Advertisement

ಜಾನುವಾರು ಕಾಲುಬಾಯಿ ಬೇನೆಗೆ ಲಸಿಕೆ : ಡಿಸಿ ಸಂಜಯ ಶೆಟ್ಟೆಣ್ಣವರ

03:21 PM Oct 01, 2020 | sudhir |

ಹಾವೇರಿ: ಜಾನುವಾರುಗಳ ಕಾಲು-ಬಾಯಿ ಬೇನೆ ರೋಗ ನಿರ್ಮೂಲನೆಗಾಗಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮ ದಡಿ ಅ.2 ರಿಂದ ಜಿಲ್ಲಾದ್ಯಂತ ಹಮ್ಮಿಕೊಂಡಿ ರುವ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಪಲ್ಸ್‌ ಪೋಲಿಯೋ ಮಾದರಿ ಯಲ್ಲಿ ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಬೇಕೆಂದು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಪಶು
ವೈದ್ಯಾಧಿಕಾರಿಗಳ ತಂಡಕ್ಕೆ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿ ಕಾರಿಗಳ ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರಮಕ್ಕೆ ಸಂಬಂಧಿಸಿ
ಬುಧವಾರ ನಡೆದ ಮೊದಲ ಸುತ್ತಿನ ಕಾಲುಬಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮದ ಜಿಲ್ಲಾ ಮಟ್ಟದ ನಿರ್ವಹಣಾ ಸಮಿತಿ ಸಭೆಯಲ್ಲಿ ಮಾತನಾಡಿದರು.

ಕಾಲುಬಾಯಿ ಬೇನೆ ಲಸಿಕೆಯಿಂದ ಜಿಲ್ಲೆಯ ಯಾವುದೇ ಜಾನುವಾರು ವಂಚಿತವಾಗಬಾರದು. ಈ ಕುರಿತಂತೆ ಪ್ರತಿ ಗ್ರಾಮ, ಪಟ್ಟಣ ಹಾಗೂ ನಗರಗಳಲ್ಲಿ ಮುಂಚಿತವಾಗಿ ಡಂಗೂರದ ಮೂಲಕ ಜಾಗೃತಿ ಮೂಡಿಸಬೇಕು. ಪೋಸ್ಟರ್‌, ಬ್ಯಾನರ್‌ಗಳನ್ನು ಪ್ರದರ್ಶಿಸಬೇಕು. ಯಾವ ಗ್ರಾಮದಲ್ಲಿ ಯಾವ ದಿನಾಂಕದಂದು ಯಾವ ಸಮಯದಲ್ಲಿ ಯಾವ ಸ್ಥಳದಲ್ಲಿ ಲಸಿಕೆ ಹಾಕುತ್ತಾರೆ ಎಂಬುದನ್ನು ರೈತರಿಗೆ, ಪಶುಪಾಲಕರಿಗೆ ಮುಂಚಿತವಾಗಿ ಮಾಹಿತಿ ನೀಡಬೇಕು. ಈ ಕುರಿತಂತೆ ಸ್ಥಳೀಯ ಸಹಕಾರಿ ಸಂಘಗಳು, ಗ್ರಾಮ ಪಂಚಾಯತಿ, ಪಟ್ಟಣ ಪಂಚಾಯತಿಗಳು ಪ್ರಚಾರ ಕಾರ್ಯದಲ್ಲಿ ಹಾಗೂ ಲಸಿಕಾ ಕಾರ್ಯಕ್ರಮದಲ್ಲಿ ಪೂರ್ಣ ಸಹಕಾರ
ನೀಡುವಂತೆ ಸೂಚನೆ ನೀಡಿದರು.

ಇದನ್ನೂ ಓದಿ :ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸರ್ಪ್ರೈಸ್ ಅಭ್ಯರ್ಥಿ? ಮಲ್ಲಿಕಾರ್ಜುನ ಖರ್ಗೆ ಸುಳಿವು

