ಹಾವೇರಿ: ಕಂದಾಯ ಇಲಾಖೆಗೆ ಸೀಮಿತವಾಗಿದ್ದ ಗ್ರಾಮ ವಾಸ್ತವ್ಯಕಾರ್ಯಕ್ರಮದಲ್ಲಿ ಎಲ್ಲ ಇಲಾಖೆ ಅಧಿಕಾರಿಗಳನ್ನು ಆಹ್ವಾನಿಸಿ ಗ್ರಾಮದ ಜನತೆಯ ಸಮಸ್ಯೆಗಳ ನಿವಾರಣೆಗೆ ಕ್ರಮ ವಹಿಸಲಾಗಿದೆ. ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಹೇಳಿದರು.
ಸವಣೂರು ತಾಲೂಕು ಹೊಸನೀರಲಗಿ ಗ್ರಾಮದಲ್ಲಿ ಮಾಧ್ಯಮದವರೊಂದಿಗೆಮಾತನಾಡಿದ ಅವರು, ವೃದ್ಧಾಪ್ಯ ವೇತನ, ವಿಧವಾ ವೇತನ ಸೇರಿದಂತೆ ಹಲವು ಮನವಿಗಳನ್ನುಸ್ವೀಕರಿಸಲಾಗಿದೆ. ಈ ದಿನವೇ ಅವರಿಗೆ ಮಂಜೂರಾತಿಪತ್ರ ನೀಡಲಾಗುವುದು.ಗ್ರಾಮದ ಜನರ ಆರೋಗ್ಯದ ಸ್ಥಿತಿಗತಿ ಅರಿಯಲು ಹೆಲ್ತ್ ಪ್ರೊಫೈಲ್ ತಯಾರಿಸಲಾಗಿದೆ. ವೈಜ್ಞಾನಿಕವಾಗಿ ಎಲ್ಲರ ಆರೋಗ್ಯದ ವಿಶ್ಲೇಷಣೆ ಮಾಡಿ ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಗ್ರಾಮ ವಾಸ್ತವ್ಯದ ಅಂಗವಾಗಿ ಆರೋಗ್ಯ ಶಿಬಿರ ಆಯೋಜಿಸಲಾಗಿದೆ. ಆರೋಗ್ಯ ತಪಾಸಣೆ ನಡೆಸಲಾಗಿದೆ ಎಂದರು.
ಮಕ್ಕಳು, ತಾಯಂದಿರ ಅಪೌಷ್ಟಿಕ ಕುರಿತಂತೆ ತಪಾಸಣೆ ನಡೆಸಲಾಗಿದೆ. ಒಂದೊಮ್ಮೆಅಪೌಷ್ಟಿಕತೆಯಿಂದ ಬಳಲುವ ಮಕ್ಕಳಿಗೆ ನ್ಯೂಟ್ರೇಷನ್ ರಿ ಹ್ಯಾಬ್ಲಿಟೇಷನ್ ಕೇಂದ್ರದಲ್ಲಿ ದಾಖಲಿಸಿ ಅಪೌಷ್ಟಿಕತೆ ನಿವಾರಣೆಗೆ ಕ್ರಮವಹಿಸಲಾಗುವುದು. ಗ್ರಾಮದಲ್ಲಿರುವ ಕುಡಿಯುವ ನೀರಿನ ಹಳೆಯ ಟ್ಯಾಂಕರ್‌ಶಿಥಿಲಗೊಂಡಿದ್ದು, ಹೊಸ ಟ್ಯಾಂಕ್ ನಿರ್ಮಾಣಕ್ಕೆ ಗ್ರಾಮಸ್ಥರು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಜಲಜೀವನ ಯೋಜನೆಯಡಿ ಹೊಸಟ್ಯಾಂಕ್ ನಿರ್ಮಾಣಕ್ಕೆ ಮಂಜೂರಾತಿ ನೀಡಲಾಗಿದೆ. 22 ಜನರಿಗೆ ವೈಯಕ್ತಿಕಶೌಚಾಲಯ ನಿರ್ಮಾಣ ಮಂಜೂರಾತಿ ನೀಡಲಾಗಿದೆ. ವಿದ್ಯಾರ್ಥಿಗಳಿಗೆ ಬಸ್ ಸಮಸ್ಯೆ ನಿವಾರಿಸಿ ಸೋಮವಾರದಿಂದಲೇ ವಿದ್ಯಾರ್ಥಿಗಳ ಸಮಯಕ್ಕೆ ಬಸ್ ಓಡಿಸಲು ಸೂಚನೆ ನೀಡಲಾಗಿದೆ. ಗ್ರಂಥಾಲಯ ಬೇಡಿಕೆಯನ್ನು ಈಡೇರಿಸಲಾಗಿದೆ.