ಹೊಸದಿಲ್ಲಿ: ನಾಲ್ವರು ಪತ್ನಿಯರನ್ನು ಹೊಂದಿರುವುದು ಅಸ್ವಾಭಾವಿಕವಾಗಿರುವ ವಿಚಾರ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
ಹಿಂದಿ ಸುದ್ದಿವಾಹಿನಿ “ಆಜ್‌ತಕ್’ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, “ಯಾವುದಾದರೂ ಇಸ್ಲಾಮಿಕ್ ದೇಶದಲ್ಲಿ ಎರಡು ನಾಗರಿಕ ಸಂಹಿತೆ ಇರುವ ಉದಾಹರಣೆಯನ್ನು ನೀಡುತ್ತೀರಾ? ವ್ಯಕ್ತಿಯೊಬ್ಬ ಮಹಿಳೆಯನ್ನು ಮದುವೆಯಾದರೆ ಅದು ಸಹಜ.
ಆದರೆ ನಾಲ್ವರನ್ನು ಮದುವೆಯಾದರೆ ಅದು ಅಸ್ವಾಭಾವಿಕ. ಮುಸ್ಲಿಂ ಸಮುದಾಯದಲ್ಲಿ ಇರುವ ವಿದ್ಯಾವಂತ, ಪ್ರಗತಿಪರ ಚಿಂತನೆ ಇರುವವರು ಈ ರೀತಿ ವರ್ತಿಸುವುದಿಲ್ಲ. ಸಮಾನ ನಾಗರಿಕ ಸಂಹಿತೆ (ಯುಸಿಸಿ) ಎನ್ನುವುದು ಯಾವ ಧರ್ಮದ ವಿರುದ್ಧವೂ ಅಲ್ಲ’ ಎಂದಿದ್ದಾರೆ.
ದೇಶದಲ್ಲಿ ಯುಸಿಸಿಯನ್ನು ಜಾರಿಗೆ ತರಲಾಗು ತ್ತದೆಯೇ ಎಂಬ ಪ್ರಶ್ನೆಗೆ ಅವರು ಈ ಉತ್ತರ ನೀಡಿದ್ದಾರೆ. ಜತೆಗೆ ಅದನ್ನು ರಾಜಕೀಯ ದೃಷ್ಟಿಯಿಂದ ನೋಡದೆ ದೇಶದ ಅಭಿವೃದ್ಧಿ ವಿಚಾರದಿಂದಲೇ ನೋಡಬೇಕು. ಎಲ್ಲ ರಾಜ ಕೀಯ ಪಕ್ಷಗಳೂ ಒಂದಾಗಿ ದೇಶದಲ್ಲಿ ಸಮಾನ ನಾಗರಿಕ ಸಂಹಿತೆಯನ್ನು ಜಾರಿ ಮಾಡಲು ಪ್ರಯತ್ನಿಸ ಬೇಕು ಎಂದೂ ಕರೆ ನೀಡಿದ್ದಾರೆ.