ಮುಂಬೈ: ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಅವರು ಭಾರತೀಯ ಬ್ಯಾಟರ್ ಒಬ್ಬನನ್ನು ಹಾಡಿ ಹೊಗಳಿದ್ದಾರೆ. ಹೊಸತನದ ಆಟದಲ್ಲಿ ಈತನಷ್ಟು ಉತ್ತಮ ಬ್ಯಾಟರ್ ನನ್ನು ನಾನು ಇದುವರೆಗೆ ನೋಡಿಲ್ಲ ಎಂದು ಹೇಳಿದ್ದಾರೆ. ಅಂದಹಾಗೆ ಪಂಟರ್ ನಿಂದ ಹೊಗಳಿಕೆ ಪಡೆದ ಆಟಗಾರ ಬೇರಾರು ಅಲ್ಲ, ಟಿ20 ಕ್ರಿಕೆಟ್ ನ ನಂಬರ್ 1 ಬ್ಯಾಟರ್ ಸೂರ್ಯಕುಮಾರ್ ಯಾದವ್.
ಟೀಂ ಇಂಡಿಯಾದ ಬಲಗೈ ದಾಂಡಿಗನನ್ನು ರಿಕಿ ಪಾಂಟಿಂಗ್ ಕೊಂಡಾಡಿದ್ದಾರೆ. ಸೂರ್ಯಕುಮಾರ್ ಇತ್ತೀಚೆಗೆ ಐಸಿಸಿ ಟಿ20 ಕ್ರಿಕೆಟರ್ ಆಫ್ ದಿ ಇಯರ್ ಪ್ರಶಸ್ತಿ ಪಡೆದಿದ್ದರು.
ಇದನ್ನೂ ಓದಿ:ಸರಕಾರಿ ಶಾಲೆ ದತ್ತು; ಜನಪ್ರತಿನಿಧಿಗಳ ಸ್ಪಂದನೆಗೆ ಪ್ರೊ| ದೊರೆಸ್ವಾಮಿ ಕೋರಿಕೆ
ಈ ಬಗ್ಗೆ ಐಸಿಸಿ ಜತೆ ಮಾತನಾಡಿದ ರಿಕಿ ಪಾಂಟಿಂಗ್, “ನನ್ನ ಪ್ರಕಾರ ಆವಿಷ್ಕಾರದ ಮಟ್ಟಿಗೆ, ಕೌಶಲ್ಯದ ಮಟ್ಟಿಗೆ ನಾನು ಸೂರ್ಯಕುಮಾರ್ ಗಿಂತ ಉತ್ತಮ ಆಟಗಾರನನ್ನು ನೋಡಿಲ್ಲ” ಎಂದು ಹೇಳಿದ್ದಾರೆ.
“ಈತ ತನ್ನ ಆಟದಲ್ಲಿ ಮಾಡುತ್ತಿರುವುದನ್ನು ಇನ್ನು ಹಲವಾರು ಆಟಗಾರರು ಮಾಡಲು ಪ್ರಯತ್ನಿಸುತ್ತಾರೆ. ಇದು ಟಿ20 ಕ್ರಿಕೆಟ್ ಗೆ ಹೊಸತನ ನೀಡಲಿದೆ” ಎಂದಿದ್ದಾರೆ.
ದಕ್ಷಿಣ ಆಫ್ರಿಕಾದ ವೈಟ್-ಬಾಲ್ ಸ್ಪೆಷಲಿಸ್ಟ್ ಎಬಿ ಡಿವಿಲಿಯರ್ಸ್ ಮತ್ತು ಆಸ್ಟ್ರೇಲಿಯಾದ ಮಾಜಿ ವಿಕೆಟ್-ಕೀಪರ್ ಆಡಮ್ ಗಿಲ್‌ಕ್ರಿಸ್ಟ್ ರೊಂದಿಗೆ ಸೂರ್ಯ ಕುಮಾರ್ ಬ್ಯಾಟಿಂಗ್ ಶೈಲಿಯನ್ನು ಹೋಲಿಸಿದ ಪಾಂಟಿಂಗ್, ಭಾರತದ ಕ್ರಿಕೆಟಿಗನನ್ನು ಟಿ20 ಮಾದರಿಯ ಶ್ರೇಷ್ಠ ಆವಿಷ್ಕಾರಕ ಎಂದು ಕರೆದರು.