ಶಾಲಾ ಕೊಠಡಿಯೊಂದಲ್ಲಿ ತಾತ್ಕಾಲಿಕವಾಗಿ ಗ್ರಂಥಾಲಯ ಆರಂಭಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಪರಿಶಿಷ್ಟರ ಬೇಡಿಕೆಯಂತೆ ಸ್ಮಶಾನ ಭೂಮಿ, ರಸ್ತೆ ಮತ್ತು ಚರಂಡಿ ನಿರ್ಮಾಣ, ದೇವಸ್ಥಾನದ ಬೇಡಿಕೆಗಳ ಈಡೇರಿಕೆಗೆ ಕ್ರಮ ವಹಿಸಲಾಗುವುದು.ನಿವೇಶನ ಮತ್ತು ಮನೆಗಳ ನಿರ್ಮಾಣಕ್ಕೆ ಪಟ್ಟಾ ನೀಡಿಕೆ ಕುರಿತಂತೆ ಸಮಸ್ಯೆ ಪರಿಹರಿಸಲು 15 ದಿವಸದ ಗಡುವು ನೀಡಲಾಗಿದೆ. 60 ಮನೆಗಳಿಗೆ ಪಟ್ಟಾ ಕೊಡಲು ಕ್ರಮ ಕೈಗೊಳ್ಳಲಾಗುವುದು.ಬೆಂಕಿ ಅವಘಡದಿಂದ ಭೂ ದಾಖಲೆಗಳು ಸವಣೂರ ಕಂದಾಯ ಕಚೇರಿಯಲ್ಲಿ ಸುಟ್ಟುಹೋಗಿವೆ. 2011ರ ಸಂದರ್ಭದಲ್ಲಿ ಈ ದಾಖಲೆಗಳು ಸುಟ್ಟು ಹೋಗಿದೆ. ಹಳೆಯ ದಾಖಲೆಗಳು ಸಿಗದಿದ್ದರೆ ಭೂಮಿಗೆ ಸಂಬಂಧಿಸಿದ ಬೇರೆ ಬೇರೆ ದಾಖಲೆಗಳ ಝರಾಕ್ಸ್ ಪ್ರತಿ ನೀಡಿದರೆ ಹೊಸ ಭೂ ದಾಖಲೆಗಳನ್ನು ಸೃಷ್ಟಿ ಮಾಡಲಾಗುವುದು. ಇಲ್ಲವಾದರೆ ಜಿಲ್ಲಾ ಸಮಿತಿಯಲ್ಲಿ ಈ ಸಮಸ್ಯೆ ನಿವಾರಣೆ ಕುರಿತಂತೆ ಚರ್ಚಿಸಿ ಹೊಸ ದಾಖಲೆಗಳ ಸೃಜನೆಗೆ ಕ್ರಮ ವಹಿಸಲಾಗುವುದು ಎಂದರು.
ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ ರೋಷನ್ ಮಾತನಾಡಿ, ಗ್ರಾಮದ ಕುಡಿಯುವ ನೀರು, ರಸ್ತೆ, ಚರಂಡಿ, ಶೌಚಾಲಯ, ನಿವೇಶನ ಮತ್ತು ವಸತಿ ರಹಿತರನ್ನು ಗುರುತಿಸಿ ನಿವೇಶನ ನಿರ್ಮಾಣಕ್ಕೆ ಒಂದರಿಂದ ಎರಡು ತಿಂಗಳೊಳಗಾಗಿ ಪರಿಹಾರ ಕಂಡುಕೊಳ್ಳಲು ಕ್ರಮ ವಹಿಸಲಾಗುವುದು. ಗ್ರಾಮದ ಶೈಕ್ಷಣಿಕ, ಸಾಮಾಜಿಕ, ಆರೋಗ್ಯ ಹಾಗೂ ಆರ್ಥಿಕಕ್ಷೇತ್ರದ ಅಭಿವೃದ್ಧಿಗೆ ಗ್ರಾಮ ಸಭೆಯಲ್ಲಿ ತೀರ್ಮಾನ ಕೈಗೊಂಡು ಕ್ರಿಯಾ ಯೋಜನೆ ರೂಪಿಸಿ ಅನುದಾನ ಒದಗಿಸಬೇಕು.
ಗ್ರಾಮಸ್ಥರು ಸಭೆಗಳಲ್ಲಿ ಭಾಗವಹಿಸಿ ಗ್ರಾಮದ ಅಭಿವೃದ್ಧಿಗೆ ಸಹಕರಿಸಬೇಕೆಂದು ಹೇಳಿದರು. ಅಪರ ಜಿಲ್ಲಾಧಿಕಾರಿ ಎಸ್.ಯೋಗೇಶ್ವರ, ಉಪವಿಭಾಗಾಧಿಕಾರಿ ಅನ್ನಪೂರ್ಣ ಮುದಕಮ್ಮನವರ ಇದ್ದರು.