ಬೆಂಗಳೂರು : ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಮುಖಂಡರ ಕಾಲು ಹಿಡಿಯುವುದನ್ನು ಬಿಟ್ಟು ತಮ್ಮ ಪಕ್ಷದ ಮರ್ಯಾದೆ ಉಳಿಕೊಳ್ಳಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದ್ದಾರೆ
ಈ ಕುರಿತು ಟ್ವೀಟ್ ಮಾಡಿದ ಹೆಚ್ ಡಿಕೆ ಗ್ರಾಮ ಪಂಚಾಯತ್ ಚುನಾವಣೆಯ ನಂತರದ ಬೆಳವಣಿಗೆಗಳು ಆಘಾತಕಾರಿಯಾಗಿವೆ. ಮೀಸಲಾತಿ, ಬೆದರಿಕೆ ಮೂಲಕ ಜೆಡಿಎಸ್ ಬೆಂಬಲಿತ ಸದಸ್ಯರನ್ನು ಸೆಳೆಯುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಅದರೆ ಅದಕ್ಕೆ ನಮ್ಮವರೂ ತಿರುಗೇಟು ನೀಡುತ್ತಿದ್ದಾರೆ ಎಂದು ಹೇಳಿದ್ದಾರೆ. ಅತಿ ಹೆಚ್ಚು ಸ್ಥಾನ ಗಳಿಸಿದೆವು ಎಂದು ಹೇಳಿಕೊಳ್ಳುವ ರಾಷ್ಟ್ರೀಯ ಪಕ್ಷಗಳಿಗೆ ಯಾಕೆ ಇಂಥ ಗತಿ? ಎಂದು ತಿಳಿಯದು ಎಂದಿದ್ದಾರೆ.
ಇದನ್ನೂ ಓದಿ :ಸ್ವಾರ್ಥಕ್ಕಾಗಿ ಕೆಲವರು ಸಿಎಂ ಮೇಲೆ ಆರೋಪ ಮಾಡ್ತಿದ್ದಾರೆ, ಇದು ಒಳ್ಳೆಯದಲ್ಲ: ರೇಣುಕಾಚಾರ್ಯ
ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಕಾಲುಗಳನ್ನು ಹಿಡಿಯುತ್ತಿವೆ, ಅವರ ಮನೆ ಬಾಗಿಲಿಗೆ ಅಲೆಯುತ್ತಿವೆ ಎಂದರೆ, ಕನ್ನಡಿಗರು ಜೆಡಿಎಸ್ ಗೆ ಎಷ್ಟು ಬಲ ತುಂಬಿದ್ದಾರೆ ಎಂಬುದು ಯಾರಿಗಾದರೂ ಗೊತ್ತಾಗುವ ವಿಚಾರ. ಆದುದರಿಂದ ರಾಷ್ಟ್ರೀಯ ಪಕ್ಷಗಳು ನಮ್ಮ ಮುಖಂಡರ ಕಾಲು ಹಿಡಿಯುವುದನ್ನು ನಿಲ್ಲಿಸಿ, ಮರ್ಯಾದೆ ಉಳಿಸಿಕೊಳ್ಳಬೇಕು ಎಂದರು.