Advertisement

ಹ್ಯಾಟ್ರಿಕ್‌ ಹೀರೋ ಶಿವಕುಮಾರ; “ಕೈ’ಬಿಟ್ಟ ಜಾತಿ ಲೆಕ್ಕಾಚಾರ

04:11 AM May 24, 2019 | Team Udayavani |

ಹಾವೇರಿ: ಭಾರಿ ಕುತೂಹಲ ಮೂಡಿಸಿದ್ದ ಹಾವೇರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಮೂರನೇ ಬಾರಿ ಗೆದ್ದು ಹ್ಯಾಟ್ರಿಕ್‌ ಗೆಲುವು ಸಾಧಿ ಸಿದ್ದಾರೆ.

Advertisement

ಬಿಜೆಪಿಯ ಶಿವಕುಮಾರ ಉದಾಸಿ ಕಾಂಗ್ರೆಸ್‌ ಅಭ್ಯರ್ಥಿ ಡಿ.ಆರ್‌.ಪಾಟೀಲ ಅವರನ್ನು 1,40,882 ಮತಗಳ ಅಂತರದಿಂದ ಪರಾಭವಗೊಳಿಸಿದ್ದಾರೆ. ಶಿವಕುಮಾರ ಉದಾಸಿ 6,83,660 ಮತಗಳನ್ನು ಗಳಿಸಿದರೆ, ಡಿ.ಆರ್‌. ಪಾಟೀಲ 5,42,778 ಮತ ಪಡೆದಿದ್ದಾರೆ.

ಶಿವಕುಮಾರ ಉದಾಸಿ ಅವರ ಈ ಗೆಲುವು “ಹ್ಯಾಟ್ರಿಕ್‌ ಕಿರೀಟ’ ತಂದು ಕೊಡುವ ಜತೆಗೆ ಸತತ 3 ಬಾರಿ ಜಯ ಸಾಧಿಸಿದ ಕ್ಷೇತ್ರದ ಮೊದಲ ಕಾಂಗ್ರೆಸ್ಸೇತರ ಸಂಸದ ಖ್ಯಾತಿಯನ್ನೂ ತಂದು ಕೊಟ್ಟಿದೆ. ಮೋದಿ ಅಲೆ ಕ್ಷೇತ್ರದಲ್ಲಿ ಮೋಡಿ ಮಾಡಿದ್ದರಿಂದ ಉದಾಸಿ ಕಳೆದ ಬಾರಿಗಿಂತ ಹೆಚ್ಚು ಅಂತರದಲ್ಲಿ ಗೆಲವು ಸಾಧಿಸಿದ್ದಾರೆ.


2014ರ ಚುನಾವಣೆಯಲ್ಲಿ ಶಿವಕುಮಾರ ಉದಾಸಿ 5,66,790 ಮತ ಪಡೆದು ಆಯ್ಕೆಯಾಗಿದ್ದರು. ಕಾಂಗ್ರೆಸ್‌ ಅಭ್ಯರ್ಥಿಯಾಗಿದ್ದ ಸಲೀಂ ಅಹ್ಮದ್‌ 4,79,219 ಮತ ಪಡೆದಿದ್ದರು. ಬಿಜೆಪಿ 87571 ಮತಗಳ ಅಂತರದಿಂದ ಗೆಲವು ಸಾಧಿಸಿತ್ತು.

