Advertisement
ತಾಲೂಕಿನ ಮರೋಳ, ಹೊಸರಿತ್ತಿ, ಸಂಗೂರ,ಕೂಳೇನೂರ ಗ್ರಾಮ ಪಂಚಾಯಿತಿಗಳಲ್ಲಿಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರ, ಜಿಲ್ಲಾನ್ಯಾಯವಾದಿಗಳ ಸಂಘ, ಜಿಲ್ಲಾಡಳಿತ, ಜಿಲ್ಲಾಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕಪ್ರಚಾರ ಇಲಾಖೆ ಸಹಯೋಗದಲ್ಲಿ ಏರ್ಪಡಿಸಿದ್ದ ಕಾನೂನು ಸಾಕ್ಷರತಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
Related Articles
Advertisement
ಜಿಲ್ಲಾ ಪೆನಲ್ ವಕೀಲರಾದ ಎನ್.ಸಿ.ಕಾಯಕದ ಹಾಗೂ ಜಿ.ಕೆ.ನಾಗನೂರಮಾತನಾಡಿ, ಆಧುನಿಕ ತಂತ್ರಜ್ಞಾನಹೆಚ್ಚು ಬಳಕೆಯಿಂದ ಮಕ್ಕಳ ಮೇಲೆ ಕೆಟ್ಟಪರಿಣಾಮಗಳು ಉಂಟಾಗುತ್ತಿವೆ. ಮೊಬೈಲ್,ಕಂಪ್ಯೂಟರ್ ಬಳಕೆ ಸಂದರ್ಭದಲ್ಲಿ ಪಾಲಕರುಮಕ್ಕಳ ಮೇಲೆ ನಿಗಾ ವಹಿಸಬೇಕೆಂದು ಸಲಹೆನೀಡಿದರು.ಅಪ್ರಾಪ್ತ ಹೆಣ್ಣು ಮಗುವಿನ ಮೇಲೆಅತ್ಯಾಚಾರ ಎಸಗಿದ ಅಪರಾ ಗಳಿಗೆ ಪೋಕ್ಸೋ ಕಾಯ್ದೆಯಡಿ ಕಠಿಣ ಶಿಕ್ಷೆ ನೀಡಲಾಗುವುದುಎಂದು ಹೇಳಿದರು.
ಪೆನಲ್ ವಕೀಲರಾದ ಎಂ.ಸಿ. ಭರಮಣ್ಣಮಾತನಾಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಗೂನ್ಯಾಯ ದೊರೆಯಬೇಕು. ಕಾನೂನಿನ ಅರಿವುಇಲ್ಲದಿದ್ದಲ್ಲಿ ಸರಿಯಾದ ಮಾಹಿತಿ ಪಡೆಯಲು ಆಗುವುದಿಲ್ಲ.
ಲೋಕ ಅದಾಲತ್‌ನಲ್ಲಿ ತಮ್ಮವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕಬಗೆಹರಿಸಿಕೊಳ್ಳಬಹುದು ಎಂದು ಸಲಹೆನೀಡಿದರು.ಪೆನಲ್ ವಕೀಲರಾದ ಪಿ.ಬಿ.ಹೊಳಗಿ ಅವರುಸಾಮಾನ್ಯ ಕಾನೂನು ಅರಿವು, ಜನನ-ಮರಣ,ಮೋಟರು ಕಾಯ್ದೆ ಕುರಿತು ಮಾತನಾಡಿ,ವಾಹನ ಚಾಲನಾ ಪರವಾನಗಿ ಇಲ್ಲದೆ ವಾಹನಓಡಿಸುವುದು ಕಾನೂನಿನಲ್ಲಿ ಅಪರಾಧವಾಗಿದೆ.ವಾಹನಗಳ ಖರೀದಿಗೆ ಸಂಬಂಧಿ ಸಿದದಾಖಲೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.
ಮೋಟಾರು ವಿಮಾ ಪಾಲಿಸಿ ಮಾಡಿಸಬೇಕು.ವಾಹನದ ಜೊತೆಗೆ ನೋಂದಣಿ ದಾಖಲೆಗಳನ್ನುಹೊಂದಿರಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಹೊಸರಿತ್ತಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಭಾರತಿ ಹಳ್ಳಿಕೆರೆ,ಉಪಾಧ್ಯಕ್ಷ ಶಂಭಣ್ಣ ಗೋಪಾಳಿ, ಮರೊಳಗ್ರಾಪಂ ಉಪಾಧ್ಯಕ್ಷೆ ಸುಮಂಗಲಾ ಇ.ಟಿ.,ಸಂಗೂರ ಗ್ರಾಪಂ ಅಧ್ಯಕ್ಷೆ ರಜಿಯಾ ಬೇಗಂಜಿಗಳೂರ, ಉಪಾಧ್ಯಕ್ಷೆ ಮಂಜವ್ವ ಬಂಡಿವಡ್ಡರ,ಕುಳೇನೂರ ಗ್ರಾಪಂ ಅಧ್ಯಕ್ಷೆ ನೀಲವ್ವ ನಾಗೇಂದ್ರಪ್ಪಕೆಂಗೊಂಡ, ಉಪಾಧ್ಯಕ್ಷ ಸಿದ್ದಪ್ಪ ಅಣಜಪ್ಪಲಮಾಣಿ ಹಾಗೂ ಮರೋಳ ಪಿಡಿಒ ಬಸವರೆಡ್ಡಿಮಾಡಳ್ಳಿ, ಹೊಸರಿತ್ತಿ ಪಿಡಿಒ ದಾವುಲ್ ಮಲ್ಲಿಕ್‌ಕಮಗಾಲ್, ಸಂಗೂರ ಪಿಡಿಒ ಜರಿನಾ ಬೇಗಂ,ಕುಳೇನೂರ ಗ್ರಾಪಂ ಕಾರ್ಯದರ್ಶಿ ಎಂ.ಎಂ.ಹೊಟ್ಟಿ ಫಕ್ಕಣ್ಣನವರ, ಗ್ರಾಪಂ ಸದಸ್ಯರು, ಆಶಾಹಾಗೂ ಅಂಗನವಾಡಿ ಕಾರ್ಯಕರ್ತೆಯರು,ಗ್ರಾಮಸ್ಥರು ಇದ್ದರು.