Advertisement
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೊದಲು ಸಿದ್ದರಾಮಯ್ಯ ಜಾತ್ಯಾತೀತ ವ್ಯಕ್ತಿಯಾಗಿದ್ದರು. ಕುಮಾರಸ್ವಾಮಿ ಅವರು ಹಿಂದೆ ಬಿಜೆಪಿ ಜತೆ ಸೇರಿದ್ದರು. ಕೋಮುವಾದಿ ಜತೆ ಕೈಜೊಡಿಸುತ್ತಾರೆ ಎಂದೆಲ್ಲ ನನ್ನ ಮೇಲೆ ಆರೋಪಿಸಿದ್ದರು. ಆದರೆ, ಅಂಥವರು ಈಗ ಜಾತಿ ಆಧಾರದಲ್ಲಿ ಬೆಂಬಲ ಸಿಗುತ್ತದೆಯೋ ಸಿಗುವುದಿಲ್ಲವೋ ಎಂದು ಲೆಕ್ಕ ಹಾಕುವ ಮಟ್ಟದ ನಾಯಕರಾಗಿದ್ದಾರೆ. ಇದನ್ನು ಅವರೇ ಯೋಚನೆ ಮಾಡಬೇಕು ಎಂದರು.
ಆದಾಯ ತೆರಿಗೆ ಇಲಾಖೆಯವರು ನನ್ನ ಮನೆ ಮೇಲೆ ದಾಳಿ ನಡೆಸಿದರೆ ದಾಖಲೆ ಸಿಗುವುದು ನನ್ನದಲ್ಲ; ಬಿಜೆಪಿಯವರದ್ದು. ನನ್ನ ಮನೆ ಮೇಲೆ ದಾಳಿ ಮಾಡಲು ಯಾರು ಬರುತ್ತಾರೆ? ದಾಳಿ ಮಾಡಲು ನಾನು ಅಂಥದ್ದೇನು ಮಾಡಿದ್ದೇನೆ? ನನ್ನಲ್ಲಿ ಅಂಥದೇನಿದೆ ಆಸ್ತಿ? ನಾನು ಅಧಿ ಕಾರದಲ್ಲಿದ್ದಾಗ ಸಂಪಾದನೆ ಮಾಡಿದ್ದು ಜನರ ಪ್ರೀತಿ-ವಿಶ್ವಾಸ ಮಾತ್ರ. ಅದರ ಮೇಲೆ ಐಟಿ ದಾಳಿ ನಡೆಸುತ್ತಾರಾ? ನಾನೇನಾದರು ಅಕ್ರಮವಾಗಿ ಆಸ್ತಿ ಗಳಿಸಿದ್ದೇನಾ? ರಾಜ್ಯದಲ್ಲಿ ಯಾರ ಮನೆ ಮೇಲೆ ದಾಳಿ ಮಾಡಿದರೂ ನನಗೇನೂ ಭಯವಿಲ್ಲ. ಯಾವ ಫೋನ್ ಟ್ಯಾಪಿಂಗ್, ವೈಟ್- ಬ್ಲಾ Âಕ್ ಟ್ಯಾಪಿಂಗ್ ಹೀಗೆ ಯಾವುದೇ ಟ್ಯಾಪಿಂಗ್ ಇರಲಿ ಯಾವುದೂ ಕುಮಾರಸ್ವಾಮಿಯನ್ನು ಏನೂ ಮಾಡಲು ಆಗಲ್ಲ ಎಂದರು.
Related Articles
ನಾನು ಬಿಜೆಪಿ ಪರ ಒಲವು ತೋರಿಲ್ಲ. ನಾನು ಯಾವ ದೃಷ್ಟಿಕೋನದಲ್ಲಿ ಯಾವ ಹೇಳಿಕೆ ನೀಡಿದ್ದೇನೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಕೆಲವರಿಗೆ ಪ್ರಸ್ತುತ ಸಾರ್ವತ್ರಿಕ ಚುನಾವಣೆಗೆ ಹೋಗುವ ಹಂಬಲವಿದೆ. ಆದರೆ, ಈಗ ಚುನಾವಣೆಗೆ ಹೋಗುವುದು ಸೂಕ್ತ ಸಂದರ್ಭವಲ್ಲ. ರಾಜ್ಯದ 13 ಜಿಲ್ಲೆಗಳಲ್ಲಿ ನೆರೆಯಿಂದ ದೊಡ್ಡ ಮಟ್ಟದ ಅನಾಹುತವಾಗಿದೆ. ಚುನಾವಣೆಗೆ ಹೋಗುವ ಮುನ್ನ ಬದುಕು ಕಟ್ಟಿ ಕೊಡುವ ಕೆಲಸ ಮಾಡಬೇಕಾಗಿದೆ. ಸರ್ಕಾರ ಅಸ್ಥಿರಗೊಳಿಸಿ ಚುನಾವಣೆಗೆ ಹೋಗುವುದು ಸೂಕ್ತವಲ್ಲ ಎಂಬ ಅರ್ಥದಲ್ಲಿ ಮಾತನಾಡಿದ್ದೇನೆ ಎಂದರು.
