Advertisement
ಯಾರಿವರು ಹಜಾರಸ್‌ಗಳು :
Related Articles
Advertisement
19ನೇ ಶತಮಾನದಿಂದ ಆಕ್ರಮಣ :
ಹಜಾರಸ್‌ಗಳ ಮೇಲೆ ದಾಳಿ ಶುರುವಾಗಿದ್ದು 19ನೇ ಶತಮಾನ ಮಧ್ಯಭಾಗದಲ್ಲಿ. ಪಶ್ತುನ್ ರಾಜ ಅಮೀರ್ ಅಬ್ದುಲ್ ರೆಹಮಾನ್, ಶಿಯಾದವರ ಸಾಮೂಹಿಕ ಹತ್ಯೆಗೆ ಆದೇಶ ನೀಡಿದ್ದ. ಹೀಗಾಗಿ ಇವರ ಜನಸಂಖ್ಯೆ ಒಮ್ಮೆಗೆ ಅರ್ಧದಷ್ಟು ಕಡಿಮೆಯಾಗಿತ್ತು. ಅಷ್ಟೇ ಅಲ್ಲ, ಅನಂತರದಲ್ಲೂ ಇವರನ್ನು ಗುಲಾಮರನ್ನಾಗಿ ಮಾಡಿ ಬೇರೆ ಕಡೆಗೆ ಮಾರಾಟ ಮಾಡಲಾಗುತ್ತಿತ್ತು.
ತಾಲಿಬಾನಿಗಳ ಕಾಲದಲ್ಲಿ :
1990ರ ಅನಂತರದಲ್ಲಿ ಹಜಾರಸ್‌ಗಳ ಮೇಲಿನ ಆಕ್ರಮಣ ಮತ್ತಷ್ಟು ಹೆಚ್ಚಾಯಿತು. ತಾಲಿಬಾನ್ ಉಗ್ರರೇ ಶಿಯಾಗೆ ಸೇರಿದ ಇವರನ್ನು ಗುರುತಿಸಿ ಹತ್ಯೆ ಮಾಡುತ್ತಿದ್ದರು. 1990ರ ದಶಕದ ಮಧ್ಯಭಾಗದಲ್ಲಿ ಒಮ್ಮೆ ತಾಲಿಬಾನ್ ಕಮಾಂಡರ್ ಮೌಲಾವಾಯಿ ಮೊಹಮ್ಮದ್ ಹನೀಫ್, ಹಜಾರಸ್‌ಗಳು ಮುಸ್ಲಿಮರಲ್ಲ, ನೀವು ಅವರನ್ನು ಕೊಲ್ಲಬಹುದು ಎಂದು ತನ್ನ ಸಂಗಡಿಗರಿಗೆ ಹೇಳಿದ್ದ. ಹೀಗಾಗಿಯೇ 1998ರಲ್ಲಿ ಮಝರ್ ಐ ಶರೀಫ್ನಲ್ಲಿ ಸಾವಿರಾರು ಹಜಾರಸ್ ಜನರನ್ನು ಸಾಮೂಹಿಕವಾಗಿ ಕೊಂದು ಹಾಕಲಾಗಿತ್ತು. ತಾಲಿಬಾನ್ ಉಗ್ರರನ್ನು ನಿಯಂತ್ರಣ ಮಾಡಲು ಅಮೆರಿಕ ಸೇನೆಯೇ ಅಫ್ಘಾನಿಸ್ತಾನಕ್ಕೆ ಬಂದು ಆಳ್ವಿಕೆ ಶುರು ಮಾಡಿತ್ತು. ಆದರೆ ಅನಂತರದಲ್ಲೂ ಹಜಾರಸ್‌ಗಳಿಗೆ ನ್ಯಾಯ ಸಿಗಲಿಲ್ಲ. ಈ ಅವಧಿಯಲ್ಲೂ ಇವರ ಮೇಲೆ ಕಿರುಕುಳ ನಡೆಯುತ್ತಲೇ ಇತ್ತು. ಅಂದರೆ ಐಸಿಸ್, ತಾಲಿಬಾನ್ ಉಗ್ರರು ಇವರ ಮಸೀದಿಗಳು, ಶಾಲೆಗಳು, ಆಸ್ಪತ್ರೆಗಳನ್ನು ಗುರಿಯಾಗಿ ದಾಳಿ ನಡೆಸುತ್ತಲೇ ಇದ್ದರು. ಕಳೆದ ಮೇ ತಿಂಗಳಲ್ಲಷ್ಟೇ ಕಾಬೂಲ್‌ನಲ್ಲಿ ಹಜಾರಸ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ದಶ್¤ ಇ ಬರ್ಚಿಯಲ್ಲಿ ಬಾಂಬ್ ಸ್ಫೋಟವಾಗಿ 60 ಮಂದಿ ಅಸುನೀಗಿದ್ದರು.