Advertisement

ಕಾಂಗ್ರೆಸ್‌ ಕ್ರೂರ ದೃಷ್ಟಿ ನನ್ನ ಕ್ಷೇತ್ರದ ಮೇಲೆ ಬಿದ್ದಿದೆ

12:31 PM Apr 06, 2021 | Team Udayavani |

ರಾಮನಗರ: ವಿಧಾನಸಭಾ ಕ್ಷೇತ್ರದ ಮೇಲೆ ಕಾಂಗ್ರೆಸ್‌ ಕ್ರೂರ ದೃಷ್ಟಿ ಬಿದ್ದಿದೆ. ಹೀಗಾಗಿ ನಗರಸಭೆ ಚುನಾವಣೆಯ ಹೊಣೆಯನ್ನು ಸ್ವತಃ ನಾನೇ ಹೊರುತ್ತೇನೆ ಎಂದು ಚನ್ನಪಟ್ಟಣ ಶಾಸಕ, ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

Advertisement

ರಾಮನಗರ ನಗರಸಭೆಗೆ ಏ.27ಕ್ಕೆ ಚುನಾವಣೆ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ನಗರದ ನಾಸಿರ್‌ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಅಲ್ಪಸಂಖ್ಯಾತ ಸಮುದಾಯದ ಸಭೆಗೂ ಮುನ್ನ ಅವರು ಮಾಧ್ಯಮ ಪ್ರತಿನಿಧಿಗಳ ಬಳಿ ಮಾತನಾಡಿದರು.

ನಗರಸಭೆ ಸೇರಿ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ತಾವು ಎಂದೂ ನೇರವಾಗಿ ಪಾತ್ರ ವಹಿಸುತ್ತಿರಲಿಲ್ಲ.ಪಕ್ಷದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರುನಿಭಾಯಿಸುತ್ತಿದ್ದರು. ಆದರೆ, ಈ ಬಾರಿ, ರಾಮನಗರ ಕ್ಷೇತ್ರದ ಮೇಲೆ ಕಾಂಗ್ರೆಸ್‌ ನಾಯಕರ ಕ್ರೂರ ದೃಷ್ಟಿ ಬಿದ್ದಿದೆ. ಕ್ಷೇತ್ರದಲ್ಲಿ ಶಾಂತಿ ಕದಡಬಾರದು ಎಂಬ ಉದ್ದೇಶದಿಂದ ನಗರಸಭೆ ಚುನಾವಣೆ ಜವಾಬ್ದಾರಿಯನ್ನು ತಾವೇ ವಹಿಸಿಕೊಂಡಿರುವುದಾಗಿ ತಿಳಿಸಿದರು.

ಎಲ್ಲಾ ಪಕ್ಷಗಳ ಕೆಟ್ಟ ದೃಷ್ಟಿ, ಕಾಂಗ್ರೆಸ್‌ನದ್ದು ಕ್ರೂರ ದೃಷ್ಟಿ: ರಾಮನಗರದಿಂದ ತಮ್ಮ ರಾಜಕೀಯ ಜೀವನ ಆರಂಭವಾಗಿದೆ. ಅಂದಿನಿಂದಲೂ ಕ್ಷೇತ್ರದ ಜನರಲ್ಲಿಸಹೋದರತ್ವ ನೆಲೆಸಿದೆ. ಸಮಸ್ಯೆಗಳು ಕಾಡಲಿಲ್ಲ. ಇದೇ ವಾತಾವರಣ ಮುಂದುವರಿಯಬೇಕಾಗಿದೆ.ಆದರೆ, ಈ ಬಾರಿ ಎಲ್ಲಾ ರಾಜಕೀಯ ಪಕ್ಷಗಳುರಾಮನಗರದ ಮೇಲೆ ಕೆಟ್ಟ ದೃಷ್ಟಿ ಬೀರಿವೆ. ಅದರಲ್ಲೂ ಕಾಂಗ್ರೆಸ್‌ ನಾಯಕರ ಕ್ರೂರ ದೃಷ್ಟಿ ಕ್ಷೇತ್ರದ ಮೇಲೆ ಬಿದ್ದಿದೆ. ಅದರಿಂದಾಗಿ ಸಮಸ್ಯೆಗಳು ಉದ್ಭವಿಸಬಾರದು. ಹೀಗಾಗಿ ತಾವು ಪಕ್ಷದ ಕಾರ್ಯಕರ್ತರ ಜೊತೆ ಇದ್ದು ಚುನಾವಣೆ ನಡೆಸುವುದಾಗಿ ತಿಳಿಸಿದರು.