Advertisement
ಬಿಜೆಪಿಗೆ ಕಷ್ಟ:ಬಿಜೆಪಿ ನಡವಳಿಕೆ ನೋಡಿದಾಗ ಉಪಚುನಾವಣೆಯಲ್ಲಿ ಬಿಜೆಪಿಗೆ ಎಲ್ಲ 15 ಕ್ಷೇತ್ರಗಳಲ್ಲಿ ಕಷ್ಟವಿದೆ. ಜನ ಬಿಜೆಪಿ ನಡವಳಿಕೆ ನೋಡಿ ಬೇಸತ್ತಿದ್ದಾರೆ. ಉಪಚುನಾವಣೆಯ ಎಲ್ಲ ಕ್ಷೇತ್ರಗಳಲ್ಲಿ ಜೆಡಿಎಸ್ ಸ್ಪಧಿ ìಸಲಿದ್ದು ಜೆಡಿಎಸ್ ಈ ಹಿಂದೆ ಗೆದ್ದಿದ್ದ ಮೂರು ಕ್ಷೇತ್ರ ಸೇರಿದಂತೆ ಕನಿಷ್ಟ 7-8 ಕಡೆ ಗೆಲವು ಸಾ ಧಿಸಲಿದೆ. ನಮ್ಮ ರಾಜ್ಯದ ಖಜಾನೆ ಖಾಲಿ ಆಗಲ್ಲ. ಖಾಲಿ ಆಗುವ ಪರಿಸ್ಥಿತಿಗೂ ಜನ ತರಲ್ಲ. ಖಜಾನೆ ಸ್ಥಿತಿ ಚೆನ್ನಾಗಿಯೇ ಇದೆ. ಅದನ್ನು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕಷ್ಟೆ. ನನ್ನ ಹೇಳಿಕೆ ಬಗ್ಗೆ ಜಗದೀಶ ಶೆಟ್ಟರ್ ಗೊಂದಲ ಮಾಡಿಕೊಳ್ಳುವುದು ಬೇಡ. ಡಿ.5ರ ನಂತರ ಅರ್ಥ ಮಾಡಿಸುತ್ತೇನೆ ಎಂದರು.
ವಿಪ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಎನ್.ಎಚ್. ಕೋನರಡ್ಡಿ ಇದ್ದರು. ಚುನಾವಣಾ ಆಯೋಗ ಎಡವಿದೆ
ಕೇಂದ್ರ ಚುನಾವಣಾ ಆಯೋಗ ತನ್ನ ಜವಾಬ್ದಾರಿ ನಿರ್ವಹಣೆ ಮಾಡುವಲ್ಲಿ ಎಡವಿದೆ. ಆಯೋಗವು ರಾಜ್ಯದಲ್ಲಿ ಕಳೆದ 15 ದಿನಗಳಲ್ಲಿ ಚುನಾವಣೆ ಪ್ರಕ್ರಿಯೆಗೆ ಸಂಬಂ ಧಿಸಿ ತೆಗೆದುಕೊಂಡ ನಿಲುವು ಗಮನಿಸಿದಾಗ ಅದು ಸ್ವತಂತ್ರವಾಗಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಯಾರು ಬೇಕಾದರೂ ಊಹೆ ಮಾಡುತ್ತಾರೆ. ಆಯೋಗದ ಸ್ವಾಯತ್ತ ಹಕ್ಕು ಮೊಟಕುಗೊಳಿಸಲಾಗಿದೆ. ಆಯೋಗದ ಕಾರ್ಯವೈಖರಿಯು ಕಾಣದ ಶಕ್ತಿಗಳ ಸೂಚನೆ ಮೇರೆಗೆ ನಡೆಯುತ್ತಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.