Advertisement

ನಾಳೆ ಹಳ್ಳಿ ಫೈಟ್‌ ಫಲಿತಾಂಶ ಅಖೈರು : 209 ಗ್ರಾಪಂಗಳ ಭವಿಷ್ಯ ನಿರ್ಧಾರ

04:30 PM Dec 29, 2020 | Team Udayavani |

ಹಾವೇರಿ: ಜಿಲ್ಲೆಯ ಗ್ರಾಪಂಗಳಿಗೆ ಎರಡು ಹಂತಗಳಲ್ಲಿ ನಡೆದ ಚುನಾವಣೆಯ ಮತ ಎಣಿಕೆ ಡಿ. 30ರಂದು ಬೆಳಗ್ಗೆ 8ರಿಂದ ಜಿಲ್ಲೆಯ ಎಂಟು ತಾಲೂಕು ಕೇಂದ್ರಗಳಲ್ಲಿ ಜರುಗಲಿದ್ದು, ಎಣಿಕೆಗಾಗಿ 323 ಟೇಬಲ್‌ಗ‌ಳ ವ್ಯವಸ್ಥೆ ಮಾಡಲಾಗಿದೆ.

Advertisement

ಮೂರು ಪಾಳಿಯಲ್ಲಿ ಪಂಚಾಯತಿಗಳನ್ನು ವಿಂಗಡಿಸಿ ಮತ ಎಣಿಕೆ ನಡೆಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ. 22ರಂದು ನಡೆದ 104 ಹಾಗೂ ಡಿ. 27ರಂದು ನಡೆದ 105 ಗ್ರಾಮ ಪಂಚಾಯತಿಗಳ ಚುನಾವಣೆ ಅತ್ಯಂತ ಶಾಂತಿಯುತವಾಗಿ ನಡೆದಿದೆ. ಆಯಾ ತಾಲೂಕಾ ಕೇಂದ್ರಗಳಲ್ಲಿ ನಡೆಯುವ ಎಣಿಕೆ ಕಾರ್ಯಕ್ಕೆ ಸಾಮಾಜಿಕ ಅಂತರ ಮತ್ತು ಜನದಟ್ಟಣೆ ನಿಯಂತ್ರಿಸುವ ನಿಟ್ಟಿನಲ್ಲಿ ಮೂರು ಅವಧಿ ನಿಗಧಿ ಪಡಿಸಲಾಗಿದೆ. ಮೂರು ಪ್ರತ್ಯೇಕ ಬಣ್ಣದ ಪಾಸ್‌ಗಳನ್ನು ಅಭ್ಯರ್ಥಿಗಳಿಗೆ ಹಾಗೂ ಏಜೆಂಟರಿಗೆ ನೀಡಲಾಗುವುದು. ಬೆಳಗ್ಗೆ 8ರಿಂದ ಮಧ್ಯಾಹ್ನ 12ಗಂಟೆವರೆಗೆ ಗುಲಾಬಿ ಬಣ್ಣದ ಕಾರ್ಡ್‌, ಮಧ್ಯಾಹ್ನ 12ರಿಂದ ಸಂಜೆ 4 ಗಂಟೆವರೆಗೆ ನೀಲಿ ಬಣ್ಣದ ಕಾರ್ಡ್‌ ಹಾಗೂ ಸಂಜೆ 4ರಿಂದ
ಮುಕ್ತಾಯ¨ ‌ವರೆಗೆ ಹಳದಿ ಬಣ್ಣದ ಕಾರ್ಡ್‌ ವ್ಯವಸ್ಥೆ ಮಾಡಲಾಗಿದೆ. ಆಯಾ ಅವಧಿಯಲ್ಲಿ ಎಣಿಕೆಗೊಳ್ಳುವ ಪಂಚಾಯತಿಯ ಅಭ್ಯರ್ಥಿಗಳು ಹಾಗೂ ಏಜೆಂಟರು ಮಾತ್ರ ತಮಗೆ ನೀಡಿದ ಪಾಸ್‌ಗಳೊಂದಿಗೆ ಎಣಿಕೆ ಕೇಂದ್ರಕ್ಕೆ ಪ್ರವೇಶ ಮಾಡಬಹುದು ಎಂದು ತಿಳಿಸಿದರು.

