Advertisement

ಯಶಸ್ವಿ ಗರ್ಭಧಾರಣೆಗೆ ಆಹಾರ ಕ್ರಮಬದ್ಧವಾಗಿರಲಿ

10:11 AM Mar 04, 2020 | mahesh |

ಹೆಣ್ಣು ಪರಿಪೂರ್ಣ ಎನಿಸುವುದೇ ಆಕೆ ತಾಯಿಯಾದಾಗ. ಗರ್ಭ ಧಾರಣೆ ಅನಂತರ ಜಾಗರೂಕತೆಯಿಂದ ಇರಬೇಕಾಗುತ್ತದೆ. ಸೇವಿಸುವ ಆಹಾರದಲ್ಲಿ ಎಚ್ಚರವಾಗಿಸಬೇಕಾಗುತ್ತದೆ.ಅಧ್ಯಯನದ ಪ್ರಕಾರ ಆಹಾರ ಕ್ರಮದಿಂದಲೂ ಗರ್ಭಪಾತ ಆಗುವ ಸಾಧ್ಯತೆ ಇದೆ.ಈ ನಿಟ್ಟಿನಲ್ಲಿ ಗರ್ಭಿಣಿಯರು ಕ್ರಮಬದ್ಧ ಆಹಾರಕ್ರಮವನ್ನು ರೂಢಿಸಿಕೊಳ್ಳಿಬೇಕಾಗುತ್ತದೆ.

Advertisement

ತಾಯ್ತನ ಎಂಬುದು ಪ್ರತಿ ಮಹಿಳೆಗೂ ಅದ್ಭುತ ಅನುಭವ. ಮಹಿಳೆ ಗರ್ಭ ಧರಿಸಿದ್ದಾಳೆಂದು ಗೊತ್ತಾದ ಬಳಿಕ ಆಗುವ ಸಂತಸ ವರ್ಣನಾತೀತ. ಒಂಬತ್ತನೇ ಮಾಸದವರೆಗೂ ಕಾಯುವಿಕೆ-ಕುತೂಹಲದ ಸಮ್ಮಿಲನದೊಂದಿಗೆ ಭವಿಷ್ಯದ ಮಗುವಿನ ಸುಂದರ ಕಲ್ಪನೆಯನ್ನು ಪೋಣಿಸುತ್ತಾ ಸಾಗುತ್ತಾಳೆ ತಾಯಿ. ಆದರೆ, ಇಂತಹ ಸಮಯದಲ್ಲೇ ಗರ್ಭಪಾತದ ಆಘಾತವನ್ನು ಅದೇಗೆ ಸಹಿಸಿಕೊಳ್ಳುತ್ತಾಳೆ?

ಹೌದು. ಇತ್ತೀಚಿನ ಕೆಲ ವರ್ಷಗಳಲ್ಲಿ ಗರ್ಭಪಾತವೆಂಬುದು ಸಾಮಾನ್ಯ ಎಂಬಂತಾಗಿದೆ. ಪ್ರತಿ 10ರಲ್ಲಿ ಓರ್ವ ಮಹಿಳೆಗೆ ಗರ್ಭಪಾತವಾಗುತ್ತದೆ ಎನ್ನು ತ್ತವೆ ಕೆಲವು ವರದಿಗಳು. ಬದ ಲಾದ ಜೀವನಶೈಲಿ, ದೇಹಕ್ಕೆ ವ್ಯಾಯಾಮ ಇಲ್ಲದಿರುವಿಕೆ, ಮಾನಸಿಕ ಒತ್ತಡ, ಅತಿಯಾದ ದೇಹದಂಡನೆ ಮುಂತಾ ದವು ಗಳು ಗರ್ಭಪಾತಕ್ಕೆ ಕಾರಣ ವಾಗುತ್ತಿವೆ. ಇದರೊಂದಿಗೆ ತಪ್ಪಿದ ಆಹಾರಕ್ರಮವೂ ಗರ್ಭಪಾತದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ಅಷ್ಟೇ ಸತ್ಯ.

ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ನಗರವಾಸಿಗಳಲ್ಲಿ ಗರ್ಭಪಾತ ಸಂಭವಿಸುವುದು ಹೆಚ್ಚುತ್ತಿದೆ. ತಪ್ಪಿದ ಆಹಾರ ಕ್ರಮ ಮತ್ತು ಮಾನಸಿಕ ಒತ್ತಡ ಗರ್ಭಪಾತಕ್ಕೆ ನೇರ ಕಾರಣ ಎಂದೇ ಹೇಳಬಹುದು. ಹೀಗಾಗಿ ಗರ್ಭಿಣಿಯಾಗುವುದಕ್ಕೂ ಮುನ್ನ ಜೀವನಶೈಲಿಯಲ್ಲಿ ಬದಲಾವಣೆ ಅಗತ್ಯವಾಗಿ ಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ.

ಗರ್ಭಪಾತಕ್ಕೆ ಮುಖ್ಯ ಕಾರಣಗಳಲ್ಲಿ ಆಹಾರಕ್ರಮವೂ ಒಂದು. ಪ್ರೊಟೀನ್‌, ವಿಟಮಿನ್‌ಯುಕ್ತ, ಪೋಲಿಕ್‌ ಸಮೃದ್ಧ ಆಹಾರಗಳನ್ನು ಸೇವಿಸದೇ ಇರುವುದು, ಭ್ರೂಣದ ಬೆಳವಣಿಗೆಯ ಮೇಲೆ ನೇರ ಪರಿಣಾಮ ಬೀರಿ ಗರ್ಭಪಾತಕ್ಕೂ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರು. ಬೇಗನೆ ಹಣ್ಣಾಗಲು ಇಂಜೆಕ್ಷನ್‌ ನೀಡಿದ ಹಣ್ಣು ಹಂಪಲುಗಳ ಸೇವನೆಯೂ ಗರ್ಭಪಾತಕ್ಕೆ ಕಾರಣವಾಗುತ್ತಿದೆ. ಭ್ರೂಣದ ಒಟ್ಟು ಬೆಳವಣಿಗೆಗೆ ಆಹಾರಕ್ರಮವೂ ಅಗತ್ಯವಾಗಿರುತ್ತದೆ.

Advertisement

ಫೋಲಿಕ್‌ ಆ್ಯಸಿಡ್‌ ಔಷಧ
ನಗರ ಭಾಗಗಳಲ್ಲಿ ಫೋಲಿಕ್‌ ಆ್ಯಸಿಡ್‌ ಸಮೃದ್ಧ ಆಹಾರಗಳು ಕಡಿಮೆ ಪ್ರಮಾಣ ದಲ್ಲಿರು ವುದರಿಂದ ಔಷಧ ರೂಪದಲ್ಲಿಯೂ ಅದನ್ನು ಪಡೆದುಕೊಳ್ಳುವುದು ಅತಿ ಮುಖ್ಯವಾಗಿರುತ್ತದೆ. ದಂಪತಿ ಗರ್ಭಧಾರಣೆಗೆ ಪ್ರಯತ್ನಿಸುವ ಮೊದಲು ವೈದ್ಯರನ್ನು ಸಂಪರ್ಕಿಸಿ ಸಮಾ ಲೋಚನೆ ನಡೆಸ ಬೇಕು. ವೈದ್ಯರು ಪೋಲಿಕ್‌ ಆ್ಯಸಿಡ್‌ ಔಷಧ ಗಳನ್ನು ಸಲಹೆ ಮಾಡುತ್ತಾರೆ. ಈ ಔಷಧ ವನ್ನು ವೈದ್ಯರ ಸಲಹೆಯಂತೆ ಪ್ರತಿದಿನ ತೆಗೆದು ಕೊಳ್ಳು ವುದರಿಂದ ಗರ್ಭಪಾತ ದಂತಹ ಆಘಾತಗಳನ್ನು ಶೇ. 50ರಷ್ಟು ತಡೆಗಟ್ಟಬಹುದು.

