ಹಾವೇರಿ: ತಮ್ಮನಿಂದಲೇ ಅಣ್ಣನ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜಿಲ್ಲೆ ಬ್ಯಾಡಗಿ ತಾಲೂಕಿನ ಬುಡಪನಹಳ್ಳಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ನಾಗರಾಜ ಗೊರವರ (22) ತಮ್ಮನಿಂದ ಕೊಲೆಯಾದ ದುರ್ದೈವಿ. ದಿಳ್ಳೆಪ್ಪ ಗೊರವರ ಸಹೋದರನ್ನನ್ನೆ ಕೊಲೆ ಮಾಡಿದ ವ್ಯಕ್ತಿ.
ಪ್ರತಿ ದಿನ ಕುಡಿದು ಮನೆಯಲ್ಲಿ ನಾಗರಾಜ ಗೊರವರ ಗಲಾಟೆ ಮಾಡುತ್ತಿದ್ದ.ಇದರಿಂದ ಕುಟುಂಬದ ಸದಸ್ಯರು ರೋಸಿ ಹೋಗಿದ್ದರು. ಮಂಗಳವಾರ ರಾತ್ರಿ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ಈ ಭಯಾನಕ ಹತ್ಯೆ ಕಂಡು ಬುಡಪನಹಳ್ಳಿ ಗ್ರಾಮಸ್ಥರು ಬೆಚ್ಚಿಬಿಳುವಂತಾಗಿದೆ. ಅಣ್ಣನನ್ನು ಹತ್ಯೆ ಮಾಡಿದ ಆರೋಪಿ ದಿಳ್ಳೆಪ್ಪ ಪೊಲೀಸರಿಗೆ ಶರಣಾಗಿದ್ದಾನೆ.
ಇದನ್ನೂ ಓದಿ:ಜಮ್ಮು-ಕಾಶ್ಮೀರ: 13 ವಿದ್ಯಾರ್ಥಿಗಳು ಉಗ್ರ ಸಂಘಟನೆಗೆ ಸೇರ್ಪಡೆ, ಮೂವರು ಶಿಕ್ಷಕರ ಬಂಧನ
ಘಟನಾ ಸ್ಥಳಕ್ಕೆ ಎಸ್ ಪಿ ದೇವರಾಜ್ ಭೇಟಿ ಪರಿಶೀಲಿಸಿದ್ದಾರೆ. ಈ ಕುರಿತು ಬ್ಯಾಡಗಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.