ಕ್ಷೇತ್ರದಲ್ಲಿ ಒಟ್ಟು 10 ಜನ ಕಣದಲ್ಲಿದ್ದು ಬಿಜೆಪಿ ಹಾಗೂ ಕಾಂಗ್ರೆಸ್‌ ನಡುವೆ ನೇರ ಸ್ಪರ್ಧೆ ನಡೆದಿತ್ತು. ಉಳಿದಂತೆ ಕಣದಲ್ಲಿದ್ದ ಬಿಎಸ್‌ಪಿಯ ಆಯೂಬ್‌ಖಾನ್‌ ಪಠಾಣ 7479, ಉತ್ತಮ ಪ್ರಜಾಕೀಯ
ಪಾರ್ಟಿಯ ಈಶ್ವರ ಪಾಟೀಲ 7024, ಇಂಡಿಯನ್‌ ಲೇಬರ್‌ ಪಾರ್ಟಿಯ ಶೈಲೇಶ ನಾಜರೆ ಅಶೋಕ 1224, ಪಕ್ಷೇತರ ಅಭ್ಯರ್ಥಿಗಳಾದ ಬಸವರಾಜ ಶಂಕ್ರಪ್ಪ ದೇಸಾಯಿ 1305, ವೀರಭದ್ರಪ್ಪ ವೀರಪ್ಪ ಕಬ್ಬಿಣದ 2283, ಹನುಮಂತಪ್ಪ ದೇವೇಂದ್ರಪ್ಪ ಕಬ್ಟಾರ 6247, ರಾಮಪ್ಪ ಸಿದ್ದಪ್ಪ ಬೊಮ್ಮೊಜಿ 1389, ಶಿವಪ್ಪ ಕಲ್ಲಪ್ಪ ಪೂಜಾರ 5858 ಮತ
ಪಡೆದಿದ್ದಾರೆ.

ಕ್ಷೇತ್ರದಲ್ಲಿ ಒಟ್ಟು 7412 ಮತಗಳು ನೋಟಾ ಚಲಾವಣೆಯಾಗಿದ್ದು, ನೋಟಾ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಒಟ್ಟು 4592 ಅಂಚೆ ಮತಗಳಲ್ಲಿ 1209 ಮತಗಳು ತಿರಸ್ಕೃತಗೊಂಡಿವೆ. ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಐದು ಬಿಜೆಪಿ, ಎರಡು ಕಾಂಗ್ರೆಸ್‌ ಹಾಗೂ ಒಂದು ಪಕ್ಷೇತರ ಅಭ್ಯರ್ಥಿ ಇದ್ದಾರೆ. ಹೀಗಾಗಿ ಈ ಬಾರಿ ಕ್ಷೇತ್ರದಲ್ಲಿ ಸಹಜವಾಗಿ ಬಿಜೆಪಿ ಪ್ರಾಬಲ್ಯ ಹೆಚ್ಚಾಗಿತ್ತು. ಉದಾಸಿ ಹಾಲಿ ಸಂಸದರು ಆಗಿರುವುದರಿಂದ ಹೆಚ್ಚು ಬಲ ತಂದು ಕೊಟ್ಟಿತು.

Advertisement

ಮೋದಿ ಅಲೆ, ಪಕ್ಷದ ಮುಖಂಡರು, ಕಾರ್ಯಕರ್ತರ ಶ್ರಮದಿಂದ ಜಯ ಸಿಕ್ಕಿದೆ. ಕ್ಷೇತ್ರದ ಎಲ್ಲ ವಿಧಾನಸಭೆ ಕ್ಷೇತ್ರಗಳಲ್ಲಿ ಮುನ್ನಡೆ ಲಭಿಸುವ ನಿರೀಕ್ಷೆ ಇತ್ತು. ನಿಜವಾಗಿದೆ.
-ಶಿವಕುಮಾರ ಉದಾಸಿ,, ಗೆದ್ದ ಸಂಸದ

ಜನ ಅಭಿವೃದಿಟಛಿಗೆ ಮನ್ನಣೆ ಕೊಟ್ಟಿಲ್ಲ ಭಾವನಾತ್ಮಕ ವಿಷಯಗಳಿಗೆ ಮನ್ನಣೆ ಕೊಟ್ಟಿದ್ದಾರೆ. ಬಿಜೆಪಿ ಗೆಲುವಿಗೆ ಮೋದಿ ಅಲೆಯೇ ಕಾರಣ. ಮೈತ್ರಿ
ಸರ್ಕಾರದಲ್ಲಿ ಮನಸ್ಸುಗಳ ಮೈತ್ರಿಯೂ ಆಗಬೇಕಿತ್ತು.
– ಡಿ.ಆರ್‌. ಪಾಟೀಲ, ,
ಪರಾಜಿತ ಕಾಂಗ್ರೆಸ್‌ ಅಭ್ಯರ್ಥಿ

Advertisement

Udayavani is now on Telegram. Click here to join our channel and stay updated with the latest news.

Next