ಕೋಲಾರ: ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ವಿರುದ್ಧ ಸುಮೊಟೋ ದೂರು ದಾಖಲಿಸಬೇಕು. ಆತನ ವಿರುದ್ಧ ಸ್ವಯಂಪ್ರೇರಿತ ದೂರು ದಾಖಲಿಸಲು ಕಾನೂನಿನಲ್ಲಿ ಅವಕಾಶವಿದೆ, ಸರ್ಕಾರ ಇದನ್ನು ಲಘುವಾಗಿ ಪರಿಗಣಿಸದೇ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.
ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣವನ್ನು ಲಘುವಾಗಿ ಪರಿಗಣಿಸದೇ ಮೊಕದ್ದಮೆ ದಾಖಲಿಸಬೇಕು. ದಿನೇಶ್ ದೂರು ಕೊಟ್ಟಿರುವುದು ಮತ್ತು ಹಿಂಪಡೆಯಲು ನಿರ್ಧರಿಸುವ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜಕಾರಣಿಗಳು ಮತ್ತು ಸರ್ಕಾರದ ಗೌರವ ಉಳಿಸಿಕೊಳ್ಳಬೇಕಾಗಿದೆ, ಕೇಸ್ ವಾಪಸ್ ಪಡೆಯಲು ಕಾರಣವಾದ ಘಟನೆಗಳ ಬಗ್ಗೆ ಮೊದಲು ಸರ್ಕಾರ ತನಿಖೆ ನಡೆಸಿ ಬೆಳಕು ಚೆಲ್ಲಬೇಕಾಗಿದೆ, ಇದರ ಹಿಂದೆ ಯಾರ ಪ್ರೇರಣೆ ಇದೆ ಎಂಬುದು ಹೊರಬರಬೇಕು ಎಂದರು.
ಇದನ್ನೂ ಓದಿ:ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿಮೀರಿದೆ : ಸಿದ್ದರಾಮಯ್ಯ ಆರೋಪ
ಸಿಡಿ ಬಿಡುಗಡೆ ಹಣದ ವ್ಯವಹಾರ ಇಲ್ಲದೆ ಆಗುವುದಿಲ್ಲ. 5 ಕೋಟಿ ರೂ. ಡೀಲ್ ನಡೆದಿದೆ ಎಂಬ ಮಾತುಗಳಿವೆ, ಸಚಿವರ ರಾಜೀನಾಮೆ ಪಡೆಯುವ ಉದ್ದೇಶದಲ್ಲಿ ಸಫಲರಾಗಿದ್ದಾರೆ. ಸಚಿವರಿಂದ ನೊಂದಿದ್ದರೆ ಇಲ್ಲಿವರೆಗೂ ಸಂತ್ರಸ್ತೆ ಬಂದು ಯಾಕೆ ಹೇಳಿಲ್ಲ ಎಂದು ಕುಮಾ ರ ಸ್ವಾಮಿ ಪ್ರಶ್ನಿಸಿದರು.