Advertisement

ಹವ್ಯಕ ಸರ್ವ ಸಮಾಜಕ್ಕೂ ಒಳಿತು ಬಯಸುವ ಸಮುದಾಯ: ಶ್ರೀ

04:54 PM Sep 06, 2022 | Team Udayavani |

ಗೋಕರ್ಣ: ಹವ್ಯಕ ಸಮುದಾಯ ಸರ್ವ ಸಮಾಜದ ಒಳಿತಿಗಾಗಿ ಹುಟ್ಟಿಕೊಂಡ ಸಮುದಾಯವಾಗಿದೆ. ಎಲ್ಲ ಸಮುದಾಯಗಳ ಜೊತೆ ಹೊಂದಿಕೊಂಡು ಹವ್ಯಕ ಸಮುದಾಯ ಬೆಳೆದು ಬಂದಿದೆ ಎಂದು ಶ್ರೀ ರಾಮಚಂದ್ರಾಪುರ ಮಠದ ಜಗದ್ಗುರು ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

Advertisement

ಗೋಕರ್ಣದ ಅಶೋಕೆಯಲ್ಲಿ ಚಾತುರ್ಮಾಸ್ಯ ವ್ರತ ಕೈಗೊಂಡಿರುವ ಅವರು ಅಖೀಲ ಹವ್ಯಕ ಮಹಾಸಭೆಯಿಂದ ಸಮರ್ಪಿತವಾದ ಗುರುಭಿಕ್ಷಾ ಸೇವೆ ಸ್ವೀಕರಿಸಿ ಆಶೀರ್ವಚನ ನೀಡಿದರು.

ಪ್ರಯತ್ನ ಶೀಲರು, ಸಮಾಜದ ಹಿತ ಚಿಂತನೆಯ ಒತ್ತಾಸೆಯಿರುವವರು ಸಂಘಟನೆಯಲ್ಲಿ ತೊಡಗಿಕೊಂಡರೆ ಸಮಾಜಕ್ಕೆ ಒಳಿತಾಗುತ್ತದೆ. ಹವ್ಯಕ ಮಹಾಸಭೆಯ ಪದಾಧಿಕಾರಿಗಳೆಲ್ಲರೂ ಸಮಾಜಕ್ಕಾಗಿ ಬದುಕಿನ ಒಂದು ಭಾಗವನ್ನು ಮೀಸಲಿಟ್ಟು, ಸಮಾಜೋದ್ಧಾರದ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದರು.

ಸಮಾಜಮುಖೀ ಕಾರ್ಯಗಳನ್ನು ಮಾಡುತ್ತಿರುವ ಮಹಾಸಭೆಯ ಜೊತೆ ನಾವೆಲ್ಲ ಕೈಜೋಡಿಸಬೇಕಿದ್ದು, ಮಹಾಸಭೆಯ ಕಾರ್ಯಗಳಿಗೆ ಹವ್ಯಕ ಸಮುದಾಯ ಸದಾ ಸಹಕಾರ ನೀಡಬೇಕು ಎಂದರು.

ನಿತ್ಯ ಪ್ರವಚನ ಮಾಲಿಕೆಯಲ್ಲಿ “ಕ್ರೋಧ’ದ ವಿಚಾರವಾಗಿ ಪ್ರವಚನ ಅನುಗ್ರಹಿಸಿದ ಶ್ರೀಗಳು, ಕ್ರೋಧದ ನಿಯಂತ್ರಣದಲ್ಲಿ ನೀವಿದ್ದಾಗ ಕ್ರೋಧ ದೋಷ. ನಿಮ್ಮ ನಿಯಂತ್ರಣದಲ್ಲಿ ಕೋಪ ಇದ್ದಾಗ ಅದು ಗುಣ. ಕೋಪ ಇರುವುದು ಆತ್ಮರಕ್ಷಣೆಗೆ; ಆದರೆ ಅದು ಇನ್ನೊಬ್ಬರಿಗೆ ಹಾನಿಯನ್ನು ಉಂಟು ಮಾಡಬಾರದು. ನಮ್ಮ ನಿಯಂತ್ರಣದಲ್ಲಿರುವ ಕೋಪ ಪ್ರತಿಯೊಬ್ಬರಿಗೂ ಬೇಕು ಎಂದರು.

Advertisement

ಹವ್ಯಕ ಮಹಾಸಭಾ ಪರವಾಗಿ ಅಧ್ಯಕ್ಷ ಡಾ| ಗಿರಿಧರ ಕಜೆ ಫಲಕಾಣಿಕೆ ಸಮರ್ಪಿಸಿ ಶ್ರೀಗಳ ಮಾರ್ಗದರ್ಶನ ಕೋರಿದರು. ಕಾರ್ಯದರ್ಶಿ ಪ್ರಶಾಂತ್‌ ಭಟ್‌ ಮಲವಳ್ಳಿ ದಂಪತಿ ಮಹಾಸಭೆಯ ಪರವಾಗಿ ಶ್ರೀಗುರು ಭಿಕ್ಷಾಸೇವೆ, ಶ್ರೀಗುರುಪಾದ ಪೂಜೆ ನೆರವೇರಿಸಿದರು.

ರುದ್ರಹವನ, ರಾಮತಾರಕ ಹವನ, ಚಂಡೀಪಾರಾಯಣ, ನವಚಂಡಿ ಹವನ, ಗಣಪತಿ ಹವನ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಪ್ರಧಾನ ಕಾರ್ಯದರ್ಶಿ ಸಿಎ ವೇಣುವಿN°àಶ್‌ ಸಂಪ, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್‌ ಯಲಹಂಕ, ನಿರ್ದೇಶಕರಾದ ಆರ್‌.ಜಿ. ಹೆಗಡೆ ಹೊಸಾಕುಳಿ, ಹಂಡ್ರಮನೆ ಗೋಪಾಲಕೃಷ್ಣ ಭಟ್‌ ಸೇರಿದಂತೆ ಬೆಂಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಶಿವಮೊಗ್ಗ ಸೇರಿದಂತೆ ಎಲ್ಲ ಭಾಗಗಳ ನಿರ್ದೇಶಕರು, ಸಂಚಾಲಕರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next