Advertisement

ಕೈಗಳಲ್ಲಿ ಕುರಾನ್‌ ಜತೆ ಕಂಪ್ಯೂಟರ್‌ ಇರಲಿ

08:15 AM Mar 02, 2018 | Team Udayavani |

ನವದೆಹಲಿ: “ಮುಸ್ಲಿಮರ ಒಂದು ಕೈಯ್ಯಲ್ಲಿ ಕುರಾನ್‌ ಇದ್ದರೆ, ಮತ್ತೂಂದು ಕೈಯ್ಯಲ್ಲಿ ಕಂಪ್ಯೂಟರ್‌ ಇರಬೇಕು.’ ದೇಶದ ಮುಸ್ಲಿಮರಿಗೆ ಇಂಥದ್ದೊಂದು ಕರೆ ಕೊಟ್ಟಿದ್ದು ಪ್ರಧಾನಿ ನರೇಂದ್ರ ಮೋದಿ. ನವದೆಹಲಿಯಲ್ಲಿ ಗುರುವಾರ ನಡೆದ “ಇಸ್ಲಾಮಿಕ್‌ ಹೆರಿಟೇಜ್‌: ಪ್ರಮೋಟಿಂಗ್‌ ಅಂಡರ್‌ಸ್ಟಾಂಡಿಂಗ್‌ ಆ್ಯಂಡರ್‌ ಮಾಡರೇಷನ್‌’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಭಾರತ ಪ್ರವಾಸದಲ್ಲಿರುವ ಜೋರ್ಡಾನ್‌ ದೊರೆ ಅಬ್ದುಲ್ಲಾ 2 ಬಿನ್‌ ಅಲ್‌ ಹುಸೇನ್‌ ಅವರೂ ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

Advertisement

ಇಲ್ಲಿ ಮಾತನಾಡಿದ ಪ್ರಧಾನಿ ಮೋದಿ, “ಉಗ್ರವಾದ ಮತ್ತು ತೀವ್ರವಾದದ ವಿರುದ್ಧ ಹೋರಾಟ ಎಂದರೆ ಯಾವುದೇ ಧರ್ಮದ ವಿರುದ್ಧದ ಹೋರಾಟವಲ್ಲ. ಅದು ಅಮಾಯಕರ ಮೇಲೆ ದೌರ್ಜನ್ಯ ಎಸಗುವಂತೆ ಯುವಕರನ್ನು ಪ್ರೇರೇಪಿಸುವಂಥ ಮನಸ್ಥಿತಿಯ ವಿರುದ್ಧದ ಹೋರಾಟವಾಗಿದೆ. ಮಾನವತೆಯ ವಿರುದ್ಧ ಹೋಗು ವವರು, ತಾವು ಯಾವ ಧರ್ಮದ ಹೆಸರಲ್ಲಿ ಹೋರಾಡು ತ್ತಿದ್ದಾರೋ ಆ ಧರ್ಮವನ್ನೇ ಅವಮಾನಿಸಿದಂತೆ. ಯುವ ಕರು ಇಸ್ಲಾಂನ ಮಾನವೀಯತೆಯ ಪರಿಕಲ್ಪನೆಯನ್ನು ಮೈಗೂಡಿಸಿಕೊಳ್ಳಬೇಕು. ಅದರ ಜತೆ ಜತೆಗೇ ಆಧುನಿಕ ತಂತ್ರಜ್ಞಾನವನ್ನೂ ಬಳಸಿಕೊಳ್ಳಬೇಕು,’ ಎಂದರು.

ಇದೇ ವೇಳೆ, ಭಯೋತ್ಪಾದನೆ ನಿರ್ಮೂಲನೆ ನಿಟ್ಟಿನಲ್ಲಿ ಜೋರ್ಡಾನ್‌ ದೊರೆ ಇಟ್ಟಿರುವ ಹೆಜ್ಜೆಯ ಬಗ್ಗೆ ಶ್ಲಾ ಸಿದ ಪ್ರಧಾನಿ ಮೋದಿ, ಭಾರತವೂ ನಿಮ್ಮೊಂದಿಗೆ ಕೈಜೋಡಿಸಲಿದೆ. ಭಾರತವು ಜಗತ್ತಿನ ಎಲ್ಲ ಪ್ರಮುಖ ಧರ್ಮಗಳ ತೊಟ್ಟಿಲು ಇದ್ದಂತೆ. ಭಾರತದ ಪ್ರಜಾಸತ್ತೆಯು ಬಹುತ್ವದ ಸಂಭ್ರಮಾಚರಣೆಯಂತೆ ಎಂದು ಬಣ್ಣಿಸಿದರು. ಇದೇ ಸಂದರ್ಭದಲ್ಲಿ ಮಾತನಾಡಿದ ಜೋರ್ಡಾನ್‌ ದೊರೆ ಅಬ್ದುಲ್ಲಾ 2, “ಈಗ ನಾವು ನೋಡುತ್ತಿರುವ ಭಯೋ ತ್ಪಾದನೆಯ ವಿರುದ್ಧದ ಜಾಗತಿಕ ಸಮರವು ಧರ್ಮಗಳ ನಡುವಿನ ಯುದ್ಧವಲ್ಲ. ಅದು ಎಲ್ಲ ಧರ್ಮಗಳ ಸೌಮ್ಯ ವಾದಿಗಳು ಮತ್ತು ತೀವ್ರವಾದಿಗಳ ನಡುವಿನ ಸಮರವಾ ಗಿದೆ. ಧರ್ಮದ ಹೆಸರಲ್ಲಿ ನಡೆಸುವ ದಾಳಿಯು, ಆ ಧರ್ಮದ ಮೇಲೆಯೇ ದಾಳಿ ನಡೆಸಿದಂತೆ’ ಎಂದು ಹೇಳಿದರು.

12 ಒಪ್ಪಂದಗಳಿಗೆ ಸಹಿ
ಜೋರ್ಡಾನ್‌ ದೊರೆ ಅಬ್ದುಲ್ಲಾ 2 ಮತ್ತು ಪ್ರಧಾನಿ ಮೋದಿ ಅವರು ಗುರುವಾರ ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ಬಳಿಕ ರಕ್ಷಣಾ ಸಹಕಾರ, ಸಮೂಹ ಮಾಧ್ಯಮ, ಆರೋಗ್ಯ, ರಸಗೊಬ್ಬರ ಸೇರಿದಂತೆ ಸುಮಾರು 12 ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಎರಡೂ ದೇಶಗಳ ರಾಜತಾಂತ್ರಿಕ ಅಧಿಕಾರಿ ಗಳು ವೀಸಾ ಇಲ್ಲದೇ ಪರಸ್ಪರರ ದೇಶಗಳಿಗೆ ಪ್ರಯಾಣ ಬೆಳೆ  ಸಲು ಅವಕಾಶ ಕಲ್ಪಿಸುವ ಒಪ್ಪಂದವೂ ಇದರಲ್ಲಿ ಸೇರಿದೆ.

Advertisement

Udayavani is now on Telegram. Click here to join our channel and stay updated with the latest news.

Next