ಜಾನುವಾರುಗಳಿಗೆ ಕಾಲುಬಾಯಿ ಬೇನೆ ಲಸಿಕೆ ಹಾಕುವುದರ ಜೊತೆಗೆ ಬಾಕಿ ಇರುವ ಕಿವಿಯೋಲೆಗಳನ್ನು ಜಾನುವಾರುಗಳಿಗೆ
ಅಳವಡಿಸಲು ಪಶುವೈದ್ಯಕೀಯ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ ದೇಸಾಯಿ ಮಾತನಾಡಿ, ಮೊದಲ ಹಂತದಲ್ಲಿ ಜಾನುವಾರುಗಳಿಗೆ ಚರ್ಮ, ಗಂಟುರೋಗ ಸೋಂಕು ಕಾಣಿಸಿಕೊಂಡ ಗ್ರಾಮಗಳನ್ನು ಹೊರತುಪಡಿಸಿ ಉಳಿದ ಪ್ರದೇಶಗಳಲ್ಲಿ ಕಾಲುಬಾಯಿ ಬೇನೆ ಲಸಿಕೆ ಹಾಕಿ ಮುಗಿಸಿ. ನಂತರದ ದಿನಗಳಲ್ಲಿ ಇತರ ಪ್ರದೇಶದ ಜಾನುವಾರುಗಳಿಗೆ ಲಸಿಕೆ ಹಾಕುವ ಕಾರ್ಯ ಕೈಗೊಳ್ಳಿ ಎಂದು ಸಲಹೆ ನೀಡಿದರು. ಪಶುಪಾಲನಾ ಮತ್ತು ಪಶುವೈದ್ಯ ಸೇವೆ ಇಲಾಖೆ ಉಪನಿರ್ದೇಶಕ ರಾಜು ಕೂಲೇರ ಮಾತನಾಡಿ, ಜಿಲ್ಲೆಯ ಏಳು ತಾಲೂಕಿನ 698 ಹಳ್ಳಿಗಳಲ್ಲಿ 3,46,561ಜಾನುವಾರುಗಳಿವೆ(ದನ, ಎಮ್ಮೆ ಮತ್ತು ಹಂದಿಗಳು). ಈ ಜಾನುವಾರುಗಳಿಗೆ 3,47,000 ಡೋಸ್‌ಗಳ ಲಸಿಕೆ ಕೆಂದ್ರ ಸರ್ಕಾರದಿಂದ ಜಿಲ್ಲೆಗೆ ಸರಬರಾಜಾಗಿದೆ. ಪಶುವೈದ್ಯಾಧಿಕಾರಿಗಳ ನೇತೃತ್ವದಲ್ಲಿ 40 ಲಸಿಕಾ ತಂಡಗಳನ್ನು ರಚಿಸಲಾಗಿದೆ.

Advertisement

ಇದನ್ನೂ ಓದಿ :ಕದನವಿರಾಮ ಉಲ್ಲಂಘನೆ; ಪಾಕ್ ಸೇನಾ ಪಡೆ ದಾಳಿಗೆ ಮೂವರು ಯೋಧರು ಹುತಾತ್ಮ

ಪ್ರತಿ ತಂಡದಲ್ಲಿ ಕನಿಷ್ಟ ಒಬ್ಬ ಪಶುವೈದ್ಯರು, ನಾಲ್ಕು ಜನ ಅರೆ ತಾಂತ್ರಿಕ ಸಿಬ್ಬಂದಿ ಹಾಗೂ ಒಬ್ಬ ಡಿ ದರ್ಜೆ ಸಿಬ್ಬಂದಿ ಇರುತ್ತಾರೆ ಎಂದು ಮಾಹಿತಿ ನೀಡಿದರು. ಪ್ರತಿ ತಂಡ ನಿಶ್ಚಿತ ದಿನಾಂಕದಂದು ನಿಗದಿಪಡಿಸಿದ ಗ್ರಾಮಗಳಿಗೆ ಭೇಟಿ ನೀಡಿ ಲಸಿಕೆ ಕಾರ್ಯ
ಪೂರ್ಣಗೊಳಿಸಲಿದೆ. ಪ್ರತಿಯೊಬ್ಬ ಪಶುವೈದ್ಯಕೀಯ ಸಿಬ್ಬಂದಿ ಪ್ರತಿದಿನ ಅಂದಾಜು 100ರಿಂದ 120 ಜಾನುವಾರುಗಳಿಗೆ ಲಸಿಕೆಯನ್ನು ಹಾಕಲಿದ್ದಾರೆ. ಲಸಿಕಾ ಕಾರ್ಯಕ್ರಮಕ್ಕಾಗಿ 40 ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ಆಯಾ ದಿನದ ಲಸಿಕಾ
ಕಾರ್ಯಕ್ರಮದ ಪ್ರಗತಿ ವರದಿಗಳನ್ನು ಆನ್‌ಲೈನ್‌ ರಿಪೋರ್ಟಿಂಗ್‌ ವ್ಯವಸ್ಥೆ ಕೈಗೊಳ್ಳಲಾಗಿದೆ ಎಂದು ವಿವರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next