Advertisement
ಅವರು ಗುರುವಾರ ರಾತ್ರಿ ಪಟ್ಟಣದ ರಿಕ್ಷಾ ಚಾಲಕರ ಮಾಲಕರ ಗಣೇಶೋತ್ಸವ ಮೈದಾನದಲ್ಲಿ ಪಂಚರತ್ನ ಯಾತ್ರೆಯ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
Related Articles
Advertisement
ಕಾಂಗ್ರೆಸ್ ಅಪಪ್ರಚಾರಕ್ಕೆ ಯಾವುದೇ ಕಾರಣಕ್ಕೂ ಮುಸ್ಲೀಮರು ಕಿವಿಗೊಡಬಾರದು ಎಂದ ಅವರು ಬಿಜೆಪಿಯವರಿಗೆ ಜನತೆ ವಿದ್ಯಾವಂತರಾಗುವುದು ಬೇಡವಾಗಿದೆ. ಜನತೆಯನ್ನು ಮತ್ತೆ ಮನುಕುಲಕ್ಕೆ ಕರೆದುಕೊಂಡು ಹೋಗುವುದು ಬೇಕಾಗಿದೆ. ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಪ್ರತಿ ಗ್ರಾಮ ಪಂಚಾಯತ್‌ಗೊಂದು 30 ಹಾಸಿಗೆ ಸುಸಜ್ಜಿತ ಆಸ್ಪತ್ರೆ ನಿರ್ಮಿಸುತ್ತೇವೆ. 3 ವೈದ್ಯರು, 30 ಸಿಬ್ಬಂದಿಗಳನ್ನು ಕೊಡುತ್ತೇನೆ. ಸಂಧ್ಯಾ ಸುರಕ್ಷಾ ಯೋಜನೆಯ ಮೊತ್ತವನ್ನು 5 ಸಾವಿರಕ್ಕೆ ಮತ್ತು ವಿಧವಾ ವೇತನವನ್ನು 2500ಕ್ಕೆ ಏರಿಕೆ ಮಾಡಲಾಗುವುದು ಎಂದರು.
ಜೆಡಿಎಸ್ ಮುಖಂಡ ಇನಾಯತುಲ್ಲಾ ಶಾಬಂದ್ರಿ ಪ್ರಸ್ತಾವಿಕ ಮಾತನಾಡಿ, ಭಟ್ಕಳದ ಸಮಸ್ಯೆಯನ್ನು ಬಗೆಹರಿಸುವಂತೆ ಮನವಿ ಮಾಡಿದರು. ಕುಮಟಾದ ಜೆಡಿಎಸ್ ಅಭ್ಯರ್ಥಿ ಸೂರಜ್ ನಾಯ್ಕ ಸೋನಿ ಮಾತನಾಡಿದರು. ವೇದಿಕೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಗಣಪಯ್ಯ ಗೌಡ, ಮಾಜಿ ಎಮ್ಮೆಲ್ಸಿ ರಮೇಶ ಗೌಡ, ಜೆಡಿಎಸ್ ತಾಲೂಕು ಅಧ್ಯಕ್ಷ ರಾಜವರ್ಧನ್ ನಾಯ್ಕ, ಮುಖಂಡರಾದ ಗಣಪತಿ ಭಟ್ಟ, ಅಲ್ತಾಪ್ ಖರೂರಿ, ಕೃಷ್ಣಾನಂದ ಪೈ, ಪಾಂಡುರಂಗ ನಾಯ್ಕ, ಮಂಜು ಗೊಂಡ, ವೆಂಕಟೇಶ ನಾಯ್ಕ, ದೇವಯ್ಯ ನಾಯ್ಕ ಮುಂತಾದವರಿದ್ದರು. ಕುಂದಾಪುರ ಜೆಡಿಎಸ್ ಕ್ಷೇತ್ರಾಧ್ಯಕ್ಷ ಹುಸೇನ್ ಹೈಕಾಡಿ ನಿರೂಪಿಸಿದರು.
ಕುಮಾರಸ್ವಾಮಿ ದರುಶನದ ವೇಳೆ ಹನುಮಂತನಿಂದ ಪ್ರಸಾದ ! ಭಟ್ಕಳದಲ್ಲಿನ ಜೆಡಿಎಸ್ ಸಮಾವೇಶಕ್ಕೆ ಬರುವ ಪೂರ್ವದಲ್ಲಿ ಕುಮಾರಸ್ವಾಮಿಯವರು ಶಿರಾಲಿಯ ಸಾರದಹೊಳೆ ಹಳೇಕೋಟೆ ಹನಮಂತ ದೇವಸ್ಥಾನಕ್ಕೆ ಭೇಟಿ ನೀಡಿದ್ದು ಹನುಮಂತನ ದರುಶನವನ್ನು ಪಡೆಯುತ್ತಿರುವಾಗಲೇ ದೇವರು ಪ್ರಸಾದ ನೀಡಿ ಹರಿಸಿರುವುದು ವಿಶೇಷವಾಗಿದ್ದು ಇದುವೇ ಭಟ್ಕಳ ಕ್ಷೇತ್ರಕ್ಕೆ ಶುಭ ಶಕುನ ಎಂದು ಹಲವರು ಮಾತನಾಡಿಕೊಂಡರು. ಕುಮಾರಸ್ವಾಮಿಯವರಿಗೂ ವಿಷಯ ತಿಳಿಸಿ ಪಂಚರತ್ನ ಯಾತ್ರೆಯ ಯಶಸ್ಸು ದೊರೆಯುವುದಕ್ಕೆ ಮುನ್ಸೂಚನೆ ಎಂದು ಹೇಳಿದರೆನ್ನಲಾಗಿದೆ. ಪಂಚರತ್ನ ಯಾತ್ರೆಯ ಮೂಲಕ ಹಳ್ಳಿ ಹಳ್ಳಿಗೂ ಭೇಟಿ ನೀಡಿದ್ದೇನೆ. ಭಟ್ಕಳಕ್ಕೆ ಇನಾಯತ್‌ವುಲ್ಲಾ ಅವರ ಒತ್ತಾಯಕ್ಕೆ ಬಂದಿದ್ದು ಇಡೀ ನನ್ನ ಯಾತ್ರೆಯಲ್ಲಿ ಅತ್ಯಂತ ಕಡಿಮೆ ಜನ ಸೇರಿದ್ದು ಭಟ್ಕಳದಲ್ಲಿ ಮಾತ್ರ ಎಂದು ತಮ್ಮ ಅಸಾಮಾಧಾನವನ್ನು ಕುಮಾರಸ್ವಾಮಿ ಹೊರ ಹಾಕಿದರು. ಸಭೆಯಲ್ಲಿ ತಮ್ಮ ಭಾಷಣದುದ್ದಕ್ಕೂ ಅಲ್ಪ ಸಂಖ್ಯಾತರ ಕುರಿತೇ ಮಾತನಾಡಿದ್ದ ಕುಮಾರಸ್ವಾಮಿ ಸಭೆಯಲ್ಲಿ ಅಲ್ಪ ಸಂಖ್ಯಾತರೇ ಕೇವಲ ಕೆಲವು ಸಂಖ್ಯೆಲ್ಲಿದ್ದುದು ವಿಶೆಷವಾಗಿತ್ತು.