Advertisement

ಜಿಲ್ಲಾಸ್ಪತ್ರೆ ದಲ್ಲಿ ಅಗ್ನಿ ಅವಘಡ: ಹಸಗೂಸುಗಳನ್ನು ಎತ್ತಿಕೊಂಡು ಹೊರಬಂದ ಬಾಣಂತಿಯರು

12:31 PM Sep 21, 2021 | Team Udayavani |

ಹಾವೇರಿ: ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಹೆರಿಗೆ ವಿಭಾಗದಲ್ಲಿ ಬೆಂಕಿ ಅವಘಡ ನಡೆದಿದ್ದು, ಬಾಣಂತಿಯರು ಹಸಗೂಸುಗಳನ್ನು ಎತ್ತಿಕೊಂಡು ಹೊರ ಓಡಿ ಬಂದ ಘಟನೆ ನಡೆದಿದೆ.

Advertisement

ಬೆಳ್ಳಂಬೆಳಿಗ್ಗೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಹೆರಿಗೆ ವಿಭಾಗದಲ್ಲಿ ಬೆಂಕಿ ಆವರಿಸಿಕೊಂಡ ಹಿನ್ನೆಲೆಯಲ್ಲಿ ಆತಂಕಗೊಂಡು ಹಸು ಗೂಸುಗಳನ್ನು ಎತ್ತುಕೊಂಡು ಬಾಣಂತಿಯರು ಓಡಾಡಿದರು.

ಮಕ್ಕಳನ್ನು ಎತ್ತಿಕೊಂಡು ನೂರಕ್ಕೂ ಅಧಿಕ ಬಾಣಂತಿಯರು ಆಸ್ಪತ್ರೆಯ ಮುಂಭಾಗ ಕುಳಿತ ಪ್ರಸಂಗ ನಡೆಯಿತು.

ಘಟನೆ ನಡೆದ ಸುದ್ದಿ ತಿಳಿಯುತ್ತಿದ್ದಂತೆ ಜಿಪಂ ಸಿಇಒ ಮಹಮ್ಮದ್ ರೋಷನ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತಕ್ಷಣ ದುರಸ್ತಿಗೆ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next