Advertisement

34ರಿಂದ 38ಕ್ಕೆ ಏರಿದ ಜಿಪಂ ಕ್ಷೇತ್ರಗಳು

06:53 PM Apr 02, 2021 | Team Udayavani |

ಹಾವೇರಿ: ಜಿಲ್ಲಾ ಪಂಚಾಯಿತಿ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಪುನರ್ವಿಂಗಡಣೆ ಮಾಡಿರಾಜ್ಯ ಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ.

Advertisement

ಇದರಿಂದ ಜಿಪಂ ಕ್ಷೇತ್ರ 34ರಿಂದ 38ಕ್ಕೆ ಏರಿದ್ದು, ತಾಪಂ ಕ್ಷೇತ್ರ 128ರಿಂದ 104ಕ್ಕೆ ಇಳಿದಿದೆ. ಈ ಹಿಂದೆ 34 ಇದ್ದ ಜಿಪಂ ಕ್ಷೇತ್ರ ಇನ್ನು ಮೇಲೆ38ಕ್ಕೇರಲಿದ್ದು, ಹಾವೇರಿ, ಬ್ಯಾಡಗಿ, ರಾಣಿಬೆನ್ನೂರು ಹಾಗೂ ಹಾನಗಲ್ಲ ತಾಲೂಕುಗಳಲ್ಲಿ ತಲಾ ಒಂದುಜಿಪಂ ಕ್ಷೇತ್ರಗಳನ್ನು ಹೆಚ್ಚಿಸಿ ಆಯೋಗ ಅಧಿಸೂಚನೆ ಹೊರಡಿಸಿದೆ.

ಹಾವೇರಿ ತಾಲೂಕಿನ ಕರ್ಜಗಿ, ಹಾನಗಲ್ಲ ತಾಲೂಕಿನ ಕುಸನೂರು, ರಾಣಿಬೆನ್ನೂರು ತಾಲೂಕಿನಕೋಡಿಯಾಲ, ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರುಹೊಸದಾಗಿ ರಚನೆಯಾದ ಜಿಪಂ ಕ್ಷೇತ್ರಗಳಾಗಿವೆ. ಹಾವೇರಿ ತಾಲೂಕಿನ ಕರ್ಜಗಿ, ಯಲಗಚ್ಚ,ಕೋಣನತಂಬಗಿ, ಹೊಸರಿತ್ತಿ ಒಳಗೊಂಡಂತೆ ಕರ್ಜಗಿಕ್ಷೇತ್ರ ರಚನೆ ಮಾಡಲಾಗಿದೆ. ರಾಣಿಬೆನ್ನೂರುತಾಲೂಕಿನಲ್ಲಿ ಕೋಡಿಯಾಲ, ಹಿರೇಬಿದರಿ, ಐರಣಿಕವಲೆತ್ತು, ಸೋಮಲಾಪುರ, ನದಿಹರಳಹಳ್ಳಿಒಳಗೊಂಡು ಕೋಡಿಯಾಲ ಕ್ಷೇತ್ರವನ್ನು ಹೊಸದಾಗಿ ರಚಿಸಲಾಗಿದೆ.

ಹಾನಗಲ್ಲ ತಾಲೂಕಿನ ಕೂಸನೂರು, ಕಲ್ಲಾಪುರ, ಹಿರೇಹುಲ್ಲಾಳ, ಶ್ಯಾಡಗುಪ್ಪಿ, ಸೋಮ ಸಾಗರ, ಮಲಗುಂದ, ಹಾವಣಗಿ ಗ್ರಾಮ ಪಂಚಾಯಿತಿಯನ್ನುಸೇರಿಸಿ ಕೂಸನೂರು ಜಿಪಂ ಕ್ಷೇತ್ರ ರಚನೆ ಮಾಡಲಾಗಿದೆ. ಬ್ಯಾಡಗಿ ತಾಲೂಕಿನ ಚಿಕ್ಕಬಾಸೂರು, ಸೂಡಂಬಿ, ಘಾಳಪೂಜಿ, ಹಿರೇಅಣಜಿ, ಕುಮ್ಮೂರು,ಹಿರೇಹಳ್ಳಿ ಗ್ರಾಪಂ ವ್ಯಾಪ್ತಿಯನ್ನು ಒಳಗೊಂಡಂತೆ ಚಿಕ್ಕಬಾಸೂರು ಕ್ಷೇತ್ರ ರಚನೆಯಾಗಿದೆ.

