Advertisement

ಚುನಾವಣಾ ಪ್ರಚಾರ: ಫ್ಲೆಕ್ಸ್‌ ಬಳಕೆಗೆ ಕೇರಳ ಹೈಕೋರ್ಟ್‌ ನಿಷೇಧ

11:40 AM Mar 11, 2019 | Team Udayavani |

ಕೊಚ್ಚಿ : ಲೋಕಸಭೆ ಚುನಾವಣೆಗಳಿಗೆ ಮುನ್ನವೇ ಕೇರಳ ಹೈಕೋರ್ಟ್‌ ಫ್ಲೆಕ್ಸ್‌ ಮತ್ತಿತರ ಪ್ರಕೃತಿಯಲ್ಲಿ ಕರಗಿ ಹೋಗದ ವಸ್ತುಗಳನ್ನು ಪ್ರಚಾರಕ್ಕೆ ಬಳಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. 

Advertisement

ಮುಂಬರುವ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ ಫ್ಲೆಕ್ಸ್‌ ಮತ್ತು ಪರಿಸರಕ್ಕೆ ಮಾರಕವಾಗಬಲ್ಲ ವಸ್ತುಗಳನ್ನು ಬಳಸುವುದನ್ನು ನಿಷೇಧಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಪುರಸ್ಕರಿಸಿದ ಮುಖ್ಯ ನ್ಯಾಯಾಧೀಶ ಹೃಷೀಕೇಶ್‌ ರಾಯ್‌ ಮತ್ತು ಜಸ್ಟಿಸ್‌ ಎ ಕೆ ಜಯಶಂಕರನ್‌ ನಂಬಿಯಾರ್‌ ಅವರನ್ನು ಒಳಗೊಂಡ ಪೀಠ ಮಧ್ಯಾಂತರ ಆದೇಶವನ್ನು ಹೊರಡಿಸಿತು. 

ತಿರುವನಂತಪುರದ ಅಟ್ಟಿಂಗಳ ದ ಶ್ಯಾಮ ಕುಮಾರ್‌ ಎಂಬವರು ಚುನಾವಣೆ ಪ್ರಚಾರಕ್ಕೆ  ಫ್ಲೆಕ್ಸ್‌ ನಿಷೇಧಿಸುವಂತೆ ಕೋರಿ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next