Advertisement
ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಗೃಹ ಇಲಾಖೆ ಕೆಂಪಯ್ಯ ಉಸ್ತುವಾರಿಯಲ್ಲಿನಡೆಯುತ್ತಿರುವುದು ಸತ್ಯ. ಸಚಿವಗಿರಿಗಾಗಿ ರಾಮಲಿಂಗಾರೆಡ್ಡಿಯವರು ಮೌನ ವಹಿಸುವುದು ಬೇಡ. ಕೆಂಪಯ್ಯ ಅವರನ್ನು ದೂರ ಇಟ್ಟು ಇಲಾಖೆ ನಿಭಾಯಿಸಲಿ ಎಂದು ಸಲಹೆ ನೀಡಿದರು. ಪೊಲೀಸ್ ಇಲಾಖೆಯಲ್ಲಿ ಎಲ್ಲವೂ ಕೆಂಪಯ್ಯ ಅಣತಿಯಂತೆ ನಡೆಯುತ್ತಿದೆ. ನೀವು ಸಚಿವ ಸ್ಥಾನಕ್ಕಾಗಿ ಸ್ವಾಭಿಮಾನ ಬಿಡಬೇಡಿ ಎಂದು ಖುದ್ದು ರಾಮಲಿಂಗಾರೆಡ್ಡಿಯವರಿಗೆ ನಾನು ಹೇಳಿದ್ದೇನೆ. ಅವರು ಸ್ವತಂತ್ರವಾಗಿ ಕೆಲಸ ಮಾಡಲಿ. ಎಸ್‌ಐಟಿ ತನಿಖಾ
ತಂಡದ ಮುಖ್ಯಸ್ಥರ ನೇಮಕ ಯಾರ ಶಿಫಾರಸಿನ ಮೇಲೆ ಆಯಿತು, ಕಡತಕ್ಕೆ ಸಹಿ ಯಾರು ಹಾಕಿಸಿಕೊಂಡರು ಎಂಬುದೆಲ್ಲ ತಮಗೆ ಗೊತ್ತಿದೆ ಎಂದರು.