Advertisement

ಹಾವೇರಿ: ಇಂದು 73 ಜನರಿಗೆ ಸೋಂಕು ದೃಢ; 142 ಜನರು ಗುಣಮುಖ

08:25 PM Oct 05, 2020 | Mithun PG |

ಹಾವೇರಿ: ಜಿಲ್ಲೆಯಲ್ಲಿ ಸೋಮವಾರ 73 ಜನರಿಗೆ ಕೋವಿಡ್ -19 ಸೋಂಕು ದೃಢಪಟ್ಟಿದ್ದು, 142 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.

Advertisement

ಇದೀಗ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 9,293 ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ ಕೂಡ  172 ಕ್ಕೆ ಜಿಗಿದಿದೆ.

ಇಂದು 142 ಜನ ಗುಣಮುಖರಾಗಿದ್ದು ಆ ಮೂಲಕ  ಈವರೆಗೆ   7855 ಜನರು ಗುಣಮುಖರಾದಂತಾಗಿದೆ. ಇನ್ನೂ ಒಟ್ಟು 1266 ಸಕ್ರಿಯ ಕೋವಿಡ್-19 ಪ್ರಕರಣಗಳು ಜಿಲ್ಲೆಯಲ್ಲಿವೆ.

ಜಿಲ್ಲೆಯಲ್ಲಿ ಪ್ರತಿನಿತ್ಯ ಕೋವಿಡ್ ಸೋಂಕಿತರ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿದ್ದು, ಚೇತರಿಕೆ ಪ್ರಮಾಣ ಕೂಡ ದ್ವಿಗುಣಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next