ಬನ್ನೂರು: ಪಟ್ಟಣವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕೆನ್ನುವುದು ಈ ಭಾಗದ ಬಹುಜನರ ಬೇಡಿಕೆಯಾಗಿದ್ದು, 2023ಕ್ಕೆ ಜೆಡಿಎಸ್ ಅಧಿಕಾರಕ್ಕೆ ಬಂದಲ್ಲಿ ಬನ್ನೂರನ್ನು ತಾಲೂಕು ಕೇಂದ್ರವಾಗಿಮೇಲ್ದರ್ಜೆಗೇರಿಸುವುದಾಗಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದರು.
ಪಟ್ಟಣದ ಸಮೀಪದ ತುರಗನೂರು ಗ್ರಾಮದ ಲಕ್ಷ್ಮಿ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ನಡೆದ ಮೈಸೂರು ಚಾಮರಾಜನಗರ ವಿಧಾನ ಪರಿಷತ್‌ಚುನಾವಣೆ ಜೆಡಿಎಸ್ ಅಭ್ಯರ್ಥಿ ಸಿ.ಎನ್. ಮಂಜೇಗೌಡರ ಪರ ಪ್ರಚಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಪರಿಹಾರ ಸಿಕ್ಕಿಲ್ಲ; ಕಳೆದ 3 ವಿಧಾನಸಭಾ ಚುನಾವಣೆಯಲ್ಲಿ ಆಗಿರುವ ಲೋಪದೋಷ ಪರಿಹರಿಸಿಕೊಂಡು 2023ರಲ್ಲಿ ಪಕ್ಷವನ್ನುಅಧಿಕಾರಕ್ಕೆ ತರಲಾಗುವುದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಒಂದು ಜನಾಂಗದ ಮೇಲೆ ಮಾಡಿದ ಅಪಪ್ರಚಾರದಿಂದ 75 ಸ್ಥಾನ ಗೆಲ್ಲಬೇಕಿದ್ದಪಕ್ಷ 30ಕ್ಕೆ ಕುಸಿಯಿತು ಎಂದು ವಿಷಾದಿಸಿದರು. ಬೆಳೆ ಪರಿಹಾರ ಸಿಕ್ಕಿಲ್ಲ. ಬೆಳೆ ವಿಮೆಯಲ್ಲೂದೋಖಾ ಆಗಿದೆ. ಚಾಮರಾಜನಗರದಲ್ಲಿಆಕ್ಸಿಜನ್ ಕೊರತೆಯಿಂದ 28 ಮಂದಿ ಮೃತಪಟ್ಟಿದ್ದು, ಅವರಿಗೂ ಇನ್ನೂ ಪರಿಹಾರ ದೊರಕಿಲ್ಲ ಎಂದು ದೂರಿದರು.
ಉಚಿತ ಶಿಕ್ಷಣ ಉದ್ದೇಶ: ಗ್ರಾಮೀಣ ಜನರ ಆರೋಗ್ಯದ ದೃಷ್ಟಿಯಿಂದ ರಾಜ್ಯದ 6 ಸಾವಿರಗ್ರಾಪಂ ವ್ಯಾಪ್ತಿಯಲ್ಲೇ ಆಸ್ಪತ್ರೆ ತೆರೆದು ಅಲ್ಲಿ ಹೆರಿಗೆ,ಐಸಿಯೂ ಸೇರಿ ಎಲ್ಲಾ ಸೌಲಭ್ಯ ಹೊಂದಿರುವಂತೆ ಮಾಡಿ ಜನ ನಗರ ಪ್ರದೇಶಗಳಿಗೆ ಹೋಗುವುದನ್ನು ತಪ್ಪಿಸುತ್ತೇನೆ. ಎಲ್‌ಕೆಜಿಯಿಂದ 12 ನೇ ತರಗತಿವರೆಗೆ ಎಲ್ಲ ಮಕ್ಕಳಿಗೂ ಉಚಿತ ಶಿಕ್ಷಣ ನೀಡುವ ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಪಕ್ಷದ ಯಾವುದೇ ಮುಖಂಡರನ್ನು ನಂಬಿ ಕೊಂಡು ಪಕ್ಷ ರೂಪಿಸಿಲ್ಲ. ಪಕ್ಷಕ್ಕೆ ಕಾರ್ಯಕರ್ತರೇ ಜೀವಾಳ. ಪಕ್ಷಕ್ಕೆ ಹೆಚ್ಚಿನ ಜೀವ ತುಂಬಬೇಕಾದರೆಪಕ್ಷದ ಅಭ್ಯರ್ಥಿ ಮಂಜೇಗೌಡರನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಗೆಲ್ಲಿಸಿ: ಮೈಸೂರು-ಚಾಮರಾಜನಗರ ವಿಧಾನ ಪರಿಷತ್ ಚುನಾವಣೆ ಜೆಡಿಎಸ್ ಅಭ್ಯರ್ಥಿ ಸಿ.ಎನ್. ಮಂಜೇಗೌಡ ಮಾತನಾಡಿ, ತಾವು ಓರ್ವ ಗಡಿ ಕಾಯ್ದ ಯೋಧನಾಗಿದ್ದು, ತನಗೆ ಅಧಿಕಾರ ನೀಡಿದರೆ ಗ್ರಾಮ ಪಂಚಾಯ್ತಿ ಸದಸ್ಯರ ಕಾಯುವುದಾಗಿತಿಳಿಸಿದ ಅವರು ಕುಮಾರಸ್ವಾಮಿಯವರ ಕೈಬಲಪಡಿಸಲು ತಮ್ಮನ್ನು ಗೆಲ್ಲಿಸುವಂತೆ ಮನವಿ ಮಾಡಿದರು.
ಪಿರಿಯಾಪಟ್ಟಣ ಶಾಸಕ ಮಹದೇವು, ಶಾಸಕ ಅಶ್ವಿನ್ ಕುಮಾರ್, ವೈ.ಎಸ್. ರಾಮಸ್ವಾಮಿ, ಚಿನ್ನಸ್ವಾಮಿ, ಕುಮಾರಸ್ವಾಮಿ ಬಳಗದ ರಾಜ್ಯಾಧ್ಯಕ್ಷ ಬಿ.ಆರ್. ಮಂಜುನಾಥ್,ವಿವಿಧ ಗ್ರಾಪಂ ಅಧ್ಯಕ್ಷರು, ಸದಸ್ಯರು, ಪುರಸಭೆ ಸದಸ್ಯರು, ಜೆಡಿಎಸ್ ಕಾರ್ಯಕರ್ತರು ಇದ್ದರು.