Advertisement
ಪ್ರಸಕ್ತ ವಿದ್ಯಮಾನಗಳು ಹಾಗೂ ದೆಹಲಿಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿಯವರನ್ನು ಭೇಟಿ ಮಾಡಿದ ನಂತರದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಚ್.ಡಿ.ದೇವೇಗೌಡರ “ವರಸೆ’ ಬದಲಾಗಿದ್ದು,ಚುನಾವಣೆಗೆ ಹೋಗೋಣ ಆ ನಂತರ ಮುಂದಿನ ಮಾತು ಎಂದು ಖಡಕ್ ನಿರ್ಧಾರಕ್ಕೆ ಬಂದಿದ್ದಾರೆ.
ದೇವೇಗೌಡರು ಆ ನಿಟ್ಟಿನಲ್ಲಿ ಬಹಳ ದೂರ ಹೋಗಿದ್ದಾರೆ ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ. ಪಕ್ಷದ ನಾಯಕರು ಯಾರಾದರೂ ಕೇಳಿದರೆ, ಚುನಾವಣೆ ಯಾವಾಗಲಾದರೂ ಬರಲಿ ಪಕ್ಷ ಕಟ್ಟುವುದುಬೇಡವೇನ್ರಿ ಎಂದು ಪ್ರಶ್ನಿಸುತ್ತಿದ್ದಾರೆ. ಸಿದ್ದರಾಮಯ್ಯಅವರು ಮತ್ತೆ ಅಹಿಂದ ಸಮಾವೇಶಗಳತ್ತ ಮುಖಮಾಡಿರುವುದರಿಂದ ಏನೋ ಬದಲಾವಣೆ ನಡೆಯುತ್ತಿದೆ ಎಂಬ ಸುಳಿವು ಗೌಡರಿಗೆ ಸಿಕ್ಕಿದೆ.
Related Articles
Advertisement
ಮತ್ತೂಂದು ಮೂಲಗಳ ಪ್ರಕಾರ, ರಾಜ್ಯದಲ್ಲಿ ಕಾಂಗ್ರೆಸ್ ನಾಯಕರು ಒಳಗೊಳಗೆ ಸಮ್ಮಿಶ್ರ ಸರ್ಕಾರ ಪತನಕ್ಕೆ ನಡೆಸುತ್ತಿರುವ ಪ್ರಯತ್ನಕ್ಕೆ ಬ್ರೇಕ್ ಹಾಕುವ ತಂತ್ರಗಾರಿಕೆ ಹಾಗೂ ಸಿದ್ದರಾಮಯ್ಯ ಅವರ ಕೈ ಮೇಲಾಗದಂತೆ ತಡೆಯುವ ಯತ್ನವೂ ಇರಬಹುದು ಎಂದು ಹೇಳಲಾಗುತ್ತಿದೆ.
‘ನಾವು ಚುನಾವಣೆಗೆ ಸಿದ್ದ. ನಿಮಗೆ ಸರ್ಕಾರ ಬೇಡ ಎಂದಾರೆ ನಮಗೂ ಬೇಡ’ ಎಂಬ ಸಂದೇಶವನ್ನು ದೇವೇಗೌಡರು ಕಾಂಗ್ರೆಸ್‌ಗೆ ರವಾನಿಸಿದ್ದಾರೆ. ಪ್ರಸಕ್ತ ವಿದ್ಯಮಾನಗಳು ಇದಕ್ಕೆ ಪುಷ್ಠಿ ನೀಡುವಂತಿವೆ.
ಎಚ್.ಡಿ.ಕುಮಾರಸ್ವಾಮಿ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಆಸಕ್ತಿ ಹೊಂದಿದ್ದಾರೆ. ಆದರೆ, ದೇವೇಗೌಡರು ಪಕ್ಷ ಉಳಿಸಿಕೊಳ್ಳುವ ಬಗ್ಗೆ ತಲೆಕೆಡಿಸಿ ಕೊಂಡಿದ್ದಾರೆ. ಹೀಗಾಗಿ, ಮತ್ತೆ ಅವರೇ ಪಕ್ಷ ಸಂಘಟನೆಗೆ ಮುಂದಾಗಿದ್ದಾರೆ.ಸರ್ಕಾರ ಉಳಿಸಿಕೊಳ್ಳುವುದು ಕುಮಾರಸ್ವಾಮಿಗೆ ಬಿಟ್ಟಿದ್ದು. ನಾನು ಪಕ್ಷ ಕಟ್ಟು ತ್ತೇನೆ ಎಂದು ಹೇಳಿರುವ ಅವರು, ವಿಧಾನಸಭೆ ಹಾಗೂ ಲೋಕಸಭೆ ಚುನಾ ವಣೆಯಲ್ಲಿ ಸೋಲು ಅನುಭವಿಸಿ ನಮ್ಮದೇನೂ ನಡೆಯಲ್ಲ ಎಂದು ಸುಮ್ಮನಿ ದ್ದವರನ್ನು ಮತ್ತೆ ಬಡಿದೆಬ್ಬಿಸುವ ಕೆಲಸ ಮಾಡುತ್ತಿದ್ದಾರೆ. ಮತಗಳಿಕೆ ಲೆಕ್ಕಾ ಚಾರದಲ್ಲೇ ದಲಿತ ಬಲಗೈ ಪಂಗಡದ ಎಚ್.ಕೆ. ಕುಮಾರಸ್ವಾಮಿ ಯವರನ್ನು ರಾಜ್ಯಾಧ್ಯಕ್ಷರ ನೇಮಕಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
-ಎಸ್. ಲಕ್ಷ್ಮಿನಾರಾಯಣ