ತಾಪಂ ಕ್ಷೇತ್ರ ಇಳಿಕೆ: ಜಿಲ್ಲೆಯ ತಾಪಂ ಕ್ಷೇತ್ರಗಳನ್ನೂ ಪುನರ್ವಿಂಗಡಿಸಿಚುನಾವಣಾ ಆಯೋಗ ಅಧಿಸೂಚನೆ ಹೊರಡಿಸಿದೆ. ಜಿಲ್ಲೆಯ8 ತಾಲೂಕು ಸೇರಿ ಇದುವರೆಗೆ ಇದ್ದ128 ಕ್ಷೇತ್ರಗಳಲ್ಲಿ 24 ಕ್ಷೇತ್ರಗಳನ್ನು ಕಡಿತಗೊಳಿಸಿ104 ಕ್ಷೇತ್ರಗಳನ್ನು ಅಂತಿಮಗೊಳಿಸಲಾಗಿದೆ. ಹಾವೇರಿತಾಲೂಕಿನಲ್ಲಿ ಇದುವರೆಗೆ ಇದ್ದ 20 ಕ್ಷೇತ್ರಗಳಲ್ಲಿ 4ಕಡಿತಗೊಳಿಸಿ 16 ಕ್ಷೇತ್ರ ರಚಿಸಲಾಗಿದೆ.

Advertisement

ಬ್ಯಾಡಗಿಯಲ್ಲಿ 3 ಕ್ಷೇತ್ರ ಕಡಿಮೆ ಮಾಡಿ 9ಕ್ಕೆ ಸೀಮಿತಗೊಳಿಸಲಾಗಿದೆ. 23 ಕ್ಷೇತ್ರಗಳನ್ನುಹೊಂದಿದ್ದ ರಾಣಿಬೆನ್ನೂರಿನಲ್ಲಿ ಇನ್ನು19 ಕ್ಷೇತ್ರಗಳು ಇರಲಿವೆ. ಹಿರೇಕೆರೂರುತಾಲೂಕಿನಲ್ಲಿ 22 ಕ್ಷೇತ್ರ ಇದ್ದದ್ದುಹೊಸದಾಗಿ ರಚನೆಯಾಗಿರುವ ರಟ್ಟೀಹಳ್ಳಿ ತಾಲೂಕಿಗೆ ಹಂಚಿಹೋಗಿವೆ. ಇದರಿಂದ ಹಿರೇಕೆರೂರು 9, ರಟ್ಟೀಹಳ್ಳಿ ತಾಲೂಕಿಗೆ 11 ಕ್ಷೇತ್ರ ಬರಲಿವೆ. ಶಿಗ್ಗಾವಿ ತಾಲೂಕಿನಲ್ಲಿ 19 ತಾಪಂ ಕ್ಷೇತ್ರ, ಹಾನಗಲ್ಲ 19 ಕ್ಷೇತ್ರ, ಸವಣೂರು 10 ಕ್ಷೇತ್ರ ಇರಲಿವೆ

ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆ :

ತಾಪಂ ಕ್ಷೇತ್ರಗಳ ಸಂಖ್ಯೆಯಲ್ಲಿ ಕಡಿತವಾಗಿರುವುದುಅಚ್ಚರಿಗಳಿಗೆ ಕಾರಣವಾಗಿದೆ. ತಾಪಂ ಸದಸ್ಯಸ್ಥಾನದ ಆಕಾಂಕ್ಷಿಗಳಿಗೆ ಆಯೋಗದ ಈನಿರ್ಧಾರದಿಂದ ಸಮಸ್ಯೆಯಾಗಿದೆ. ಜನಸಂಖ್ಯೆಗೆಅನುಗುಣವಾಗಿ ಜಿಪಂ ಕ್ಷೇತ್ರ ಹೆಚ್ಚಿದ್ದು,ಅದರಂತೆ ತಾಪಂ ಕ್ಷೇತ್ರಗಳೂ ಹೆಚ್ಚಬೇಕಿತ್ತು.ಆದರೆ, ಏಕಾಏಕಿ ಜಿಲ್ಲೆಯಲ್ಲಿಯೇ 24 ತಾಪಂಕ್ಷೇತ್ರಗಳು ಕಡಿತವಾಗಿರುವುದು ಸ್ಪರ್ಧಾಕಾಂಕ್ಷಿಗಳ ಅಸಮಾಧಾನಕ್ಕೆ ಕಾರಣವಾಗುವ ಸಾಧ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next