ಹಾವೇರಿ: ಅಹಿಂದ ಹೆಸರಲ್ಲಿ ಆಡಳಿತಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಎಸ್‌ಟಿ ನಿಗಮದಲ್ಲಿ 187 ಕೋಟಿ ರೂ. ಲೂಟಿ ಮಾಡಿದ್ದು, ಕೂಡಲೇ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಜಾಗೊಳಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಜೆಡಿಎಸ್ ಕಾರ್ಯಕರ್ತರು ಜಿಲ್ಲಾಡಳಿತದ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
Advertisement
ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ ಗೌಡಶಿವಣ್ಣನವರ, ಎಸ್‌ಟಿ ಘಟಕದ ಅಧ್ಯಕ್ಷ ಮಂಜುನಾಥ ಕನ್ನಾಯ್ಕನವರ ನೇತೃತ್ವದಲ್ಲಿಬುಧವಾರ ಕಾರ್ಯಕರ್ತರು ಮನವಿ ಸಲ್ಲಿಸಿದರು. ಮಹರ್ಷಿ ವಾಲ್ಮೀಕಿ ನಿಗಮದ 187 ಕೋಟಿ ರೂ. ಹಗರಣವನ್ನು ಸಿಬಿಐಗೆ ಒಪ್ಪಿಸಿ ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಬೇಕು. ಸಿಎಂ ಸಿದ್ದರಾಮಯ್ಯ ಅವರು ಹಣಕಾಸು ಖಾತೆ ತಮ್ಮ ಕೈಯಲ್ಲಿ ಇಟ್ಟುಕೊಂಡಿದ್ದಾರೆ. ಎಸ್‌ಟಿ ನಿಗಮಕ್ಕೆ ಹಣ ಮಂಜೂರು ಮಾಡಿದ್ದಾರೆ.
Related Articles
Advertisement
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸಿದ್ಧಬಸಪ್ಪ ಯಾದವ್, ಅಲ್ತಾಪ್ ನದಾಫ್, ರಾಮನಗೌಡ್ರ ಪಾಟೀಲ, ಸತೀಶ ಮಾಳದಕರ, ಈರಣ್ಣನವಲಗುಂದ, ರಮೇಶ ಮಾಕನೂರ, ಮೋಹಮ್ ಬಿನ್ಹಾಳ, ರೀಠಾ ನಾಯ್ಕರ್, ಎಂ.ಎಸ್. ಹಣಗಿ, ಲಲಿತಾ ಉಜ್ಜನಗೌಡ್ರ, ಭರಮಣ್ಣಕೊಳಚಿ, ಬಿ.ಸಿ. ಗುದ್ದಿಶೆಟ್ಟರ, ಸಿದ್ಧಣ್ಣ ಗುಡಿಮುಂದ್ಲರ್, ಅಮೀರಜಾನ್ ಬೇಪಾರಿ ಇದ್ದರು.