ್ತವಾಗಿವೆ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಡಾ.ಕೆ.ಸುಧಾಕರ್‌ ಮಾತನಾಡಿ, ಕಾಂಗ್ರೆಸ್‌ ಸರ್ಕಾರ ಒಂದೆಡೆ ಕೊಟ್ಟು ಮತ್ತೂಂದೆಡೆ ಕಿತ್ತುಕೊಳ್ಳುತ್ತಿದೆ. 1.05 ಲಕ್ಷ ರೂ., ಸಾಲ ಜನರ ಮೇಲಿದ್ದು ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಆದರೆ ಪ್ರಧಾನಿ ಮೋದಿ ಜಾರಿಗೆ ತಂದಿರುವ, ಗರೀಬ್‌ ಕಲ್ಯಾಣ್‌, ಆಯುಷ್ಮಾನ್‌, ಕಿಸಾನ್‌  ಮ್ಮಾನ್‌, ಜನೌಷಧಿ ಮಳಿಗೆಗಳು ಜನರಿಗೆ ಉಪಯುಕ್ತವಾಗಿವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಬಿ.ವೈ.ವಿಜಯೇಂದ್ರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next