ಇದನ್ನೂ ಓದಿ:ಲಕ್ಷ್ಮೇಶ್ವರದಲ್ಲಿ ಮೈನವಿರೇಳಿಸಿದ ಟಗರಿನ ಕಾಳಗ

323 ಟೇಬಲ್‌ ವ್ಯವಸ್ಥೆ: ಮತ ಎಣಿಕೆಗೆ ಈಗಾಗಲೇ ಅಗತ್ಯ ಸಿಬ್ಬಂದಿ ನಿಯೋಜಿಸಲಾಗಿದೆ. ಆಯಾ ತಾಲೂಕಿನ ಒಟ್ಟು ಪಂಚಾಯತಿಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲಾಗುವುದು. ದೊಡ್ಡ ಪಂಚಾಯತಿಗಳನ್ನು ಮೊದಲ ಅವಧಿಯಲ್ಲಿ
ಎಣಿಕೆಗೆ ತೆಗೆದುಕೊಳ್ಳಲಾಗುವುದು. ಮತ ಎಣಿಕೆಗಾಗಿ ಈಗಾಗಲೇ ಜಿಲ್ಲಾದ್ಯಂತ 323 ಟೇಬಲ್‌ ವ್ಯವಸ್ಥೆ ಮಾಡಲಾಗಿದೆ. ಅಗತ್ಯಬಿದ್ದರೆ ತಹಶೀಲ್ದಾರ್‌ ಅವರು ಹೆಚ್ಚುವರಿ ಟೇಬಲ್‌ ವ್ಯವಸ್ಥೆಗೆ ನಿರ್ಧರಿಸಬಹುದು. ಪ್ರತಿ ಟೇಬಲ್‌ಗೆ ಒಬ್ಬ ಎಣಿಕೆ ಉಸ್ತುವಾರಿ ಅಧಿಕಾರಿ, ಎರಡು ಜನ ಎಣಿಕೆ ಸಹಾಯಕರು, ಒಬ್ಬ ಗ್ರೂಪ್‌ ಡಿ ನೌಕರ ಸೇರಿದಂತೆ ನಾಲ್ಕು ಜನರನ್ನು
ನೇಮಕ ಮಾಡಲಾಗಿದೆ. ಒಟ್ಟಾರೆ 704 ಎಣಿಕೆ ಸಹಾಯಕರು, 323 ಟೇಬಲ್‌ ಉಸ್ತುವಾರಿ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಎಲ್ಲ ಎಣಿಕಾ ಕೊಠಡಿಗಳಲ್ಲಿ ಅಗತ್ಯ ಸ್ಯಾನಿಟೈಸರ್‌ ವ್ಯವಸ್ಥೆ, ಅಧಿಕಾರಿ ಹಾಗೂ ಸಿಬ್ಬಂದಿಗೆ ಮಾಸ್ಕ್ ಪೂರೈಕೆಗೆ
ಆರೋಗ್ಯ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ತಂಡ ನಿಯೋಜಿಸಲಾಗಿದೆ. ಶಾಂತಿ ಸುವ್ಯವಸ್ಥೆಗಾಗಿ ಅಗತ್ಯ ಪೊಲೀಸ್‌ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದರು.

Advertisement

ಎಣಿಕೆ ಕೇಂದ್ರಕ್ಕೆ ಆಗಮಿಸುವ ಅಭ್ಯರ್ಥಿ ಹಾಗೂ ಏಜೆಂಟರಿಗೆ ಚುನಾವಣಾ ಆಯೋಗದಿಂದ ನಿಗಧಿಪಡಿಸಿದ ಗುರುತಿನ ಚೀಟಿ(ಪಾಸ್‌) ನೀಡಲು ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ. ಮತ ಎಣಿಕೆ ಕೇಂದ್ರದಲ್ಲಿ ನಿರ್ಬಂಧಿತ ವಸ್ತುಗಳನ್ನು
ತರದಂತೆ ತಿಳಿಸಲಾಗಿದೆ. ಎಣಿಕೆ ಕೇಂದ್ರದ ಸುತ್ತಮುತ್ತಲಿನ 200 ಮೀಟರ್‌ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು.

ಮಾದರಿ ನೀತಿ ಸಂಹಿತೆಯಡಿ ಜಿಲ್ಲೆಯಲ್ಲಿ ಈವರೆಗೆ 11 ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲಿಸಲಾಗಿದೆ. ಚುನಾವಣೆಗೆ ಸಂಬಂಧಿಸಿ
ಪ್ರತಿಬಂಧಕ ಕ್ರಮಗಳಾದ(107) ಅಡಿ ಒಟ್ಟು 375 ಪ್ರಕರಣಗಳ ಪೈಕಿ 87 ಪ್ರಕರಣಗಳಿಗೆ ಇಂಟೇರಿಯಮ್‌ ಬಾಂಡ್‌ ನೀಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಜಿಪಂ ಸಿಇಒ ಮಹಮ್ಮದ್‌ ರೋಶನ್‌, ಅಪರ ಜಿಲ್ಲಾಧಿಕಾರಿ ಎಸ್‌.ಯೋಗೇಶ್ವರ, ಉಪವಿಭಾಗಾಧಿಕಾರಿ
ಡಾ| ದಿಲೀಷ್‌ ಶಶಿ, ಚುನಾವಣಾ ತಹಶೀಲ್ದಾರ್‌ ಪ್ರಶಾಂತ ನಾಲವಾರ ಇದ್ದರು.

224 ಸ್ಥಾನಗಳಿಗೆ ಅವಿರೋಧ ಆಯ್ಕೆ
ಜಿಲ್ಲೆಯ 209 ಗ್ರಾಪಂಗಳ 1056 ಕ್ಷೇತ್ರಗಳ 2967 ಸ್ಥಾನಗಳ ಪೈಕಿ 68 ಕ್ಷೇತ್ರಗಳ 224 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. 988 ಕ್ಷೇತ್ರಗಳ 2743 ಸ್ಥಾನಗಳಿಗೆ ಚುನಾವಣೆ ನಡೆದಿದ್ದು, 7450 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದರು. ಮೊದಲ ಹಂತದಲ್ಲಿ ಶೇ.84.01 ಹಾಗೂ ಎರಡನೇ ಹಂತದಲ್ಲಿ ಶೇ. 85.13 ಮತದಾನವಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next