Advertisement

ಹೆಝಲ್‌ ಮನೆಯಲ್ಲಿ  ಮುಗಿಲು ಮುಟ್ಟಿದ ಶೋಕ

11:07 AM Sep 28, 2018 | Team Udayavani |

ಶಿರ್ವ: ವಿದೇಶಿ ನೆಲದಲ್ಲಿ ಸಾವನ್ನಪ್ಪಿದ ನರ್ಸ್‌ ಹೆಝೆಲ್‌ ಮುಖ ನೋಡಲು 71 ದಿನಗಳಿಂದ ಪರಿತಪಿಸುತ್ತಿದ್ದ ಆಕೆಯ ಪತಿ, ಹೆತ್ತವರ ಆಕ್ರಂದನ ಗುರುವಾರ ಮೃತದೇಹವನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಸ್ವೀಕರಿಸಿದಾಗ ಮುಗಿಲು ಮುಟ್ಟಿತ್ತು.

Advertisement

ಹೆಝಲ್‌ ಮೃತದೇಹ ಬರೋ ಬ್ಬರಿ 2 ತಿಂಗಳು 11 ದಿನಗಳ ಬಳಿಕ ಗುರುವಾರ ಮುಂಜಾನೆ ಬೆಂಗಳೂರು ವಿಮಾನ ನಿಲ್ದಾಣ ತಲುಪಿತು. ಅಲ್ಲಿಂದ ಶವವನ್ನು ಆಂಬುಲೆನ್ಸ್‌ ಮೂಲಕ ಊರಿಗೆ ತರಲಾಗಿದ್ದು, ಮಣಿಪಾಲದ ಶವಾಗಾರದಲ್ಲಿ ಇರಿಸಲಾಗಿದೆ.

ಶುಕ್ರವಾರ ಮಧ್ಯಾಹ್ನ ಮೃತದೇಹ ವನ್ನು ಕುತ್ಯಾರು ಅಗರ್‌ದಂಡೆಯಲ್ಲಿ ರುವ ತವರು ಮನೆಗೆ ಕೊಂಡೊಯ್ದು, ಬಳಿಕ ಪತಿ ಅಶ್ವಿ‌ನ್‌ ಮಥಾಯಸ್‌ ಮನೆಯಲ್ಲಿ ಅಂತಿಮ ವಿಧಿವಿಧಾನ ನಡೆಯಲಿದೆ. ಬಳಿಕ ಶಿರ್ವ ಆರೋಗ್ಯ ಮಾತಾ ದೇವಾಲಯದಲ್ಲಿ ಅಂತಿಮ ಸಂಸ್ಕಾರ ನೆರವೇರಲಿದೆ.

ಬಿಷಪ್‌ ಉಪಸ್ಥಿತಿ
ಶಿರ್ವ ಚರ್ಚ್‌ನಲ್ಲಿ ಅಂತಿಮ ಸಂಸ್ಕಾರಕ್ಕಾಗಿ ಸಿದ್ಧತೆ ನಡೆಸಲಾ ಗಿದ್ದು, ಸಂಜೆ 4 ಗಂಟೆಗೆ ನೆರವೇರ ಲಿದೆ. ಉಡುಪಿ ಬಿಷಪ್‌ ರೆ|ಡಾ| ಜೆರಾಲ್ಡ್‌ ಐಸಾಕ್‌ ಲೋಬೋ ಭಾಗವಹಿಸಲಿದ್ದಾರೆ ಎಂದು ಶಿರ್ವ ಆರೋಗ್ಯ ಮಾತಾ ದೇವಾಲಯದ ಪ್ರಧಾನ ಧರ್ಮಗುರು ರೆ|ಫಾ| ಡೆನ್ನಿಸ್‌ ಡೇಸಾ ತಿಳಿಸಿದ್ದಾರೆ.

ಸರಕಾರದ ಅನಿವಾಸಿ ಭಾರತೀಯ
ಸಮಿತಿ – ಕರ್ನಾಟಕ ವತಿಯಿಂದ ಮೃತರ ಕುಟುಂಬಕ್ಕೆ 1 ಲ.ರೂ. ನೆರವು ಮಂಜೂರಾಗಿದೆ. ಅಂತಿಮ ಸಂಸ್ಕಾರ ದಲ್ಲಿ ತಾನು ಪಾಲ್ಗೊಳ್ಳುವುದಾಗಿ ವಿಧಾನ ಪರಿಷತ್‌ ಸದಸ್ಯ ಐವನ್‌ ಡಿ’ಸೋಜಾ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next