ಡಯಟ್‌ ನಕ್ಷೆ ಅನುಸರಿಸಿ
ಸೇವಿಸುವ ಆಹಾರದಿಂದ ಕಬ್ಬಿಣದ ಅಂಶವನ್ನು ದೇಹದೊಳಗೆ ಬಳಸಿಕೊಳ್ಳಲು ವಿಟಮಿನ್‌ ಸಿ ಅಗತ್ಯ ಬಳವಿದೆ. ಗರ್ಭಿಣಿ ಯಾಗಿರುವ ಸಮಯದಲ್ಲಿ ವಿಶೇಷ ವಾಗಿ ವಿಟಮಿನ್‌ ಸಿ ಸೇರಿದಂತೆ ಎಲ್ಲ ಪೌಷ್ಠಿಕಾಂಶಗಳು ಲಭ್ಯವಾಗುವಂತೆ ನೋಡಿಕೊಳ್ಳುತ್ತದೆ.

ಫಲವಂತಿಕೆಯ ಅಳಿವು-ಉಳಿವು ನಾವು ಸೇವಿಸುವ ಆಹಾರ ಕ್ರಮದ ಮೇಲೆ ಅವಲಂಬಿತ ವಾಗಿರುತ್ತದೆ. ಹಾಗಾಗಿ ಪ್ರತಿ ದಿನ ಆಹಾರ ಸೇವನೆಗೆ ಡಯಟ್‌ ನಕ್ಷೆ ಅನುಸರಿಸುವುದು ಸೂಕ್ತವಾಗುತ್ತದೆ. ಗರ್ಭಧಾರಣೆಗೆ ಪ್ರಯತ್ನಿಸುವಾಗ ಬೆಳಗ್ಗೆ ಜೋಳ/ರಾಗಿ/ಅಕ್ಕಿ ರೊಟ್ಟಿ, ಪುದಿನ ಚಟ್ನಿ, ಮೊಸರು, ಹಾಲು, ಮಧ್ಯಾಹ್ನ ಹೆಸರು ಬೇಳೆ ತೊಪ್ಪೆ, ಹುರುಳಿ ಕಾಯಿ ಪಲ್ಯ, ತಾಜಾ ತರಕಾರಿಗಳಾದ ಸೌತೆ, ಟೊಮೆಟೋ, ಈರುಳ್ಳಿ ಸಲಾಡ್‌ ಸೇವಿಸುವುದು ಉಪಯುಕ್ತ. ರಾತ್ರಿಯ ಭೋಜನದಲ್ಲಿ ಮಿಶ್ರ ತರಕಾರಿ ಫಲಾವ್‌, ಪಲ್ಯ, ಬೀಟ್‌ರೋಟ್‌ ಮೊಸರು ಬಜ್ಜಿ ಮುಂತಾದವುಗಳನ್ನು ಸೇವಿಸಿದರೆ ದೇಹಕ್ಕೆ ಉತ್ತಮ ಪ್ರೊಟೀನ್‌ ದೊರೆಯುತ್ತದೆ. ಹಾಲು, ಹಣ್ಣು, ಮೊಸರು ಪ್ರತಿದಿನದ ಆಹಾರದಲ್ಲಿ ಇದ್ದರೆ ಪರಿಣಾಮಕಾರಿ.

ಪೋಲಿಕ್‌ ಸಮೃದ್ಧ ಆಹಾರಗಳನ್ನು ಹೆಚ್ಚೆಚ್ಚು ಸೇವಿ ಸುವುದ ರಿಂದ ಗರ್ಭ ಧಾರಣೆಯ ಬಳಿಕ ಭ್ರೂಣದ ಬೆಳ ವಣಿಗೆಗೆ ಸಹಕಾರಿ. ಪೋಲಿಕ್‌ ಹೇರಳ ವಾಗಿರುವ ಪಾಲಕ್‌ ಸೊಪ್ಪನ್ನು ದೈನಂದಿನ ಪದಾರ್ಥದಲ್ಲಿ ಬಳಸಿದರೆ ಉತ್ತಮ. ಬಸಳೆ ಸೊಪ್ಪು, ಮೆಂತೆ ಸೊಪ್ಪು, ಹರಿವೆ ಸೊಪ್ಪುಗಳ ಪಲ್ಯ ಸೇವನೆ ಹಿತಕಾರಿಯಾಗಿರುತ್ತದೆ.

