ಎಚ್.ಡಿ.ಕೋಟೆ: ಸರ್ಕಾರಿ ಆಸ್ಪತ್ರೆಯಲ್ಲಿ ಹಣ ನೀಡಿದರಷ್ಟೇ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಮಾಡಲಾಗುತ್ತದೆ ಹಣ ಇಲ್ಲದವರಿಗೆ ವೈದ್ಯರುಸಬೂಬು ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ ಎಂಬಆರೋಪಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿವೆ.
ಸಂತಾನ ಹರಣ ಶಸ್ತ್ರಚಿಕಿತ್ಸೆ ಪಡೆಯಲು ಆಸ್ಪತ್ರೆಗೆಹೋದರೆ ಅಧಿಕ ರಕ್ತದೊತ್ತಡ, ರಕ್ತ ಹೀನತೆ, ಮಧುಮೇಹ ಮತ್ತಿತರ ಸಮಸ್ಯೆಗಳು ಇವೆ. ಹೀಗಾಗಿ ನಿಮಗೆ ಮುಂದಿನ ಕ್ಯಾಂಪ್‌ನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂಬ ಸಿದ್ಧ ಉತ್ತರ ಸಿಗುತ್ತದೆ ಎಂದು ನಾಗರಿಕರು ದೂರಿದ್ದಾರೆ.
ಎಚ್.ಡಿ.ಕೋಟೆ ಹಿಂದುಳಿದ ತಾಲೂಕು. ಇಲ್ಲಿ ಬಡಜನರು ಹಾಗೂ ಅನಕ್ಷರಸ್ಥರ ಜೊತೆಗೆಆದಿವಾಸಿಗರೇ ಬಹುಸಂಖ್ಯೆಯಲ್ಲಿದ್ದಾರೆ. ಕಳೆದಒಂದು ವರ್ಷದಿಂದ ಕೊರೊನಾ ಅಟ್ಟಹಾಸದಪರಿಣಾಮವಾಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಗೆ ತಡೆ ನೀಡಲಾಗಿತ್ತು. ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೂ ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿತ್ತು. ಹೀಗಾಗಿ ಸಾವಿರಾರು ಮಹಿಳೆಯರು ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಕೊಳ್ಳಲು ಆಗಿರಲಿಲ್ಲ. ಇತ್ತೀಚೆಗಷ್ಟೇ ತಿಂಗಳಲ್ಲಿ 2 ಬಾರಿ ತಾಲೂಕು ಕೇಂದ್ರ ಸ್ಥಾನದ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂತಾಹ ಹರಣ ಶಸ್ತ್ರಚಿಕಿತ್ಸೆಗೆ ಅವಕಾಶ ಕಲ್ಪಿಸಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಸರ್ಕಾರಿ ಆಸ್ಪತ್ರೆ ವೈದ್ಯರು 3 ರಿಂದ 4 ಸಾವಿರ ರೂ. ನೀಡಿದರೆ ಮಾತ್ರ ಶಸ್ತ್ರಚಿಕಿತ್ಸೆ ನೆರವೇರಿಸುತ್ತಿದ್ದಾರೆ.ಇಲ್ಲದಿದ್ದರೆ ಸಬೂಬು ಹೇಳಿ ವಾಪಸ್ ಕಳುಹಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ತಾಲೂಕಿನ ಹಲವು ಮಂದಿ ಖುದ್ದಾಗಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಪರಿಮಳಾಮತ್ತು ಅವರ ಪತಿ ಶ್ಯಾಂಸುಂದರ್ ಅವರಲ್ಲಿದೂರು ಹೇಳಿಕೊಂಡಿರುವುದಾಗಿ ಶ್ಯಾಂಸುಂದರ್ ಮೌಖಿಕವಾಗಿ ತಿಳಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಹುತೇಕ ಚಿಕಿತ್ಸೆಗಳನ್ನು ಉಚಿತವಾಗಿಯೇ ನೀಡಬೇಕಿದೆ. ಅದರಲ್ಲೂಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನು ಉಚಿತವಾಗಿಯೇ ಮಾಡಬೇಕಿದೆ. ಯಾವುದೇ ಕಾರಣಕ್ಕೂಹಣ ಪಡೆಯುವಂತಿಲ್ಲ. ಅಲ್ಲದೇ ವೈದ್ಯರು ಹಾಗೂ ಸಿಬ್ಬಂದಿಗಳೇ ಅರ್ಹ ಮಹಿಳೆಯರಿಗೆಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಲು ಪ್ರೇರೇಪಿಸಬೇಕಿದೆ. ಪರಿಸ್ಥಿತಿ ಹೀಗಿರುವಾಗ ಹಣಪಡೆದು ಶಸ್ತ್ರಚಿಕಿತ್ಸೆ ನಡೆಸುವುದು ಎಷ್ಟರಮಟ್ಟಿಗೆ ಸರಿ?, ಈ ಕುರಿತು ಜನಪ್ರತಿನಿಧಿಗಳು ಹಾಗೂಮೇಲಧಿಕಾರಿಗಳು ಗಮನಹರಿಸಿ ಅರ್ಹಮಹಿಳೆಯರಿಗೆ ಸಕಾಲದಲ್ಲಿ ಶಸ್ತ್ರಚಿಕಿತ್ಸೆ ನಡೆಸಲುಅವಕಾಶ ಕಲ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಆಸ್ಪತ್ರೆಯಲ್ಲಿ ಯಾರಿಂದಲೂ ಹಣ ಪಡೆದಿಲ್ಲ: ಆಡಳಿತಾಧಿಕಾರಿ :
ಆಸ್ಪತ್ರೆಯಲ್ಲಿ ನಾವು ಯಾರಿಂದಲೂ ಹಣ ಪಡೆದುಕೊಂಡಿಲ್ಲ, ತಿಂಗಳಲ್ಲಿ 2 ಬಾರಿ ಸಂತಾಹ ಹರಣ ಶಸ್ತ್ರಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಯ ವೈದ್ಯರ ತಂಡ ಆಗಮಿಸುತ್ತಿದೆ. ಚಿಕಿತ್ಸೆಗೆ ಒಳಗಾಗಬೇಕಾದವರು ಎಚ್‌ಐವಿ, ಕೋವಿಡ್ ಮತ್ತಿತರ ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಿಸಬೇಕು. ಅಧಿಕರಕ್ತದೊತ್ತಡ, ಮಧುಮೇಹ ಮತ್ತಿತರ ಅರೋಗ್ಯ ಸಮಸ್ಯೆ ಇರುವವರೆಗೆ ಶಸ್ತ್ರ ಚಿಕಿತ್ಸೆ ಮುಂದೂಡಲಾಗುವುದು ಎಂದು ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ|.ಭಾಸ್ಕರ್ ತಿಳಿಸಿದ್ದಾರೆ.
ಹಣಕ್ಕೆ ಪೀಡಿಸುವ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಿ : ತಾಲೂಕು ಕೇಂದ್ರದ ಸರ್ಕಾರಿ ಆಸ್ಪತ್ರೆಯಲ್ಲಿ 3 ರಿಂದ 4 ಸಾವಿರ ರೂ. ನೀಡಿದರೆಮಾತ್ರ ಸಂತಾನ ಹರಣ ಶಸ್ತ್ರ ಚಿಕಿತ್ಸೆ ಲಭಿಸುತ್ತದೆ. ಹಣ ಇಲ್ಲವಾದರೆ ಬಿಪಿ, ಶುಗರ್ ನೆಪದಲ್ಲಿ ಶಸ್ತ್ರಚಿಕಿತ್ಸೆ ನೆರವೇರಿಸುತ್ತಿಲ್ಲ ಎಂಬ ದೂರುಗಳಿವೆ. ಈ ಕುರಿತು ಜಿಲ್ಲಾಆರೋಗ್ಯಾಧಿಕಾರಿಗಳಿಗೆ ನಾನೇ ಖುದ್ದು ದೂರು ಹೇಳಿಕೊಂಡಿದ್ದೇನೆ. ಹಣಕೇಳುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಅರ್ಹ ಬಡಜನತೆಗೆ ಉಚಿತವಾಗಿಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಆರೋಗ್ಯ ಇಲಾಖೆ ಮುಂದಾಗಬೇಕು ಎಂದು ಅಂತರಸಂತೆ ಶ್ಯಾಂಸುಂದರ್ ಮನವಿ ಮಾಡಿದ್ದಾರೆ.
–ಎಚ್.ಬಿ.ಬಸವರಾಜು