Advertisement

ಮನೆ ಮಾರಿಯಾದ್ರೂ ಪಕ್ಷ ಕಟ್ಟುತ್ತೇನೆ:ಎಚ್ ಡಿಕೆ

09:49 AM Nov 29, 2020 | Suhan S |

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಗೆ ಸಜ್ಜಾಗುವ ಮೂಲಕ ಪಕ್ಷವನ್ನು ತಳಮಟ್ಟದಿಂದ ಬಲಪಡಿಸಲು ಜಿಲ್ಲಾ ಹಾಗೂ ತಾಲೂಕು ಮುಖಂಡರಿಗೆ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಸೂಚಿಸಿದ್ದಾರೆ.

Advertisement

ಪಕ್ಷದ ಕಚೇರಿಯಲ್ಲಿ ಶನಿವಾರ ನಡೆದ ಪಕ್ಷ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ಸೋಲಿನ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಯಾವ ರೀತಿ ಚುನಾವಣೆ ನಡೆಯಿತು ಎಂಬುದುಗೊತ್ತಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಮ್ಮ ಪಕ್ಷಕ್ಕೆ ವಿಶೇಷ ಶಕ್ತಿಯಿದೆ.ಕಾಂಗ್ರೆಸ್‌ ಹಾಗೂ ಬಿಜೆಪಿಗಿಂತ ನಾವು ಶಕ್ತಿವಂತರಾಗಿದ್ದೇವೆ. ಮುಖಂಡರು ಒಟ್ಟಾಗಿ ಕೆಲಸ ಮಾಡಿ ಎಂದು ತಾಕೀತು ಮಾಡಿದರು.

ದೇವೇಗೌಡರು ಬದುಕಿರುವಾಗಲೇ ಮತ್ತೆ ಪಕ್ಷ ಅಧಿಕಾರಕ್ಕೆ ತರಬೇಕು. ಆ ನಿಟ್ಟಿನಲ್ಲಿ ಈಗಿನಿಂದಲೇ ಸಜ್ಜಾಗಿ. ಚುನಾವಣೆಗೆ ಹಣವೇ ಮುಖ್ಯ ಎನ್ನುವುದಾದರೆ, ಮನೆ ಮಾರಿಯಾದರೂ ಪಕ್ಷ ಕಟ್ಟುವೆ. ಕಾರ್ಯಕರ್ತರನ್ನು ಬೀದಿಯಲ್ಲಿ ನಿಲ್ಲಿಸಲ್ಲ, ಅವರ ಜತೆ ಸದಾ ನಾನಿದ್ದೇನೆ. ಇದೊಂದು ನಮಗೆ ಸವಾಲು. ಪಕ್ಷ ಕಟ್ಟಬೇಕಾಗಿದೆ. ಎಲ್ಲರೂ ಜತೆಗೂಡಿ ಕೆಲಸ ಮಾಡೋಣ ಎಂದು ತಿಳಿಸಿದರು. 25 ಸಾವಿರ ಕೋಟಿ ರೂ. ರೈತರ ಸಾಲಮನ್ನಾ ಮಾಡುವ ಬದಲು ಮಹಿಳಾ ಸ್ವ ಸಹಾಯ ಸಂಘಗಳ ಸಾಲ ಮನ್ನಾ ಮಾಡಿದ್ದರೆ ಮಹಿಳೆಯರು ಜೆಡಿಎಸ್‌ ಕೈ ಹಿಡಿಯುತ್ತಿದ್ದರು. ಸಾಲ ಮನ್ನಾಮಾಡಿದ್ದಕ್ಕೆ ರೈತರಿಗೆ ಅನುಕೂಲವಾಯಿತು. ಆದರೆ, ರೈತರು ನಮ್ಮನ್ನು ಕೈಹಿಡಿಯಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ನಿಖಿಲ್‌ ಬಂದಿದ್ದನಾ?: ನಾನು ಮುಖ್ಯಮಂತ್ರಿಯಾಗಿದ್ದಾಗ ನಿಖೀಲ್‌ ವಿಧಾನಸೌಧಕ್ಕೆ ಬಂದಿದ್ದನಾ? ವರ್ಗಾವಣೆ ಹೆಸರಿನಲ್ಲಿ ಲೂಟಿ ಮಾಡಿದ್ದನಾ? ಈಗ ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ವರ್ಗಾವಣೆಯಲ್ಲಿ ಲೂಟಿ ನಡೆಯುತ್ತಿದೆ. ಅದರ ಹಿಂದೆ ಯಾರಿದ್ದಾರೆ ಎಂಬುದು ಬಹಿರಂಗವಾಗಿದೆ ಎಂದು ಹೇಳಿದರು.