ಸಂತಾನೋತ್ಪತ್ತಿಗೆ ಯೋಗ
ಪಿಸಿಓಎಸ್‌ ಸಮಸ್ಯೆ ಬಹುತೇಕ ಮಹಿಳೆ ಯರನ್ನು ಕಾಡುವ ಅತಿ ಸಾಮಾನ್ಯ ಸಮಸ್ಯೆ. ಯೋಗಾಸನ ಮಾಡುವುದ ರಿಂದ ಈ ಸಮಸ್ಯೆಯನ್ನು ನಿವಾರಣೆ ಮಾಡಿ ಸಂತಾನೋತ್ಪತ್ತಿಗೆ ಮುಂದಾಗ ಬಹುದು. ಭುಜಂಗಾಸನವು ಸಂತಾನೋತ್ಪತ್ತಿ ವ್ಯವಸ್ಥೆಗೆ ತುಂಬಾ ಪ್ರಯೋ ಜನ ಕಾರಿಯಾಗಿದೆ. ಪಿಸಿಓಎಸ್‌ ಹೊಂದಿ ದ್ದಲ್ಲಿ ತೂಕ ಇಳಿಸಿಕೊಳ್ಳುವುದಕ್ಕೆ ಹೋರಾಡು ತ್ತಿದ್ದರೆ, ಈ ಭಂಗಿಯನ್ನು ಪ್ರಯತ್ನಿಸ ಬಹುದು. ಆದರೆ, ಪ್ರಯತ್ನಿ ಸುವುದಕ್ಕೂ ಮುನ್ನ ಯೋಗ ಪರಿಣತರ ಸಲಹೆ ಅಗತ್ಯವಾಗಿರುತ್ತದೆ. ಹೂಕೋಸು, ಕ್ಯಾಬೇಜ್‌ನಂತಹ ನಾರುಯುಕ್ತ ಆಹಾರ ಸೇವನೆ, ಮೀನು, ಕೋಳಿ ಮಾಂಸ ಸೇವನೆಯಿಂದ ಪಿಸಿಓಎಸ್‌ ನಿವಾರಣೆಯಾಗುತ್ತದೆ. ಸಕ್ಕರೆಯುಕ್ತ ತಿಂಡಿ, ಪಾನೀಯ, ಸಂಸ್ಕರಿತ ಆಹಾರಗಳನ್ನು ಅಗತ್ಯವಾಗಿ ತ್ಯಜಿಸಬೇಕು.

ಆಹಾರ ಕ್ರಮವೂ ಗರ್ಭಪಾತದ ಮೇಲೆ ಪರಿಣಾಮ ಬೀರುತ್ತದೆ. ರಾಸಾಯನಿಕ ಸೇರ್ಪಡೆ ಯಾದ, ಇಂಜೆಕ್ಷನ್‌ ಮೂಲಕ ಬೆಳೆಸಿದ ಆಹಾರ ಗಳನ್ನು ತೆಗೆದು ಕೊಳ್ಳದಿರುವುದು ಉತ್ತಮ. ಪ್ರೊಟೀನ್‌, ವಿಟಮಿನ್‌, ಪೋಲಿಕ್‌ ಆ್ಯಸಿಡ್‌ ಸಮೃದ್ಧ ಆಹಾರಗಳನ್ನೇ ಸೇವಿಸಬೇಕು.
-ಡಾ| ಸವಿತಾ, ವೈದ್ಯರು

-ಧನ್ಯಾ ಬಾಳೆಕಜೆ

Advertisement

Udayavani is now on Telegram. Click here to join our channel and stay updated with the latest news.

Next