Advertisement

ರೇಪ್ ಕೇಸ್; ಬಿಜೆಪಿ ನಾಯಕ ಶಹನವಾಜ್ ವಿರುದ್ಧ ಎಫ್‌ಐಆರ್ ದಾಖಲಿಸಲು ಆದೇಶ

03:09 PM Aug 18, 2022 | Team Udayavani |

ನವದೆಹಲಿ: ಮಹಿಳೆಯೊಬ್ಬರು ನೀಡಿದ ಅತ್ಯಾಚಾರ ಆರೋಪದ ದೂರಿನ ಕುರಿತು ಬಿಜೆಪಿ ನಾಯಕ ಶಹನವಾಜ್ ಹುಸೇನ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೆಹಲಿ ಹೈಕೋರ್ಟ್ ಆದೇಶಿಸಿದೆ.

Advertisement

2018ರಲ್ಲಿ ಅತ್ಯಾಚಾರ ಆರೋಪದಡಿ ಮಹಿಳೆಯೊಬ್ಬರು ನೀಡಿದ ದೂರಿನ ಕುರಿತು ಎಫ್‌ಐಆರ್‌ ದಾಖಲಿಸಲು ಪೊಲೀಸರಿಗೆ ಸಂಪೂರ್ಣ ನಿರಾಸಕ್ತಿ ಇದೆ ಎಂಬುದನ್ನು ಗಮನಿಸಿದ ನ್ಯಾಯಮೂರ್ತಿ ಆಶಾ ಮೆನನ್‌, ಎಫ್‌ಐಆರ್‌ ದಾಖಲಿಸಲು ನಿರ್ದೇಶಿಸಿರುವ 2018ರ ವಿಚಾರಣಾ ಆದೇಶದಲ್ಲಿ ಯಾವುದೇ ವಿಕೃತಿ ಇಲ್ಲ ಎಂದು ಹೇಳಿ, ಕಾರ್ಯಾಚರಣೆಗೆ ತಡೆ ನೀಡಿದ್ದ ನ್ಯಾಯಾಲಯದ ಮಧ್ಯಂತರ ಆದೇಶವನ್ನು ತೆರವು ಮಾಡಿದರು.

“ ಕೂಡಲೇ ಎಫ್‌ಐಆರ್‌ ದಾಖಲಿಸಬೇಕು. ತನಿಖೆಗಳನ್ನು ಪೂರ್ಣಗೊಳಿಸಬೇಕು ಮತ್ತು ಸೆಕ್ಷನ್ 173 ಸಿ ಆರ್ ಪಿಸಿ ಅಡಿಯಲ್ಲಿ ವಿವರವಾದ ವರದಿಯನ್ನು ನೀಡಬೇಕು. ಮೂರು ತಿಂಗಳೊಳಗೆ  ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸಬೇಕು,” ಎಂದು ನ್ಯಾಯಾಲಯ ಬುಧವಾರ ತನ್ನ ಆದೇಶದಲ್ಲಿ ತಿಳಿಸಿದೆ.

ಅತ್ಯಾಚಾರದ ಆರೋಪದ ಮೇಲೆ ಹುಸೇನ್ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ದೆಹಲಿ ಮೂಲದ ಮಹಿಳೆಯೊಬ್ಬರು ಕೆಳ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ಕಿಡಿ ಕಾರಿದ ರಾಹುಲ್ ಗಾಂಧಿ

Advertisement

ಕ್ರಿಮಿನಲ್‌ಗಳಿಗೆ ಬಿಜೆಪಿಯ ಬೆಂಬಲವು ಮಹಿಳೆಯರ ಬಗ್ಗೆ ಪಕ್ಷದ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿ ಟ್ವೀಟ್ ಮಾಡಿದ್ದು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂತಹ ರಾಜಕಾರಣ ಮಾಡಿರುವುದು ನಾಚಿಕೆಯಾಗುವುದಿಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಉತ್ತರ ಪ್ರದೇಶದ ಉನ್ನಾವ್, ಹತ್ರಾಸ್, ಜಮ್ಮು- ಕಾಶ್ಮೀರದ ಕಥುವಾ ಮತ್ತು ಈಗ ಗುಜರಾತ್‌ನಲ್ಲಿ ನಡೆದ ಅತ್ಯಾಚಾರ ಪ್ರಕರಣಗಳ ಉದಾಹರಣೆಗಳನ್ನು ಅವರು ಉಲ್ಲೇಖಿಸಿ, ಅಲ್ಲಿ ಸರಕಾರವು ಈ ವಾರ 2002 ರ ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಅತ್ಯಾಚಾರ ಮತ್ತು ಹತ್ಯೆಯ ಅಪರಾಧಿಗಳನ್ನು ಬಿಡುಗಡೆ ಮಾಡಿದೆ. “ಉನ್ನಾವ್ – ಬಿಜೆಪಿ ಶಾಸಕರನ್ನು ಉಳಿಸಲು ಕೆಲಸ ಮಾಡಿದೆ. ಕಥುವಾ – ಅತ್ಯಾಚಾರಿಗಳ ಪರವಾಗಿ ರ‍್ಯಾಲಿ. ಹತ್ರಾಸ್ – ಅತ್ಯಾಚಾರಿಗಳ ಪರವಾಗಿ ಸರಕಾರ. ಗುಜರಾತ್ – ಅತ್ಯಾಚಾರಿಗಳ ಬಿಡುಗಡೆ ಮತ್ತು ಗೌರವ. ಕ್ರಿಮಿನಲ್‌ಗಳಿಗೆ ಬೆಂಬಲ ನೀಡುವುದು ಮಹಿಳೆಯರ ಬಗ್ಗೆ ಬಿಜೆಪಿಯ ಕ್ಷುಲ್ಲಕ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next