ಇದನ್ನೂ ಓದಿ : ಚತ್ತೀಸ್ ಗಡ್ ನಲ್ಲಿ ಐಇಡಿ ದಾಳಿ: ಓರ್ವ ಸಿಆರ್ ಪಿಎಫ್ ಕಮಾಂಡೋ ಹುತಾತ್ಮ, 10 ಯೋಧರಿಗೆ ಗಾಯ

Advertisement

ಯಾವ ಪಕ್ಷವೂ ಕುಟುಂಬ ರಾಜಕಾರಣದಿಂದ ಹೊರತಾಗಿಲ್ಲ. ಟೀಕೆ- ಟಿಪ್ಪಣಿಗಳಿಗೆ ತಲೆಕೆಡಿಸಿಕೊಳ್ಳದೆ ಪಕ್ಷ ಸಂಘಟನೆ ಮಾಡಿ ಎಂದು ಪ್ರಜ್ವಲ್‌ ಹಾಗೂ ನಿಖೀಲ್‌ಗೆ ಇದೇ ಸಂದರ್ಭದಲ್ಲಿಕಿವಿ ಮಾತು ಹೇಳಿದರು.

ಮಾಜಿ ಸಚಿವ ಎಚ್‌.ಡಿ.ರೇವಣ್ಣ ಮಾತನಾಡಿ, ಕುಮಾರಸ್ವಾಮಿ ಐದು ವರ್ಷ ಮುಖ್ಯಮಂತ್ರಿ ಯಾಗಿರಬಹುದಿತ್ತು. ಆದರೆ, ಅವರ ಜತೆ ಇದ್ದವರೇ ಬೆನ್ನಿಗೆ ಚೂರಿ ಹಾಕಿದರು ಎಂದು ಹೇಳಿದರು. ದೇವೇಗೌಡರು ಕೆಲವರನ್ನು ದೂರ ಇಡಬೇಕು.ಜೈಲಿನಲ್ಲಿಬಟ್ಟೆಬಿಚ್ಚಿಕೂರಿಸಿದವರನ್ನು ವಿಧಾನಪರಿಷತ್‌ ಸದಸ್ಯರನ್ನಾಗಿ ಮಾಡಿದರು.

ಅಂತವರನ್ನು ದೂರ ಇಡಬೇಕಿತ್ತು ಎಂದು ಹೇಳಿದರು. ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್‌. ವಿ.ದತ್ತಾ ಮಾತನಾಡಿ, ಯುವಕರು ಹಾಗೂ ಮಹಿಳೆಯರನ್ನು ಸೆಳೆಯುವಲ್ಲಿ ನಾವು ಸೋತಿ ದ್ದೇವೆ. ಸಾಮಾಜಿಕ ಜಾಲ ತಾಣಗಳ ಮೂಲಕ ಹೆಚ್ಚು ಜನರನ್ನು ತಲುಪಬೇಕಿದೆ. ಬೂತ್‌ ಮಟ್ಟದಲ್ಲಿ ಕಾರ್ಯಾಗಾರ ಆಗಲೇಬೇಕು ಎಂದು ಹೇಳಿದರು. ವಿಧಾನಪರಿಷತ್‌ ಸದಸ್ಯ ಟಿ.ಎ.ಶರವಣ ಮಾತನಾಡಿ, ಉಪ ಚುನಾವಣೆಯಲ್ಲಿ ಹಣ ಬಲ ಗೆದ್ದಿದೆ. ಪಕ್ಷ ಕಟ್ಟಲು ದೇವೇಗೌಡ, ಕುಮಾ ರಣ್ಣ ಸೇರಿ ನಮ್ಮ ನಾಯಕರೇ ನಮಗೆ ಮಾದರಿಎಂದು ಹೇಳಿದರು.

ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಕೆ.ಕುಮಾರಸ್ವಾಮಿ, ವಿಧಾನಪರಿಷತ್‌ಉಪಸಭಾಪತಿ ಧರ್ಮೇಗೌಡ, ಮಾಜಿ ಸಚಿವ ಶ್ರೀನಿವಾಸಗೌಡ, ಶಾಸಕರಾದ ಶಿವ ಲಿಂಗೇಗೌಡ, ಬಿ.ಸಿ.ಗೌರಿಶಂಕರ್‌, ಮಾಜಿ ಶಾಸಕ ಕೋನರೆಡ್ಡಿ ಪಾಲ್ಗೊಂಡಿದ್ದರು.

ನಾನು ಕೊನೆಯವರೆಗೂ ಜೆಡಿಎಸ್‌ನಲ್ಲೇ ಇರುತ್ತೇನೆ. ನಾನು ಕಾಂಗ್ರೆಸ್‌ ಸೇರುವುದಾಗಿ ಹೇಳಲಾಗುತ್ತಿದೆ.ಯಾರು ಅದನ್ನು ಹಬ್ಬಿಸಿದರೋ ಗೊತ್ತಿಲ್ಲ. ಆ ಮಾತುಕತೆ ಎಲ್ಲಿ ಆಯಿತೋ ಗೊತ್ತಿಲ್ಲ. ನಾನು ಜೆಡಿಎಸ್‌ನ ನಿಷ್ಠಾವಂತೆ. ಶಾರದಾ ಪೂರ್ಯ ನಾಯಕ್‌, ಮಾಜಿ ಶಾಸಕಿ

Advertisement

Udayavani is now on Telegram. Click here to join our channel and stay updated with the latest news.

Next