Advertisement

ತಾ|ಹವ್ಯಕ ಸಭಾ ವಾರ್ಷಿಕೋತ್ಸವ, ಸಮ್ಮಾನ

09:31 PM Sep 25, 2019 | sudhir |

ಉಪ್ಪುಂದ: ಯುವ ಜನತೆ ಸಾಂಪ್ರದಾಯಿಕ ಜೀವನ ಶೆ„ಲಿ ಮರೆತು ಟಿ.ವಿ, ಮೊಬೆ„ಲ್‌ಗ‌ಳನ್ನು ಅತಿಯಾದ ಬಳಕೆ ಮಾಡುತ್ತಿದ್ದಾರೆ. ಇದರಿಂದ ಚಿಕ್ಕ ಪ್ರಾಯದಲ್ಲಿ ಮಾನಸಿಕ ಸಮತೋಲನ ಕಳೆದುಕೊಳ್ಳುವುದರೊಂದಿಗೆ ಮಾನಸಿಕ ಖನ್ನತೆಗೆ ಒಳಗಾಗುತ್ತಿದ್ದಾರೆ. ಈ ಬೆಳವಣಿಗೆ ಬಹಳ ಅಪಾಯಕಾರಿಯಾಗಿದೆ. ಯುವಜನಾಂಗಕ್ಕೆ ಧಾರ್ಮಿಕ ಮತ್ತು ನೈತಿಕ ಶಿಕ್ಷಣದ ಜೊತೆಯಲ್ಲಿ ನಿರಂತರ ಮಾರ್ಗದರ್ಶನ ನೀಡಿ ಸರಿ ದಾರಿಗೆ ತರುವ ಅನಿವಾರ್ಯತೆ ಎದುರಾಗಿದೆ ಎಂದು ಸರಕಾರಿ ಪದವಿಪೂರ್ವ ಕಾಲೇಜು ಖಂಬದಕೋಣೆ ಇದರ ಪ್ರಾಂಶುಪಾಲ ಗಣಪತಿ ಅವಭƒತ್‌ ಹೇಳಿದರು.

Advertisement

ಉಪ್ಪುಂದ ರಾಘವೇಂದ್ರ ಸ್ವಾಮಿ ಮಠದಲ್ಲಿ ರವಿವಾರ ನಡೆದ ಕುಂದಾಪುರ ತಾಲೂಕು ಹವ್ಯಕ ಸಭಾದ 19ನೇಯ ವಾರ್ಷಿಕೋತ್ಸವ, ಸಮ್ಮಾನ,ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾತನಾಡಿದರು.

ಹವ್ಯಕ ಸಭಾ ಅಧ್ಯಕ್ಷ ಎಮ್‌. ನಾಗರಾಜ್‌ ಭಟ್‌ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದ ಆಡಳಿತ ಧರ್ಮದರ್ಶಿ ವೇದಮೂರ್ತಿ, ಬಾಲಚಂದ್ರ ಭಟ್‌,ಪ್ರಧಾನ ಕಾರ್ಯದರ್ಶಿ ಯು.ಸಂದೇಶ ಭಟ್‌ ಉಪಸ್ಥಿತರಿದ್ದರು.

ಸಮ್ಮಾನ
ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ಪ್ರಧಾನ ಅರ್ಚಕ ವೇದಮೂರ್ತಿ ಕೆ.ಎನ್‌.ಗೊವೀಂದ ಅಡಿಗ, ಕರ್ನಾಟಕ ಬ್ಯಾಂಕ್‌ ನಿವೃತ್ತ ವ್ಯವಸ್ಥಾಪಕ ಯು.ವೆಂಕಟರಮಣ ಭಟ್‌, ಡಾಕ್ಟರೇಟ್‌ ಪದವಿ ಪುರಸ್ಕೃತ ವಿದ್ವಾನ್‌ ಆನಗಳ್ಳಿ ಚೆನ್ನಕೇಶವ ಗಾಯತ್ರಿ ಭಟ್‌, ಡಾಕ್ಟ್ರರೇಟ್‌ ಪದವಿ ಪುರ ಸ್ಕೃತ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದ ತಂತ್ರಿ, ಪ್ರಧಾನ ಅರ್ಚಕರಾದ ಡಾ. ವೇದಮೂರ್ತಿ ಕೆ. ನಿತ್ಯಾನಂದ ಅಡಿಗ ಇವರನ್ನು ಹವ್ಯಕ ಸಮ್ಮಾನಿಸಲಾಯಿತು. ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯಕ್ಕೆ 3 ನೇ ರ್‍ಯಾಂಕ್‌ ಗಳಿಸಿದ ಮೇಧಾ ಹೆಗಡೆ, ಶ್ರೇಯಾ ಭಟ್ಟ್ ಕೋಟೆಶ್ವರ, ಪಿ.ಯು.ಸಿ. ವಿಶೇಷ ಸಾಧನೆಗಾಗಿ ಅಖೀಲಾ ಹೆಬ್ಟಾರ್‌, ಎಮ್‌.ಎಲ್‌.ಭಾರ್ಗವ ಹೆಬ್ಟಾರ ಪ್ರಣವ್‌ ಶಂಕರ್‌ ಭಟ್‌ ಹಾಗೂ ಭರತನಾಟ್ಯ ವಿಭಾಗದ ವಿಶೇಷ ಸಾಧನೆಗಾಗಿ ಶರ್ಮದಾ ಆರ್‌.ಭಟ್‌ ಇವರನ್ನ ಅಭಿನಂದಿಸಲಾಯಿತು.

ಮುಂದಿನ 2 ವರ್ಷ ಅವಧಿಗೆ ನೂತನ ಕಾರ್ಯಕಾರಿ ಮಂಡಳಿಯನ್ನು ರಚಿಸಲಾಯಿತು. ಕೋಶಾಧಿಕಾರಿ ಪಡುವರಿ ಶ್ರೀಧರ ಭಟ್‌ ಆಯ-ವ್ಯಯ ಮಂಡಿಸಿದರು. ಪ್ರಧಾನ ಕಾರ್ಯದರ್ಶಿ ಯು. ಸಂದೇಶ ಭಟ್‌ ವರದಿ ವಾಚಿಸಿದರು.

Advertisement

ಅಧ್ಯಕ್ಷ ಎಮ್‌. ನಾಗರಾಜ್‌ ಭಟ್‌ ಸ್ವಾಗತಿಸಿದರು. ವೇದಮೂರ್ತಿ ಶಂಕರನಾರಾಯಣ ಭಟ್‌, ವೆಂಕಟರಮಣ ಹೆಗಡೆ ಯು. ಪರಮೇಶ್ವರ್‌ ಭಟ್‌, ಕೆ,ಸುಬ್ರಹ್ಮಣ್ಯ ಭಟ್‌ ಸಮ್ಮಾನಿತರನ್ನು ಪರಿಚಯಿಸಿದರು. ವೇದಮೂರ್ತಿ ತಿರುಮಲೇಶ್ವರ್‌ ಭಟ್‌ ಕಾರ್ಯಕ್ರಮ ನಿರೂಪಿಸಿದರು. ಉಪ್ರಳ್ಳಿ ಮಂಜುನಾಥ ಭಟ್‌ ವಂದಿಸಿದರು.

ಸಭಾ ಕಾರ್ಯಕ್ರಮದ ನಂತರ ಉಪನ್ಯಾಸಕ ಗಣಪತಿ ಹೆಗಡೆ ಗುರುವಂದನಾ ಭಜನೆಗಳನ್ನು ಪ್ರಸ್ತುತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next