Advertisement

ಅರ್ಥಪೂರ್ಣ ಅಮೃತ ಮಹೋತ್ಸವಕ್ಕೆ ನಿರ್ಧಾರ

12:47 PM Mar 23, 2021 | Team Udayavani |

ಹಾವೇರಿ: ನಗರದ ಹುತಾತ್ಮ ಮೈಲಾರ ಮಹದೇವಪ್ಪನವರ ಸಾಂಸ್ಕೃತಿಕ ಭವನದಲ್ಲಿ 75ನೇ ವರ್ಷದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವ ಉದ್ಘಾಟನಾ ಸಮಾರಂಭ ಮಾ.23ರಂದು ಆಯೋಜಿಸಲಾಗಿದೆ. ಪ್ರತಿತಿಂಗಳು ನಿರ್ದಿಷ್ಟ ವಿಷಯ ಆಧಾರಿತ ಕಾರ್ಯಕ್ರಮಗಳ ಮುಂದಿನ 75 ವಾರಗಳ ಕಾಲ ನಿರಂತರ ಕಾರ್ಯಕ್ರಮ ಆಯೋಜಿಸುವ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅರ್ಥಪೂರ್ಣವಾಗಿ ನಡೆಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿ ಕಾರಿ ಸಂಜಯ ಶೆಟ್ಟೆಣ್ಣವರ ತಿಳಿಸಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ 75ನೇ ವರ್ಷದ ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವ ಕಾರ್ಯಕ್ರಮಗಳ ಆಯೋಜನೆ ಪೂರ್ವ ಸಿದ್ಧತೆ ಕುರಿತು ಅಧಿ ಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು,ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಮಾ.23ರಿಂದ ಆ.15ರವರೆಗೆ ಪ್ರತಿ ತಿಂಗಳು ಒಂದು ವಿಷಯದಆಧಾರದ ಮೇಲೆ ಕಾರ್ಯಕ್ರಮ ಆಯೋಜಿಸಲುವಿಷಯಾಧಾರಿತ ಕಾರ್ಯಕ್ರಮ ಯೋಜಿಸಬೇಕೆಂದು ಸೂಚಿಸಿದರು.

ಮಾಲಾರ್ಪಣೆ ಕಾರ್ಯಕ್ರಮ: ಮಾ.23ರಂದು 75ನೇ ವರ್ಷದ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವಹಾಗೂ ವಿಜಯ ದಿವಸ, ಕಿಸಾನ್‌ ದಿವಸ ಕಾರ್ಯಕ್ರಮದಅಂಗವಾಗಿ ಬೆಳಗ್ಗೆ 8.30ಕ್ಕೆ ಹಾವೇರಿ ನಗರಸಭೆಎದುರಿನ ಹುತಾತ್ಮ ಮೈಲಾರ ಮಹದೇವಪ್ಪ ಹಾಗೂಮಹಾತ್ಮ ಗಾಂಧೀಜಿ ಮೂರ್ತಿಗೆ ಮಾಲಾರ್ಪಣೆಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ನಂತರ ಸೈಕಲ್‌ ರ್ಯಾಲಿಗೆ ಚಾಲನೆ ನೀಡಲಾಗುವುದು. ಬೆಳಗ್ಗೆ 10 ಗಂಟೆಗೆ ಹುತಾತ್ಮ ಮೈಲಾರ ಮಹದೇವಪ್ಪನವರ ಸಾಂಸ್ಕೃತಿಕ ಭವನದಲ್ಲಿ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಲಾಗುವುದುಎಂದರು.

ಅಮೃತ ಮಹೋತ್ಸವ ಅಂಗವಾಗಿ ಮೈಲಾರ ಮಹದೇವಪ್ಪ ಸಾಂಸ್ಕೃತಿಕ ಭವನದ ಆವರಣದಲ್ಲಿಸಾವಯವ ಕೃಷಿ ಪ್ರದರ್ಶನ ಹಾಗೂ ಸಭಾಂಗಣದಲ್ಲಿಪ್ರೌಢಶಾಲಾ ವಿದ್ಯಾರ್ಥಿಗಳಿಂದ ದೇಶ ಭಕ್ತಿ ಗೀತೆಗಳಸ್ಪರ್ಧೆ ಹಾಗೂ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

ಅಂತಾರಾಷ್ಟ್ರೀಯ ಯೋಗ ಪಟುಗಳಿಂದ ಯೋಗ ಪ್ರದರ್ಶನ, ದೇಶ ಭಕ್ತಿ ನೃತ್ಯ ಕಾರ್ಯಕ್ರಮ, ಸ್ವಾತಂತ್ರ್ಯ ಹೋರಾಟಗಾರರ ಚಿತ್ರಕಲಾ ಪ್ರದರ್ಶನ, ಸ್ವಾತಂತ್ರ್ಯಹೋರಾಟಗಾರ ಬಗ್ಗೆ ಉಪನ್ಯಾಸ, ರಂಗೋಲಿ ಸ್ಪರ್ಧೆ, ಬೀದಿ ನಾಟಕ, ಹಾಗೂ ಸ್ವಾತಂತ್ರÂ ಯೋಧರಿಗೆ ಸನ್ಮಾನಜರುಗಲಿದೆ.

