Advertisement

ಕೃಷಿ ಮಸೂದೆ ವಾಪಸ್‌ಗೆ ಹೆದ್ದಾರಿ ತಡೆ

06:01 PM Feb 07, 2021 | Team Udayavani |

ರಾಣಿಬೆನ್ನೂರ: ರೈತ ವಿರೋಧಿ ಕೃಷಿ ಮಸೂದೆ ವಾಪಸ್‌ ಪಡೆಯಬೇಕೆಂದು ದೆಹಲಿಯಲ್ಲಿ ನಡೆಯುತ್ತಿರುವ ರೈತರ ಚಳವಳಿ ಬೆಂಬಲಿಸಿ ವಿವಿಧ ರೈತ ಸಂಘಟನೆಗಳ ಕಾರ್ಯಕರ್ತರು ಮತ್ತು ರೈತರು ಶನಿವಾರ ಮಾಕನೂರು ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನಾ ಸ್ಥಳದಲ್ಲಿ ವಿವಿಧ ಭಜನಾ ಸಂಘಗಳಿಂದ ಭಜನೆ, ಹೋಮ ಹವನ ಹಾಗೂ ಪೂರ್ಣಾಹುತಿ ಸಲ್ಲಿಸಲಾಯಿತು. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ರೈತರಿಗೆ ಒಳ್ಳೆಯದು ಮಾಡುವ ಬುದ್ಧಿ ಬರಲೆಂದು ಹೋಮಕ್ಕೆ ತುಪ್ಪ ಸುರಿದು ಸ್ವಾಹಾ ಎನ್ನುವ ಮೂಲಕ ವಿಶೇಷ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ಪ್ರಧಾನಿ ಮೋದಿ ನೇತೃತ್ವದ ಸರಕಾರವು ರೈತ ವಿರೋಧಿಯಾಗಿದೆ. ರೈತರನ್ನು ಪದೇ ಪದೇ ಸತಾಯಿಸುತ್ತಿರುವ ಕೇಂದ್ರ ಸರಕಾರದ ಕ್ರಮ ಖಂಡನೀಯ ಎಂದರು.

ರೈತರ ಹೋರಾಟ ಇಲ್ಲಿಗೆ ನಿಲ್ಲಿಸುವುದಿಲ್ಲ, ಇದು ಆರಂಭವಾಗಿದೆ. ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಿಂದ ನಾಡಿನ ರೈತರು ಘರ್ಜಿಸುವ ಸಂದರ್ಭ ಬಂದಿದೆ. ಕೇಂದ್ರ ಸರಕಾರ ತನ್ನ ಹಠಮಾರಿ ಧೋರಣೆ ಕೈಬಿಡಬೇಕು, ರೈತರ ನೋವುಗಳನ್ನರಿತು ಸರಕಾರ ಮುನ್ನಡೆಸಬೇಕು ಎಂದರು.

ರೈತ ಮುಖಂಡ ಈರಣ್ಣ ಹಲಗೇರಿ ಮಾತನಾಡಿ, ಕೇಂದ್ರ ಸರಕಾರವು ರೈತರನ್ನು ಕೀಳರಿಮೆಯಿಂದ  ಕಾಣುತ್ತಿದೆ. ಇದು ಶೋಭೆ ತರುವುದಲ್ಲ. ರೈತ ಮುನಿಸಿಕೊಂಡಲ್ಲಿ ಯಾವುದೇ ಸರ್ಕಾರಕ್ಕೆ ಉಳಿಗಾಲವಿಲ್ಲ. ಬಿಜೆಪಿ ಸರ್ಕಾರ ಕೆಳಗಿಳಿಸುವವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.

Advertisement

ಸ್ಥಳಕ್ಕಾಗಮಿಸಿದ ತಹಶೀಲ್ದಾರ್‌ ಶಂಕರ ಜಿ.ಎಸ್‌. ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ, ಮನವಿಯನ್ನು ತಕ್ಷಣ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಗಳಿಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

ಇದನ್ನೂ ಓದಿ :ಉದ್ಯಮಿಗಳ ಜತೆ ಸಮಾಲೋಚನೆ

ಎಸ್‌.ಡಿ. ಹಿರೇಮಠ, ಹನುಮಂತಪ್ಪ ರಡ್ಡೇರ, ಆಂಜನೆಯಪ್ಪ ಬೆಳವಿಗಿ, ತಿಪ್ಪಣ್ಣ ಹಲಗೇರಿ, ನರೇಂದ್ರ ನಾಯಕ, ರೂಪಾ ನಾಯಕ, ಬಸವರಾಜ ಹಲಗೇರಿ, ಬಸವರಾಜ ಕೊಂಗಿ, ಮಂಜಪ್ಪ ತಾವರಗೊಂದಿ, ಭೀಮನಗೌಡ ಹುಲಿಗಿನಹೊಳಿ, ಮಹಾದೇವಪ್ಪ ಬಣಕಾರ, ಕುಮಾರ ಬಣಕಾರ, ಸಿದ್ದಪ್ಪ ಶಿರಗೇರಿ, ಮೇಘರಾಜ ಕರಬಸಳ್ಳೇರ, ದಿಳ್ಳೆಪ್ಪ ಸತ್ಯಪ್ಪನವರ, ಸುರೇಶ ಯಲ್ಲಾಪುರ, ಭೀಮಪ್ಪ ಪೂಜಾರ, ಸಿದ್ದನಗೌಡ ದೊಡ್ಡಗೌಡ್ರ, ಸುರೇಶ ಮಲ್ಲಾಪುರ ಸೇರಿದಂತೆ ವಿವಿಧ ರೈತ ಸಂಘಟನೆಗಳ ಕಾರ್ಯಕರ್ತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next