Advertisement

ಹಾವೇರಿ:111 ಜನರಿಗೆ ಸೋಂಕು; 6 ಜನರು  ಸಾವು

08:30 PM Apr 29, 2021 | Team Udayavani |

ಹಾವೇರಿ: ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯ ಸೋಂಕಿನ ಪ್ರಕರಣಗಳ ನಾಗಾಲೋಟ ಮುಂದುವರೆದಿದ್ದು, ಗುರುವಾರ ಬರೊಬ್ಬರಿ 111 ಜನರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದೆ ಹಾಗೂ 6  ಜನರು ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ.

Advertisement

ಜಿಲ್ಲೆಯಲ್ಲಿ ಈವರೆಗೆ 12,406 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಢಪಟ್ಟಿವೆ. ಗುರುವಾರ ೪೯ ಜನರು ಸೋಂಕಿನಿಂದ ಗುಣಮುಖರಾಗಿದ್ದು, ಇದುವರೆಗೆ 11,598 ಜನರು ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಹೊಂದಿದ್ದಾರೆ ಹಾಗೂ  ಈವರೆಗೆ 223 ಜನರು ಕೋವಿಡ್‌ನಿಂದ ಮೃತಪಟ್ಟಿದ್ದು, 585 ಸಕ್ರಿಯ ಪ್ರಕರಣಗಳಿವೆ.

ತಾಲೂಕುವಾರು ವಿವರದಂತೆ ಬ್ಯಾಡಗಿ-1, ಹಾನಗಲ್ಲ-4, ಹಾವೇರಿ-23, ಹಿರೇಕೆರೂರು-9, ರಾಣೆಬೆನ್ನೂರು-48, ಸವಣೂರು-10, ಶಿಗ್ಗಾವಿ-13, ಇತರೆ-3 ಜನರಿಗೆ ಸೋಂಕು ದೃಢಪಟ್ಟಿದೆ.

ಸೋಂಕಿನಿಂದ ಗುಣಮುಖರಾಗಿ ಬ್ಯಾಡಗಿ-5, ಹಾನಗಲ್ಲ-9, ಹಾವೇರಿ-13, ಹಿರೇಕೆರೂರು-3, ರಾಣೆಬೆನ್ನೂರು-11, ಸವಣೂರು-೨2, ಶಿಗ್ಗಾವಿ-5, ಇತರೆ-1 ಜನರು ಬಿಡುಗಡೆ ಹೊಂದಿದ್ದಾರೆ.

ಆರು ಸೋಂಕಿತರು ಸಾವು..

Advertisement

ಜಿಲ್ಲೆಯಲ್ಲಿ ಗುರುವಾರ ಆರು ಜನರು ಕೋವಿಡ್ ಸೋಂಕಿನಿಂದ ಮೃತಪಟ್ಟಿದ್ದಾರೆ ಎಂದು ದೃಢಪಡಿಸಲಾಗಿದೆ. ಜಿಲ್ಲೆಯ ಹಾನಗಲ್ಲ ತಾಲೂಕಿನ 50 ವರ್ಷದ ಮಹಿಳೆ, ಸವಣೂರು ತಾಲೂಕಿನ 60ವರ್ಷ ವೃದ್ಧ, ಬ್ಯಾಡಗಿ ತಾಲೂಕಿನ 62 ವರ್ಷದ ವೃದ್ಧೆ, ಶಿಗ್ಗಾವಿ ತಾಲೂಕಿನ 75 ವರ್ಷ ವೃದ್ಧ ಹಾಗೂ ಹಾವೇರಿ ತಾಲೂಕಿನ 58 ವರ್ಷದ ಮಹಿಳೆ ಹಾಗೂ 51 ವರ್ಷದ ಪುರುಷ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ. ಕೋವಿಡ್ ನಿಯಮಾನುಸಾರ ಮೃತರ ಅಂತ್ಯಕ್ರಿಯೆ ನಡೆಸಲಾಗಿದೆ ಎಂದು ಡಿಎಚ್‌ಒ ಡಾ. ಎಚ್.ಎಸ್.ರಾಘವೇಂದ್ರಸ್ವಾಮಿ  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next