ಕಂಪ್ಲಿ(ಬಳ್ಳಾರಿ ಜಿಲ್ಲೆ): ಆ.21 ರಂದು ನಡೆಯಬೇಕಿದ್ದ ಕಂಪ್ಲಿ ಪುರಸಭೆಯ ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ಧಾರವಾಡ ಹೈಕೋಟ್೯ ತಡೆಯಾಜ್ಞೆ ನೀಡಿದ್ದು, ವಿಚಾರಣೆಯನ್ನು ಆ. 28 ಕ್ಕೆ ಮುಂದೂಡಿದೆ.
ಪುರಸಭೆಯ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ವರ್ಗಕ್ಕೆ ಮೀಸಲಾಗಿದ್ದು, ಸರದಿ (ರೊಟೇಷನ್ ಪ್ರಕಾರ) ಪ್ರಕಾರ ಪುರಸಭೆ ಅಧ್ಯಕ್ಷ ಸ್ಥಾನ ಪರಿಶಿಷ್ಟ ವರ್ಗಕ್ಕೆ ಮೀಸಲು ನಿಗಧಿಯಾಗಬೇಕಿತ್ತೆಂದು ಪುರಸಭೆಯ ಸದಸ್ಯ ಎನ್.ರಾಮಾಂಜಿನೇಯಲು ಧಾರವಾಡ ಹೈಕೋಟ್೯ಗೆ ಸೂಕ್ತ ದಾಖಲೆಗಳನ್ನು ಸಲ್ಲಿಸಿದ್ದರು.
ದಾಖಲೆಗಳನ್ನು ಪರಿಶೀಲಿಸಿದ ಧಾರವಾಡ ಹೈಕೋಟ್೯ ಪೀಠ ಆ.21 ಅಧ್ಯಕ್ಷ, ಉಪಾಧ್ಯಕ್ಷರ ಚುನಾವಣೆಗೆ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ಆ.28ಕ್ಕೆ ಮುಂದೂಡಿದೆ.
ಕಳೆದ 17 ತಿಂಗಳುಗಳಿಂದ ಪುರಸಭೆಯಲ್ಲಿ ಚುನಾಯಿತ ಪ್ರತಿನಿಧಿಗಳ ಅಧಿಕಾರವಿಲ್ಲದೇ ನಿರಾಶರಾಗಿದ್ದ ಸದಸ್ಯರುಗಳಿಗೆ ಸರ್ಕಾರ ಇತ್ತೀಚೆಗೆ ಮೀಸಲಾತಿ ಆದೇಶ ಅಧ್ಯಕ್ಷ, ಉಪಾಧ್ಯಕ್ಷ ಆಕಾಂಕ್ಷಿಗಳಿಗೆ ಸಂತಸವನ್ನು ತಂದಿದ್ದು, ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದವು. ಆದರೆ ಧಾರವಾಢ ಹೈಕೋಟ್೯ ಪೀಠ ನೀಡಿರುವ ತಡಯಾಜ್ಞೆ ಅವರಿಗೆ ಆಶಾಭಂಗವನ್ನುಂಟು ಮಾಡಿದೆ.
ಇದನ್ನೂ ಓದಿ: Bengaluru ಜೆ.ಪಿ.ನಗರ ಕುಕ್ಕರ್ ಸ್ಫೋಟ ಪ್ರಕರಣ: ಎನ್‌ಐಎ ತಂಡದಿಂದಲೂ ಪರಿಶೀಲನೆ