Advertisement

ಬೆಳಗ್ಗೆ 10 ಗಂಟೆಗೆ ಉದ್ಘಾಟನೆ ಸಮಾರಂಭದಲ್ಲಿಕೇಂದ್ರ ಕಲ್ಲಿದ್ದಲು, ಗಣಿ ಮತ್ತು ಸಂಸದೀಯವ್ಯವಹಾರಗಳ ಸಚಿವರಾದ ಪ್ರಲ್ಹಾದ ಜೋಷಿ ಹಾಗೂವಿಪ ಸಭಾಪತಿಗಳಾದ ಬಸವರಾಜ ಹೊರಟ್ಟಿ ಘನಉಪಸ್ಥಿಯಲ್ಲಿ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಶಾಸಕರು, ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಆಯೋಗದ ಅಧ್ಯಕ್ಷ ನೆಹರು ಓಲೇಕಾರಅಧ್ಯಕ್ಷತೆ ವಹಿಸಲಿದ್ದಾರೆ. ಕೃಷಿ ಸಚಿವ ಬಿ.ಸಿ. ಪಾಟೀಲ,ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆ ಸಚಿವಆರ್‌. ಶಂಕರ ಗೌರವಾನ್ವಿತ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಉಗ್ರಾಣನಿಗಮದ ಅಧ್ಯಕ್ಷ ಯು.ಬಿ. ಬಣಕಾರ, ಸಂಸದಶಿವಕುಮಾರ ಉದಾಸಿ, ಜಿಪಂ ಅಧ್ಯಕ್ಷ ಏಕನಾಥಭಾನುವಳ್ಳಿ, ವಿಪ ಶಾಸಕರಾದ ಶ್ರೀನಿವಾಸ ಮಾನೆ,ಎಸ್‌.ವಿ. ಸಂಕನೂರ, ಶಾಸಕ ಸಿ.ಎಂ. ಉದಾಸಿ, ವಿಪಶಾಸಕ ಪ್ರದೀಪ್‌ ಶೆಟ್ಟರ, ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ (ಪೂಜಾರ),ಜಿಪಂ ಉಪಾಧ್ಯಕ್ಷೆ ರಾಜೇಶ್ವರಿ ಕಲ್ಲೇರ, ಹಾವೇರಿತಾಪಂ ಅಧ್ಯಕ್ಷೆ ಕಮಲವ್ವ ಪಾಟೀಲ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ ಸಂಗೂರ ಸೇರಿದಂತೆ ಅಧಿಕಾರಿಗಳು, ವಿವಿಧ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.

ಸಭೆಯಲ್ಲಿ ಜಿಪಂ ಸಿಇಒ ಮಹಮ್ಮದ್‌ ರೋಷನ್‌, ಅಪರ ಜಿಲ್ಲಾಧಿಕಾರಿ ಎಸ್‌. ಯೋಗೇಶ್ವರ ಇತರರು ಇದ್ದರು.

ಆಯಾ ತಿಂಗಳಿಗನುಗುಣವಾಗಿ ಕಾರ್ಯಕ್ರಮ ; ಮಹಿಳಾ ಸಬಲೀಕರಣ, ಲಿಂಗ ಸಮಾನತೆ, ಸಾಮಾಜಿಕ ನ್ಯಾಯ, ಶಿಕ್ಷಣ, ಆರೋಗ್ಯ, ಕೃಷಿ ಸುಸ್ಥಿರತೆ, ಪರಿಸರ, ಸ್ವಚ್ಛತೆ, ಪ್ರವಾಸೋದ್ಯಮ, ಸಾಹಿತ್ಯ, ಜಾನಪದ ಕಲೆ, ವಿಜ್ಞಾನ, ನಿರುದ್ಯೋಗ ನಿವಾರಣೆ, ಯೋಗ, ಚಿತ್ರಕಲೆ,ಜಲ ಸಾಕ್ಷರತೆ, ಅನಕ್ಷರತೆ ನಿವಾರಣೆ, ಒಳಗೊಂಡಂತೆ ವಿಷಯಾಧಾರಿತ ಕಾರ್ಯಕ್ರಮ ಆಯಾ ತಿಂಗಳಿಗೆ ಅನುಗುಣವಾಗಿ ಆಯೋಜಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next