ಶಿವಮೊಗ್ಗ: ಅಮಿತ್ ಶಾ ಅವರ ಭಾಷಣ 8ನೇ ಅದ್ಭುತವಿದ್ದಂತೆ. ತಮಿಳುನಾಡು, ತೆಲಂಗಾಣ ಲ್ಲಿ ಅಭಿವೃದ್ಧಿಯಾಗಿದೆ. ಹಾಗೆಯೇ ಪ್ರಾದೇಶಿಕ ಪಕ್ಷಗಳನ್ನು ಅಧಿಕಾರಕ್ಕೆ ತರಬೇಕು ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ತೀರ್ಥಹಳ್ಳಿ ತಾಲ್ಲೂಕು ಹುಂಚದಕಟ್ಟೆಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಅವರ ಮುಖ ನೋಡಿ ಮತ ಹಾಕಿ ಎನ್ನುತ್ತಿದ್ದಾರೆ. ಯಡಿಯೂರಪ್ಪನವರಿಗೆ ನಿವೃತ್ತಿ ನೀಡಿ ಇದೀಗ ಮೊದಲ ಬಾರಿಗೆ ಯಡಿಯೂರಪ್ಪ ಹೆಸರು ಹೇಳುತ್ತಿದ್ದಾರೆ. ಡಿಎನ್ಎ ವಿಚಾರ ಹೇಳಿದ್ದಕ್ಕೆ ಯಡಿಯೂರಪ್ಪ ಹೆಸರನ್ನ ಹೇಳುತ್ತಿದ್ದಾರೆ. ಇದುವರೆಗೂ ಮೋದಿ ಅಮಿತ್ ಶಾ ಮುಖ ನೋಡಿ ಎನ್ನುತ್ತಿದ್ದರು. ನನ್ನ ಡಿಎನ್ ಎ ಪರೀಕ್ಷೆ ಹೊಡೆತಕ್ಕೆ ಬಿಜೆಪಿಯರವರು ಯಡಿಯೂರಪ್ಪ ಅವರ ಹೆಸರನ್ನು ಹೇಳುತ್ತಿದ್ದಾರೆ ಎಂದರು.
ಇದನ್ನೂ ಓದಿ:‘ಭ್ರಷ್ಟಾಚಾರ ಸಹಿಸುವುದಿಲ್ಲ..’ ಪೊಲೀಸ್ ಆಯುಕ್ತರಾಗಿ ಕುಲದೀಪ್ ಕುಮಾರ್ ಅಧಿಕಾರ ಸ್ವೀಕಾರ
ನಮ್ಮ ಪಕ್ಷ ಕೇವಲ ಎರಡು ಜಿಲ್ಲೆಗಳಿಗೆ ಸೀಮಿತವಾಗಿಲ್ಲ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಖಾತೆ ತೆರೆಯುತ್ತೇವೆ. ಉತ್ತರ ಕರ್ನಾಟಕದಲ್ಲಿ ಈ ಬಾರಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಕರಾವಳಿ ಭಾಗದಲ್ಲಿ ನಾನು ಸಂಚರಿಸಿ ಪಕ್ಷ ಸಂಘಟನೆ ಮಾಡುತ್ತೇವೆ ಅಲ್ಲಿನ ಜನರ ನಾಡಿಮಿಡಿತ ತಿಳಿದುಕೊಳ್ಳುವೆ. ಉಳಿದಂತೆ ರಾಜ್ಯದಲ್ಲಿ ಜೆಡಿಎಸ್ ಪಕ್ಷ ಸಂಪೂರ್ಣವಾಗಿ ಗಟ್ಟಿಯಾಗಿದೆ ಎಂದರು.
ಶರಾವತಿ ನಿರಾಶ್ರಿತರಿಗೆ ಶಾಶ್ವತ ಪರಿಹಾರ ನೀಡಲು ನಾನು ನಿಮ್ಮ ಜೊತೆಗಿದ್ದೇನೆ. ಭದ್ರಾವತಿಯ ಎಂಪಿಎಂ, ವಿಐ ಎಸ್ ಎಲ್ ಕಾರ್ಖಾನೆ ಪುನಶ್ಚೇತನ ನಮ್ಮ ಪಂಚರತ್ನ ಯೋಜನೆಯಲ್ಲಿದೆ. ರಾಜ್ಯ ಸರ್ಕಾರದಿಂದಲೇ ಕಾರ್ಖಾನೆ ನಡೆಸಲು ಯೋಜನೆ ರೂಪಿಸುತ್ತೇನೆ. ಸಾಲಮನ್ನದಲ್ಲಿ ರೈತರಿಗೆ ಅನ್ಯಾಯವಾಗಿದೆ. ಕೂಡಿಟ್ಟ 1800 ಕೋಟಿ ಬೇರೆ ಕೆಲಸಕ್ಕೆ ಬಳಕೆ ಮಾಡಿಕೊಂಡಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಉಳಿದ ರೈತರ ಸಾಲಮನ್ನಾ ಮಾಡುತ್ತೇವೆ ಎಂದರು.