ಕಾಂಗ್ರೆಸ್‌ ಅಪಪ್ರಚಾರ: ನಗರದ ಜನರಿಗೆ ಮನೆ ಕಟ್ಟಿಕೊಡುವ ಉದ್ದೇಶದಿಂದ ಕೇಂದ್ರ ಸರ್ಕಾರದಿಂದ 30 ಕೋಟಿ ರೂ. ಅನುದಾನ ತಂದಿದ್ದೆ. ಸ್ಲಂ ಬೋರ್ಡ್‌ ನಿಂದ ಅರ್ಜಿ ಆಹ್ವಾನಿಸಿದಾಗ ಫ‌ಲಾನುಭವಿಗಳು ಅರ್ಜಿದಾರರು 5 ಸಾವಿರ ರೂ. ಠೇವಣಿ ಕಟ್ಟಿದ್ದಾರೆ.900 ರಿಂದ 1000 ಮಂದಿ ಅರ್ಜಿ ಹಾಕಿದ್ದರು. ಆ ಜನರು ಕಟ್ಟಿರುವ 5 ಸಾವಿರ ರೂ. ಹಣ ಸ್ಲಂ ಬೋರ್ಡ್‌ನಯಲ್ಲಿಯೇ ಇದೆ. ಆದರೆ, 2013ರಲ್ಲಿ ಕಾಂಗ್ರೆಸ್ಸಿಗರು ಮನೆಗಳ ವಿಚಾರವನ್ನೇ ಮುಖ್ಯವಾಗಿಟ್ಟು ಕೊಂಡು ಚುನಾವಣೆ ನಡೆಸಿದರು. ಅಪಪ್ರಚಾರ ಮಾಡಿದರು. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್‌ ಆಡಳಿತದಲ್ಲಿ ಆದ ಸಮಸ್ಯೆಗಳಿಂದಾಗಿ ಮನೆ ನೀಡಲಾಗಲಿಲ್ಲ ಎಂದು ಹೇಳಿದರು.

Advertisement

ಯಾರೂ ಆತಂಕಪಡಬೇಕಿಲ್ಲ: ತಾವು ಪ್ರಥಮ ಬಾರಿಗೆ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಪ್ರಾಥಮಿಕ ಹಂತದಲ್ಲಿ ಕೆಲ ಮನೆ ನಿರ್ಮಿಸಿ ಫ‌ಲಾನುಭವಿಗಳಿಗೆ ವಿತರಿಸಲಾಗಿದೆ. ಈಗ ಸ್ಲಂ ಬೋರ್ಡ್‌ಗೆ 58 ಕೋಟಿ ರೂ.  ಬಿಡುಗಡೆ ಮಾಡಿಸುವ ಮೂಲಕ 1800 ಮನೆನಿರ್ಮಿಸುವ ನಿರ್ಧಾರವಾಗಿದೆ. ಯಾರೂ ಆತಂಕ ಪಡಬೇಕಾಗಿಲ್ಲ ಎಂದು ಭರವಸೆ ನೀಡಿದರು. ಮಾಜಿ ಶಾಸಕರೊಬ್ಬರು ತಮ್ಮನ್ನುದ್ದೇಶಿಸಿ ಜನರಿಗೆ ನಿವೇಶನ,ಮನೆಗಳಿಲ್ಲ ಎಂದು ಭಾಷಣ ಮಾಡಿದ್ದಾರೆ. ಆ ಮಾಜಿಶಾಸಕರು ಕ್ಷೇತ್ರದ ಅಭಿವೃದ್ಧಿ ಏನು ಕೊಡುಗೆನೀಡಿದ್ದಾರೊ ಗೊತ್ತಿಲ್ಲ ಎಂದು ಕುಮಾರಸ್ವಾಮಿ ಪರೋಕ್ಷವಾಗಿ ಸಿ.ಎಂ.ಲಿಂಗಪ್ಪ ವಿರುದ್ಧ ವ್ಯಂಗ್ಯವಾಡಿದರು. ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ, ಜೆಡಿಎಸ್‌ ಸ್ಥಳೀಯ ಮುಖಂಡರಾದರಾಜಶೇಖರ್‌, ಬಿ.ಉಮೇಶ್‌, ಪರ್ವಿಜ್‌ ಪಾಷ, ಜಕೀರ್‌ ಹುಸೇನ್‌, ಜಯಕುಮಾರ್‌ ಮುಂತಾದವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next