Advertisement

ವಿದ್ಯಾರ್ಥಿಗಳೇ ಪರೀಕ್ಷೆಗೆ ಸಿದ್ಧರಾಗಿ

05:04 AM Jun 21, 2020 | Lakshmi GovindaRaj |

ಭಾರತೀನಗರ: ಕೋವಿಡ್‌ 19 ಹಿನ್ನಲೆಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರಗಳಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಪರೀಕ್ಷೆಗೆ ಸಿದ್ಧರಾಗಿ ಎಂದು ತಹಶೀಲ್ದಾರ್‌ ವಿಜಯಕುಮಾರ್‌ ತಿಳಿಸಿದರು. ಮದ್ದೂರು ತಾಲೂಕು ಕ್ಷೇತ್ರ ಶಿಕ್ಷಾಣಾಧಿಕಾರಿ ಕಚೇರಿಯಿಂದ ನಡೆದ ಪ್ರೌಢ ಶಾಲೆ ಮುಖ್ಯ ಶಿಕ್ಷಕರ ಕಾರ್ಯಾಗಾರದಲ್ಲಿ ಮಾತನಾಡಿದರು.

Advertisement

ಸರ್ಕಾರ ಪರೀಕ್ಷೆ ನಡೆಸಲು ಸಿದ್ಧತೆ ಮಾಡಿಕೊಂಡು ದಿನಾಂಕ ನಿಗದಿ ಮಾಡಿದ್ದು, ಮುಂಜಾಗೃತ ಕ್ರಮ  ಕೈಗೊಳ್ಳಬೇಕು. ಯಾವುದೇ ರೋಗ ಲಕ್ಷಣ ಕಂಡು ಬಂದರೆ ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸದೇ ಜಾಗೃತರಾಗಿ ಕರ್ತವ್ಯ ನಿರ್ವಾಹಿಸಬೇಕು ಎಂದು ಹೇಳಿದರು. ತಾಪಂ ಇಒ ಮುನಿರಾಜು ಮಾತನಾಡಿ, ಪರೀಕ್ಷಾ ಕೇಂದ್ರಗಳಿಗೆ ಗ್ರಾಪಂನಿಂದ  ಔಷಧ ಸಿಂಪಡಿಸಿ, ಸ್ಯಾನಿಟೈಸರ್‌ ಮಾಡಲಾಗುವುದು. ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೇ ಪರೀಕ್ಷೆ ಬರೆಯಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಶಿಕ್ಷಾಣಾಧಿಕಾರಿ ಬಿ.ಚಂದ್ರಶೇಖರ್‌ ಮಾತನಾಡಿ, ಜಿಲ್ಲೆಯಲ್ಲಿ ಒಟ್ಟು 21260  ವಿದ್ಯಾರ್ಥಿಗಳು ಪರೀಕ್ಷೆ ಹಾಜರಾಗಲಿದ್ದು, ಹೊರ ಜಿಲ್ಲೆಯಿಂದ 225 ಆಗಮಿಸಿದರೆ ನಮ್ಮ ಜಿಲ್ಲೆಯಿಂದ ಬೇರೆ ಜಿಲ್ಲೆಗಳಿಗೆ 134 ವಿದ್ಯಾರ್ಥಿಗಳು ತೆರಳಿ ಪರೀಕ್ಷೆ ಬರೆಯಲಿದ್ದಾರೆ ಎಂದು ಹೇಳಿದರು. ಸಭೆ ಅಧ್ಯಕ್ಷತೆಯನ್ನು ಕ್ಷೇತ್ರ  ಶಿಕ್ಷಾಣಾಧಿಕಾರಿ ಮಹದೇವು ವಹಿಸಿದ್ದರು. ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಸಂದೀಪ್‌ ಕೋರೆ, ಶಿಕ್ಷಣಾಧಿಕಾರಿ ಶ್ರೀನಿವಾಸ್‌, ಸುಬ್ರಮಣ್ಯ, ಸತೀಶ್‌, ಮಹೇಶ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next